Neer Dose Karnataka
Take a fresh look at your lifestyle.

Rishab Shetty – Rashmika Mandanna : ರಶ್ಮಿಕಾ ರವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ರಿಷಬ್ ಶೆಟ್ಟಿ. ಹೇಳಿದ್ದೇನು ಗೊತ್ತೇ?

Rishab Shetty – Rashmika Mandanna: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಸ್ಟಾರ್ ನಟಿಯಾಗಿ, ನ್ಯಾಷನಲ್ ಕ್ರಶ್ ಆಗಿ ಬೆಳೆದು, ಯಶಸ್ಸು ಪಡೆದಿರಬಹುದು. ಆದರೆ ಅವರಿಗೆ ಇಷ್ಟು ಎತ್ತರಕ್ಕೆ ಬೆಳೆಯಲು ಮೊದಲು ಅವಕಾಶ ಕೊಟ್ಟಿದ್ದು ಕನ್ನಡ ಚಿತ್ರರಂಗ, ಅದರಲ್ಲೂ ರಿಷಬ್ ಶೆಟ್ಟಿ (Rishab Shetty) ಮತ್ತು ರಕ್ಷಿತ್ ಶೆಟ್ಟಿ (Rakshit Shetty) ಅವರು. ಕಿರಿಕ್ ಪಾರ್ಟಿ (Kirik Party) ಸಿನಿಮಾದಲ್ಲಿ ರಶ್ಮಿಕಾ ಅವರಿಗೆ ಅವಕಾಶ ಕೊಡದೆ ಹೋಗಿದ್ದರೆ, ಇಂದು ರಶ್ಮಿಕಾ ಅವರು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ರಶ್ಮಿಕಾ ಅವರು ತಮಗೆ ಅವಕಾಶ ಕೊಟ್ಟ ಮೊದಲ ಚಿತ್ರರಂಗ ಮತ್ತು ಮೊದಲ ಪ್ರೊಡಕ್ಷನ್ ಹೌಸ್ ಅನ್ನೇ ಮರೆತಿರುವ ಹಾಗಿದೆ.

ಒಂದು ಹಿಂದಿ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಆರಂಭದ ದಿನಗಳ ಬಗ್ಗೆ ಪ್ರಶ್ನೆ ಕೇಳಲಾಯಿತು, ಆಗ ಕಾಲೇಜು ದಿನಗಳ ಬಗ್ಗೆ ಮಾತು ಶುರು ಮಾಡಿದ ರಶ್ಮಿಕಾ, ತಾವು ಕಾಂಟೆಸ್ಟ್ ಗೆದ್ದಾಗ, ತಮ್ಮ ಫೋಟೋ ನೋಡಿ, ಆ ಪ್ರೊಡಕ್ಷನ್ ಹೌಸ್ ನವರು ನನ್ನ ಹಿಂದೆ ಬಿದ್ದಿದ್ದರು ಎಂದು ಹೇಳಿದ್ದಾರೆ, ತಮಗೆ ಅವಕಾಶ ಕೊಟ್ಟ ಪ್ರೊಡಕ್ಷನ್ ಹೌಸ್ ನ ಹೆಸರು ಹೇಳುವುದಕ್ಕೂ ಹಿಂಜರಿದರು ರಶ್ಮಿಮ. ಪರಂವ (Paramvah) ಸ್ಟುಡಿಯೋ ಹೆಸರು ಹೇಳದೆ, ಒಂದು ರೀತಿ ಕೈಯಲ್ಲಿ ಸನ್ನೆ ಮಾಡಿದರು ರಶ್ಮಿಕಾ. ಇದು ಹಲವರ ಅಸಮಾಧಾನಕ್ಕೆ ಕಾರಣವಾಯಿತು, ರಶ್ಮಿಕಾ ಅವರು ತಮಗೆ ಅವಕಾಶ ಕೊಟ್ಟವರನ್ನೇ ಮರೆತಿದ್ದಾರೆ ಎಂದು ನೆಟ್ಟಿಗರು ಮಾತನಾಡಲು ಶುರು ಮಾಡಿದರು. ಇದನ್ನು ಓದಿ.. Kannada News: ಪತಿ ರಣಬೀರ್ ಕಪೂರ್ ಗೆ ಶಾಕ್ ಕೊಟ್ಟ ಆಲಿಯಾ: ಹುಟ್ಟಿರುವ ಮಗುವಿಗೆ ಯಾರ ಹೆಸರು ಇಡಲು ಹೊರಟಿದ್ದಾರೆ ಗೊತ್ತೇ? ಆತನಿಗೂ ಅಲಿಯಾ ಯಾಗು ಸಂಬಂಧವೇನು?

ರಶ್ಮಿಕಾ ಅವರ ಈ ಮಾತುಗಳಿಗೆ ಇದೀಗ ರಿಷಬ್ ಶೆಟ್ಟಿ ಅವರು ಟಾಂಗ್ ಕೊಟ್ಟಿದ್ದಾರೆ. ಹಿಂದಿ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಅವರಿಗೆ ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್ (Keerthy Suresh), ಸಾಯಿ ಪಲ್ಲವಿ (Sai Pallavi), ಸಮಂತಾ (Samantha) ಈ ನಾಲ್ವರಲ್ಲಿ ಯಾರ ಜೊತೆ ನಟನೆ ಮಾಡೋದಕ್ಕೆ ಇಷ್ಟ ಪಡ್ತಿರ ಎಂದು ಕೇಳಲಾಯಿತು, ಆಗ ರಿಷಬ್ ಅವರು, (ರಶ್ಮಿಕಾ ಅವರ ಹಾಗೆ ಕೈಸನ್ನೇ ಮಾಡಿ.) ಈ ಥರ ಇಂಗ್ಲಿಷ್ ನಲ್ಲಿ ಮಾತನಾಡೋರು ನನಗೆ ಇಷ್ಟ ಆಗೋದಿಲ್ಲ, ಸಾಯಿಪಲ್ಲವಿ ಅವರು ಮತ್ತು ಸಮಂತಾ ಅವರ ಕೆಲಸಗಳು ನನಗೆ ಇಷ್ಟ ಆಗುತ್ತದೆ..” ಎಂದು ಹೇಳುವ ಮೂಲಕ ರಶ್ಮಿಕಾ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ. ಇದನ್ನು ಓದಿ..Kannada Astrology: ಈ ರಾಶಿಗಳು ಜೀವನದಲ್ಲಿ ಕೋಟ್ಯಧಿಪತಿಯಾಗುವುದು ಖಚಿತ: ಕುಬೇರನೇ ಬಂದು ನಿಮಗೆ ಹಣ ಕೊಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??

Comments are closed.