Neer Dose Karnataka
Take a fresh look at your lifestyle.

Indian Railway: ನಿಮ್ಮ ರೈಲು ತಡವಾದರೆ, ಅಸಮಾಧಾನ ಗೊಳ್ಳಬೇಡಿ, ಸುಲಭವಾಗಿ ಸಂಪೂರ್ಣ ಹಣವನ್ನು ವಾಪಸ್ಸು ಪಡೆಯುದು ಹೇಗೆ ಗೊತ್ತೇ??

Indian Railway: ನಮ್ಮ ದೇಶದಲ್ಲಿ ಪ್ರತಿದಿನ ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಸಾವಿರಾರು. ಈ ಪ್ರಯಾಣ ಮಾಡುವಾಗ ಹಲವು ಸಾರಿ ರೈಲು ತಡವಾಗಿ ಬರುವುದು ಸಾಮಾನ್ಯವಾಗಿದೆ. ನಮ್ಮ ದೇಶದಲ್ಲಿ ರೈಲುಗಳ ಸಂಚಾರ ಹೆಚ್ಚು, ಆದರೆ ರೈಲು ಹಳ್ಳಿಗಳು ಕಡಿಮೆ, ರೈಲು ತಡವಾಗಿ ಬರಲು ಕಾರಣವೇ ಇದು ಎಂದು ಹೇಳಲಾಗುತ್ತದೆ. ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಾಗಿ ಆಗಾಗ ಕೆಲವು ರೂಲ್ಸ್ ಗಳನ್ನು ಬದಲಾಯಿಸುತ್ತಾರೆ, ಇದು ಪ್ರಯಾಣಿಕರಿಗೆ ಅನುಕೂಲ ಆಗಲಿ, ಸುಖಕರವಾಗಿ ಪ್ರಯಾಣ ಮಾಡಲಿ ಎನ್ನುವ ಕಾರಣಕ್ಕೆ ಆಗಿದೆ. ನೀವು ರೈಲಿನಲ್ಲಿ ಪ್ರಯಾಣ ಮಾಡುವಾಗ, ಒಂದು ವೇಳೆ ರೈಲು ತಡವಾಗಿ ಬಂದರೆ, ನಿಮ್ಮ ಟಿಕೆಟ್ ಹಣವನ್ನು ನೀವು ಹಿಂದಿರುಗಿ ಪಡೆಯಬಹುದು, ಈ ರೀತಿಯ ಒಂದು ನಿಯಮ ಇಂಡಿಯನ್ ರೈಲ್ವೆಯಲ್ಲಿದೆ. ಆದರೆ ಹೆಚ್ಚಿನ ಜನರಿಗೆ ಈ ರೂಲ್ಸ್ ಬಗ್ಗೆ ಗೊತ್ತಿರದ ಕಾರಣ, ಹಣ ಹಿಂದಿರುಗಿ ಪಡೆಯಲು ಆಗಿರುವುದಿಲ್ಲ. ಈ ವಿಚಾರದ ಬಗ್ಗೆ ಇಂದು ನಿಮಗೆ ಹೆಚ್ಚಾಗಿ ತಿಳಿಸಿಕೊಡುತ್ತೇವೆ.

ಭಾರತೀಯ ರೈಲ್ವೆ ನಿಯಮದ ಅನುಸಾರ, ಒಂದು ವೇಳೆ ನೀವು ಪ್ರಯಾಣ ಮಾಡಬೇಕಿರುವ ರೈಲು ಮೂರು ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ತಡವಾಗಿ ಬಂದರೆ, ನೀವು ನಿಮ್ಮ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಬಹುದು ಹಾಗು ನೀವು ಟಿಕೆಟ್ ಗಾಗಿ ನೀಡಿರುವ ಹಣವನ್ನು ಹಿಂಪಡೆಯಬಹುದು. ಮೊದಲಿಗೆ ಈ ನಿಯಮ ಕೌಂಟರ್ ನಲ್ಲಿ ಪಡೆಯುವ ಟಿಕೆಟ್ ಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಲಾಗಿತ್ತು, ಆದರೆ ಈಗ ಹಾಗಿಲ್ಲ, ಆನ್ಲೈನ್ ನಲ್ಲಿ ಖರೀದಿ ಮಾಡುವ ಟಿಕೆಟ್ ಗಳಿಗು ಈ ನಿಯಮ ಅನ್ವಯಿಸುತ್ತದೆ. ಟಿಕೆಟ್ ಹಣವನ್ನು ಹಿಂಪಡೆಯಲು ಪ್ರಯಾಣಿಕರು TDR ಸಲ್ಲಿಕೆ ಮಾಡಬೇಕು.. ಇದನ್ನು ಓದಿ.. Post Office: ಕೇವಲ ಜಸ್ಟ್ 95 ರೂಪಾಯಿ ಗಳನ್ನೂ ಉಳಿಸುವ ಮೂಲಕ ಅಂಚೆ ಕಚೇರಿಯಲ್ಲಿ 14 ಲಕ್ಷ ಉಳಿಸಬಹುದು. ಹೇಗೆ ಗೊತ್ತೇ??

TDR ನಲ್ಲಿ ಸಲ್ಲಿಕೆ ಮಾಡುವುದು ಕಷ್ಟದ ವಿಚಾರ ಅಲ್ಲವೇ ಅಲ್ಲ, ಇದು ಬಹಳ ಸುಲಭವಾಗಿ ಮಾಡಬಹುದಾದ ಕೆಲಸ ಆಗಿದೆ. TDR ಸಲ್ಲಿಕೆ ಮಾಡಲು ನೀವು ಮೊದಲಿಗೆ IRCTC ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ಅದಕ್ಕೆ ಲಾಗಿನ್ ಆಗಿರಬೇಕು. ಲಾಗಿನ್ ಮಾಡಿದ ನಂತರ My Accounts ಆಯ್ಕೆಯನ್ನು Select ಮಾಡಿ, ಇದರಲ್ಲಿ ನೀವು Transaction ಎನ್ನುವ ಆಯ್ಕೆಯನ್ನು Select ಮಾಡಿ, ನಂತರ File TDR ಎನ್ನುವ ಆಯ್ಕೆಯನ್ನು ಆರಿಸಿ. TDR File ಮಾಡಿದ ನಂತರ ನೀವು ಟಿಕೆಟ್ ಹಣವನ್ನು ಹಿಂಪಡೆಯುತ್ತೀರಿ.. ಇದನ್ನು ಓದಿ..Kannada Astrology: ಅಪ್ಪಿ ತಪ್ಪಿನೂ ಏನೆ ಬಂದರು ಈ ತಪ್ಪು ಮಾಡಬೇಡಿ, ಇರುವ ಹಣವೆಲ್ಲ ಕಳೆದುಕೊಂಡು ಬೀದಿಗೆ ಬರ್ತೀರಾ.

Comments are closed.