Kannada News: ದಿಡೀರ್ ಎಂದು ಬಂದರೂ ಆನ್ಲೈನ್ ನಲ್ಲಿಯೇ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ಕಲೆಕ್ಷನ್ ಕೇಳಿದರೆ, ಕೈಯೆಲ್ಲ ನಡುಗುತ್ತದೆ. ಎಷ್ಟು ಗೊತ್ತೇ??
Kannada News: ಡಿಬಾಸ್ ದರ್ಶನ್ (Darshan) ಅವರ ಕ್ರಾಂತಿ (Kranthi) ಸಿನಿಮಾ ಜನವರಿ 26ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಸಿನಿಮಾದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸುತ್ತಿದ್ದು, ಕ್ರಾಂತಿ ಸಿನಿಮಾ ಬಿಡುಗಡೆ ಆಗಲು ಉಳಿದಿರುವುದು ಇನ್ನು ಎರಡೇ ದಿನಗಳು. ಅಭಿಮಾನಿಗಳು ಸಿನಿಮಾ ನೋಡಲು ಕಾದು ಕುಳಿತಿದ್ದು, ಭಾನುವಾರದಿಂದ ಅಡ್ವಾನ್ಸ್ ಬುಕಿಂಗ್ ಶುರುವಾಗಿ, ದಾಖಲೆಯ ಮೊತ್ತದಲ್ಲಿ ಟಿಕೆಟ್ ಮಾರಾಟ ಆಗಿದೆ. ಹಾಗಿದ್ರೆ ಸಿನಿಮಾ ಬಿಡುಗಡೆಗಿಂತ ಮೊದಲೇ ಭಾನುವಾರ ಅಡ್ವಾನ್ಸ್ ಟಿಕೆಟ್ ಬುಕಿಂಗ್ ನಲ್ಲೇ ಕ್ರಾಂತಿ ಗಳಿಸಿರೋದೆಷ್ಟು ಎಂದು ತಿಳಿಸುತ್ತೇವೆ ನೋಡಿ..
ಭಾನುವಾರ ಬೆಳಗ್ಗೆ ಇಂದ ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಎರಡು ರೀತಿಯಲ್ಲಿ ಟಿಕೆಟ್ ಬುಕಿಂಗ್ ಶುರುವಾಗಿದ್ದು, ಅಭಿಮಾನಿಗಳು ನಾ ಮುಂದು ತಾ ಮುಂದು ಎಂದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಬುಕಿಂಗ್ ಶುರುವಾಗಿ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ವೀರೇಶ್ ಹಾಗೂ ಅನುಪಮಾ ಚಿತ್ರಮಂದಿರದಲ್ಲಿ ಮೊದಲ ಮೂರು ಶೋಗಳ ಟಿಕೆಟ್ ಗಳು ಖಾಲಿ ಆಗಿವೆ..ಭಾನುವಾರ ಬೆಳಗ್ಗೆ ಶುರುವಾಗಿರುವ ಅಡ್ವಾನ್ಸ್ ಬುಕಿಂಗ್ ಇಂದ ಒಂದು ದಿನದಲ್ಲಿ ಸುಮಾರು 82,760 ಟಿಕೆಟ್ಸ್ ಮಾರಾಟವಾಗಿದ್ದು, ಇದರಿಂದ ಬರೋಬ್ಬರಿ 2.7 ಕೋಟಿ ರೂಪಾಯಿಗಳು ಗಳಿಕೆ ಆಗಿದೆ. ಫಸ್ಟ್ ಡೇ ಕಲೆಕ್ಷನ್ ಗೆ ಈಗಾಗಲೇ 2ಕೋಟಿ ಸೇರ್ಪಡೆ ಆಗಿದೆ. ಇದನ್ನು ಓದಿ..Kannada News: ಮಗಳ ವಯಸ್ಸಿನ ಹುಡುಗಿಯನ್ನು ಮೂರನೇ ಮದುವೆಯಾದ ಮೇಲೆ, ಮೊದಲ ಹೆಂಡತಿ ಮಗಳನ್ನು ಕಂಡು ಪ್ರಕಾಶ್ ಶಾಕ್ ಆಗಿದ್ದು ಯಾಕೆ ಗೊತ್ತೇ??

ಬಹುತೇಕ ಎಲ್ಲಾ ಥಿಯೇಟರ್ ಗಳಲ್ಲಿ ಈಗಾಗಲೇ ಮೊದಲ ದಿನದ ಮಾರ್ನಿಂಗ್ ಶೋ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಬೆಂಗಳೂರಿನಲ್ಲಿ ಮೊದಲ ದಿನ 480 ಶೋಗಳು ನಡೆಯಲಿದ್ದು, ಅದರಲ್ಲಿ 22 ಶೋಗಳು ಸೋಲ್ಡ್ ಔಟ್ ಆಗಿ, 95 ಶೋಗಳ ಟಿಕೆಟ್ಸ್ ಫಾಸ್ಟ್ ಫಿಲ್ಲಿಂಗ್ ಇದೆ. ಮೈಸೂರಿನಲ್ಲಿ ಮೊದಲ ದಿನ 128 ಶೋಗಳು ಇರಲಿದ್ದು, ಅದರಲ್ಲಿ 12 ಶೋಗಳು ಸೋಲ್ಡ್ ಔಟ್ ಆಗಿದೆ, 67 ಶೋಗಳು ಫಾಸ್ಟ್ ಫಿಲ್ಲಿಂಗ್ ಇದೆ. ಬೆಳಗ್ಗೆ 6 ಗಂಟೆ ಇಂದಲೇ ರಾಜ್ಯದ ಎಲ್ಲೆಡೆ ಶೋಗಳು ಶುರುವಾಗುತ್ತಿದೆ. ಒಟ್ಟಿನಲ್ಲಿ ಡಿಬಾಸ್ ಅಭಿಮಾನಿಗಳು ಥಿಯೇಟರ್ ನಲ್ಲಿ ಹಬ್ಬ ಮಾಡಲು ಕಾಯುತ್ತಿದ್ದಾರೆ. ಇದನ್ನು ಓದಿ.. Kannada News: ಮೊಬೈಲ್ ಆನ್ ಮಾಡಿದರೆ ಸಾಕು, ಈ ಹುಡುಗಿಯೇ ಕಾಣಿಸುತ್ತಾರೆ, ಫೋಟೋ, ಡಾನ್ಸ್ ನೋಡಿದರೆ, ಮೆಂಟಲ್ ಬರುತ್ತದೆ. ಆ ಸುಂದರಿ ಯಾರು ಗೊತ್ತೇ??