Neer Dose Karnataka
Take a fresh look at your lifestyle.

Airtel: ಗ್ರಾಹಕರನ್ನು ಸೆಳೆಯಲು ಭರ್ಜರಿ ಪ್ಲಾನ್ ಮಾಡಿದ ಏರ್ಟೆಲ್: ಏರ್ಟೆಲ್ ನಿಂದ 8 ಲಕ್ಷ ಸಾಲ ಕೂಡ ಪಡೆಯಬಹುದು. ಹೇಗೆ ಗೊತ್ತೇ??

Airtel: ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ಏರ್ಟೆಲ್ ಈಗ ಸಿಮ್ ಕಾರ್ಡ್, ರೀಚಾರ್ಜ್ ಜೊತೆಗೆ ಹೊಸದೊಂದು ಸೇವೆಯನ್ನು ಗ್ರಾಹಕರಿಗೆ ನೀಡಲಿದೆ. ಅದೇನೆಂದರೆ ಇನ್ಮುಂದೆ ನೀವು ಏರ್ಟೆಲ್ ಇಂದ ಸಾಲ ಪಡೆಯಬಹುದು. ಹೌದು, ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಇಂದ ನೀವು, ಸುಮಾರು 8 ಲಕ್ಷ ರೂಪಾಯಿಯವರೆಗೂ ಸಾಲ ಪಡೆಯಬಹುದು. ಇದಕ್ಕಾಗಿ ನೀವು ಏರ್ಟೆಲ್ ಗ್ರಾಹಕರಾಗಿರಬೇಕು. ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಸಾಲ ಪಡೆಯಬಹುದು. ಕನಿಷ್ಠ 10 ಸಾವಿರ ರೂಪಾಯಿ ಸಾಲ ನಿಮಗೆ ಸಿಗುತ್ತದೆ.

ಇದನ್ನು ನೀವು ಕಡಿಮೆ ಅವಧಿವಲ್ಲಿ ಇಎಂಐ ಮೂಲಕ ಮರುಪಾವತಿ ಮಾಡಬಹುದು. ಸಾಲಕ್ಕೆ ಅರ್ಜಿ ಹಾಕಿದ, ಕೇವಲ 24 ಗಂಟೆಯ ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ. ಇಲ್ಲಿ ಏರ್ಟೆಲ್ ಸಂಸ್ಥೆ ನಿಮಗೆ ಸಾಲ ನೀಡುತ್ತಿಲ್ಲ, ಏರ್ಟೆಲ್ ಮಧ್ಯವರ್ತಿಯಾಗಿ ಮಾತ್ರ ಕೆಲಸ ಮಾಡುತ್ತದೆ. ಏರ್ಟೆಲ್ ಸಂಸ್ಥೆ ಬೇರೆ ಫೈನಾನ್ಸ್ ಸಂಸ್ಥೆಗಳ ಜೊತೆಗೆ ಸಹಭಾಗಿತ್ವ ವಹಿಸಿಕೊಂಡಿದ್ದು, ಅವುಗಳ ಮೂಲಕ ನಿಮಗೆ ಸಾಲ ಸಿಗುತ್ತದೆ. ಏರ್ಟೆಲ್ ಡಿಎಂಐ ಫೈನಾನ್ಸ್, ಮನಿ ವ್ಯೂ, ಮತ್ತು ಐ.ಡಿ.ಎಫ್.ಸಿ ಫಸ್ಟ್ ಬ್ಯಾಂಕ್ ಇಂಥಹ ಸಂಸ್ಥೆಗಳ ಮೂಲಕ ಏರ್ಟೆಲ್ ಸಂಸ್ಥೆ ತಮ್ಮ ಗ್ರಾಹಕರಿಗೆ ಸಾಲ ಒದಗಿಸುತ್ತದೆ. ಈ ರೀತಿ ಸಾಲ ಪಡೆಯಲು ಮೊದಲು ನೀವು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಬೇಕು. ಇದನ್ನು ಓದಿ..Kannada News: ಆ ರೀತಿಯ ದೃಶ್ಯಗಳನ್ನು ಮಾಡಲು ಮೂಡ್ ಬರಲು ಹೀರೋಗಳು ಏನು ಮಾಡುತ್ತಾರಂತೆ ಗೊತ್ತೇ? ಮತ್ತೊಂದು ಸೀಕ್ರೆಟ್ ಹೊರಹಾಕಿದ ತಮನ್ನಾ.

ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಗೆ ಓಟಿಪಿ ಬಳಸಿ ಲಾಗಿನ್ ಆಗಿ, ಇಲ್ಲಿ ನಿಮಗೆ ಎಲ್ಲಾ ಆಯ್ಕೆಗಳು ಸಿಗುತ್ತದೆ. ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಷನ್ ನಲ್ಲಿ ಶಾಪ್ ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ, ಇದರಲ್ಲಿ, ಫೈನಾನ್ಶಿಯಲ್ ಸರ್ವೀಸಸ್ ಎನ್ನುವ ಮತ್ತೊಂದು ಆಯ್ಕೆ ಬರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ, ಇಲ್ಲಿ ಹಲವು ಆಯ್ಕೆಗಳು ಇರುತ್ತದೆ, ಅದರಲ್ಲಿ ಪರ್ಸನಲ್ ಲೋನ್ ಆಯ್ಕೆ ಕ್ಲಿಕ್ ಮಾಡಿ. ಈಗ ಬರುವ ಹೊಸ ಪೇಜ್ ನಲ್ಲಿ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಇಲ್ಲಿ ನೀವು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಡೀಟೇಲ್ಸ್ ನೀಡಬೇಕು. ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇರುವವರಿಗೆ ಸಾಲ ಇನ್ನಷ್ಟು ಬೇಗ ಸಿಗುತ್ತದೆ. ಇದನ್ನು ಓದಿ.. Kannada News: ಕೆಂಡಸಂಪಿಗೆಯಾಗಿ ಮಿಂಚುತ್ತಿರುವ ಸುಮನಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ, ಇಷ್ಟು ವಯಸ್ಸು ಆಗಿದ್ಯಾ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Comments are closed.