Kannada News: ಹಾಸನದಲ್ಲಿ ಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್: ಟಿಕೆಟ್ ಗಾಗಿ ಕಿತ್ತಾಡುತ್ತಿರುವಾಗ ನಡೆದದ್ದು ಏನು ಗೊತ್ತೇ??
Kannada News: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಟಿಕೆಟ್ ಗಾಗಿ ಕದನ, ಟಿಕೆಟ್ ಪಡೆದಿರುವವರು ಪ್ರಚಾರ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದರ ನಡುವೆ ಜೆಡಿಎಸ್ ಪಕ್ಷಕ್ಕೆ ಮಾತ್ರ ಒಂದರ ನಂತರ ಒಂದು ಶಾಕ್ ಮೇಲೆ ಶಾಕ್ ಸಿಗುತ್ತಲೇ ಇದೆ. ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷ ಬದಲಾವಣೆ ಮಾಡುವ ಘಟನೆಗಳು ನಡೆಯುತ್ತಲೇ ಇದೆ. ಈಗ ಏನಾಗಿದೆ ಎಂದು ನೋಡುವುದಾದರೆ..ಜೆಡಿಎಸ್ ಮಾಜಿ ಸವಿವ ಎ. ಮಂಜು ಅವರು ಪಕ್ಷದಿಂದ ಹೊರಹೋದಮೇಲೆ, ಎ.ಟಿ. ರಾಮಸ್ವಾಮಿ ಅವರು ಜೆಡಿಎಸ್ ನ ಮುಖಂಡರ ವಿರುದ್ಧ ಕೋಪಗೊಂಡಿದ್ದರು. ಶಿವಲಿಂಗೇಗೌಡ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲು ಉಳಿದಿರುವುದು ಕೆಲವೇ ದಿನಗಳು. ಹಾಗೆಯೇ ಅರಕಲಗೂಡಿನ ಈಗಿನ ಶಾಸಕ ಎ.ಟಿ. ರಾಮಸ್ವಾಮಿ ಅವರು ಕಾಂಗ್ರೆಸ್ ಸೇರುತ್ತಾರಾ ಅಥವಾ ಬಿಜೆಪಿ ಸೇರುತ್ತಾರಾ ಎನ್ನುವ ಗೊಂದಲ ಇದೆ.
ಹೆಚ್.ಡಿ.ರೇವಣ್ಣ ಅವರು ಹೊಳೆನರಸೀಪುರ ಕ್ಷೇತ್ರದಲ್ಲೂ ಇದೇ ಕಥೆ ಆಗಿದೆ. ಹೊಳೆನರಸೀಪುರ ಪುರಸಭೆ ಈ ಹಿಂದಿನ ಅಧ್ಯಕ್ಷ ಪುಟ್ಟರಾಜು ಮತ್ತು ಸದಸ್ಯರಾದ ಗಂಗಾಧರ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಸೇರಬಹುದು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಈಗಿನ ಹಾಲಿ ಪುರಸಭೆ ಸದಸ್ಯರಲ್ಲಿ ಕೆಲವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗುತ್ತಿದ್ದು, ಇದು ಜೆಡಿಎಸ್ ನಾಯಕರ ಟೆನ್ಷನ್ ಹೆಚ್ಚಿಸಿದೆ. ರೇವಣ್ಣ ಅವರು ಇಲ್ಲಿ ಹಿಡಿತ ಸಾಧಿಸಿದ್ದಾರೆ, ಹಾಗಿದ್ದರೂ ಪಕ್ಷದವರು ಹೊರಹೋಗುತ್ತಿರುವುದು ಜೆಡಿಎಸ್ ಗೆ ದೊಡ್ಡ ಪೆಟ್ಟು ನೀಡಿದೆ. ಇನ್ನು ಅರಸೀಕೆರೆ ಇಂದ ಬರೋಬ್ಬರಿ ಮೂರು ಸಾರಿ ಜೆಡಿಎಸ್ ಪಕ್ಷದಿಂದ ಗೆದ್ದಿದ್ದ ಕೆ.ಎಂ.ಶಿವಲಿಂಗೇಗೌಡ ಅವರು ಕಾಂಗ್ರೆಸ್ ಗೆ ಹೋಗುತ್ತಾರೆ ಎನ್ನಲಾಗುತ್ತಿದೆ. ಇದನ್ನು ಓದಿ..Kannada News: ಮದುವೆ ಆದ ಬಳಿಕವೂ ನಟ ಸುಮನ್ ಗೆ ಕಾಟ ತಪ್ಪಲಿಲ್ಲ. ಆತನಿಗಾಗಿ, ಆ ಪೊಲೀಸ್ ಮಗಳು ಏನು ಮಾಡಿದ್ದಳು ಗೊತ್ತೇ?? ಯಪ್ಪಾ ಇಂಗು ಇರ್ತಾರ
ಇವರಿಗೆ ಪ್ರತ್ಯುತ್ತರವಾಗಿ ಜೆಡಿಎಸ್ ಪಕ್ಷವು ಫೆಬ್ರವರಿ 9ರಂದು ಅರಸೀಕೆರೆಯಲ್ಲಿ ಹೊಸ ಆಫೀಸ್ ಉದ್ಘಾಟನೆ ಮಾಡಲಿದ್ದಾರೆ, ಶಿವಲಿಂಗೇಗೌಡ ಅವರಿಗೆ ತಮ್ಮ ನಿರ್ಧಾರ ತಿಳಿಸಲು ಫೆಬ್ರವರಿ 12ರ ವರೆಗು ಸಮಯ ನೀಡಿದ್ದಾರೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು, ಸಂಸದ ಪ್ರಜ್ವಲ್ ರೇವಣ್ಣ ಅವರು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಈ ಟೆನ್ಷನ್ ಒಂದು ಕಡೆಯಾದರೆ, ಮತ್ತೊಂದು ಕಡೆ ಹಾಸನದಲ್ಲಿ ವಿಧಾನಸಭೆಯ ಟಿಕೆಟ್ ಪಡೆಯುತ್ತಾರೆ ಎನ್ನಲಾಗಿರುವ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅವರು ಜೋರಾಗಿ ಪ್ರಚಾರ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮತ್ತೊಂದೆಡೆ ಇದೇ ಕ್ಷೇತ್ರದಿಂದ ಟಿಕೆಟ್ ಬೇಕು ಎನ್ನುತ್ತಿರುವ ಭವಾನಿ ರೇವಣ್ಣ ಸುಮ್ಮನಿದ್ದಾರೆ. ಇದೆಲ್ಲವು ಒಂದು ರೀತಿ ನಿಗೂಢವಾಗಿ ಸಾಗುತ್ತಿದೆ. ಇದನ್ನು ಓದಿ..Kannada News: ಮದುವೆ ಏನೋ ಆಯಿತು. ಈಗ ಕಿಯರಾ, ಸಿದ್ದಾರ್ಥ್ ಒಟ್ಟಿಗೆ ಇರುವ ಮನೆಯ ಬೆಲೆ ಕೇಳಿದರೆ, ಒಮ್ಮೆ ಆದ್ರೂ ಆ ಮನೆಯಲ್ಲಿ ಇರಬೇಕು ಅಂತೀರಾ. ಎಷ್ಟು ಕೋಟಿ ಗೊತ್ತೇ??
Comments are closed.