Kannada News: ತಬ್ಬಲಿ ಮಗು ರಜೆಗೆಂದು ಚಿಕ್ಕಪ್ಪನ ಮನೆಗೆ ಹೋದರೆ, ವಾಪಸ್ಸು ಹಾಸ್ಟೆಲ್ ಗೆ ಹೋಗುವಷ್ಟರಲ್ಲಿ ಏನಾಗಿ ಹೋಗಿತ್ತು ಗೊತ್ತೇ??
Kannada News: ಪ್ರಪಂಚದಲ್ಲಿ ಒಂದು ಹೆಣ್ಣಿಗೆ ಏನೆನೆಲ್ಲಾ ನಡೆಯುತ್ತದೆ ಎನ್ನುವುದನ್ನು ತಿಳಿದರೆ ನಿಜಕ್ಕೂ ಶಾಕ್ ಆಗುತ್ತದೆ. ಯಾವುದೇ ವಯಸ್ಸಾಗಿದ್ದರು, ಮಕ್ಕಳಿಂದ ಹಿರಿಯರ ವರೆಗು ಹೆಣ್ಣಿಗೆ ಭದ್ರತೆ ಅಂತೂ ಇಲ್ಲ. ಮಧ್ಯಪ್ರದೇಶದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. 13 ವರ್ಷದ ಬಾಲಕಿ ರಜೆಗಾಗಿ ಚಿಕ್ಕಪ್ಪನ ಮನೆಗೆ ಹೋದಾಗ, ಆಕೆಯ ಚಿಕ್ಕಪ್ಪನ ಮಗನೇ ತನಗೆ ಇಷ್ಟಬಂದ ಹಾಗೆ ಒಂದು ತಿಂಗಳ ಕಾಲ ಆಕೆಯನ್ನು ಬಳಸಿಕೊಂಡು ಆಸೆಗಳನ್ನು ತೀರಿಸಿಕೊಂಡಿದ್ದಾನೆ. ಈ ಘಟನೆಯ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತಕ್ಷಣವೇ ಕ್ರಮ ಕೈಗೊಂಡು 40 ವರ್ಷದ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೌನ್ಸಿಲಿಂಗ್ ನಡೆಸುವಾಗ ಆ ಹುಡುಗಿಯು ಸತತವಾಗಿ ಒಂದು ತಿಂಗಳು ತನಗೆ ಈ ರೀತಿ ಮಾಡಿದರು ಎಂದು ತಿಳಿಸಿದ್ದಾಳೆ. ಈ ಬಾಲಕಿ 7ನೇ ತರಗತಿಯಲ್ಲಿ ಓದುತ್ತಿದ್ದು, ಆಕೆಗೆ ತಂದೆ ತಾಯಿ ಇಲ್ಲ ಎಂದು ಹೇಳಿದ್ದಾಳೆ. ಆಕೆಯ ಅಕ್ಕನ ಮದುವೆ ನಡೆದ ಬಳಿಕ ಅಣ್ಣ ಹಾಸ್ಟೆಲ್ ಕಳಿಸಿ ಓದಿಸುತ್ತಿದ್ದ, ಎರಡು ತಿಂಗಳ ಹಿಂದೆ ರಜೆಗಾಗಿ ಚಿಕ್ಕಮ್ಮನ ಮನೆಗೆ ಬಂದಾಗಜ್ ಅವರ ಮಗ ಒಂದು ತಿಂಗಳ ಕಾಲ ಪ್ರತಿದಿನ ಇದೇ ಕೆಲಸ ಮಾಡಿದ್ದಾನೆ. ಯಾವಾಗ ಈ ಬಾಲಕಿ ಇಂಥಹ ಕೆಲಸಕ್ಕೆ ವಿರೋಧ ನಡೆಸಿದಳೋ, ಆಗಿನಿಂದ ಆಕೆಯ ಮೇಲೆ ತೊಂದರೆ ಮಾಡಿ, ಬೆದರಿಕೆ ಕೂಡ ಹಾಕಿದ್ದಾರೆ. ಹಾಗಾಗಿ ಈ ವಿಚಾರವನ್ನು ಮತ್ತೊಬ್ಬರಿಗೆ ಹೇಳಲು ಭಯಪಟ್ಟು ಆಕೆ ಹಾಸ್ಟೆಲ್ ಗೆ ಹೋಗಿದ್ದಾಳೆ. ಇದನ್ನು ಓದಿ..Kannada News: ಕನ್ನಡತಿಯೇ ಬೇಕು ಎಂದು ಹುಡುಕಿಕೊಂಡು ಬಂದ ತೆಲುಗಿನ ನಟ ಪವನ್ ಕಲ್ಯಾಣ್; ಅವಕಾಶ ಪಡೆದ ಅದೃಷ್ಟವಂತೆ ಯಾರು ಗೊತ್ತೇ??

ಒಮ್ಮೆ ಹಾಸ್ಟೆಲ್ ನಲ್ಲಿ ಎಲ್ಲಾ ಹುಡುಗಿಯರ ಹೆಲ್ತ್ ಚೆಕಪ್ ನಡೆಸುವಾಗ, ಈಕೆಗು ಮಾಡಿದಾಗ, 3 ತಿಂಗಳ ಗರ್ಭಿಣಿ ಎಂದು ಗೊತ್ತಾಗಿದೆ. ಹಾಸ್ಟೆಲ್ ವಾರ್ಡನ್ ತಕ್ಷಣವೇ ಮಕ್ಕಳ ಕಲ್ಯಾಣ ಸಮಿತಿಗೆ ಈ ವಿಚಾರ ತಿಳಿಸಿದ್ದಾರೆ. ಆಗ ಕೌನ್ಸೆಲಿಂಗ್ ನಡೆಸಿದಾಗ, ಈ ವಿಚಾರ ಮತ್ತು ತನಗೆ ಆದ ಕಷ್ಟಗಳ ಬಗ್ಗೆ ತಿಳಿಸಿದ್ದಾಳೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಈ ಹುಡುಗಿ ಇನ್ನು ಅಪ್ರಾಪ್ತೆ ಆಗಿರುವುದರಿಂದ ಮುಂದಿನ ಕಾರ್ಯಕ್ಕಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಭವಿಷ್ಯ ಮುಖ್ಯ ಆಗಿರುವುದರಿಂದ ಆಕೆಯನ್ನು ಪುನರ್ವಸತಿ ಸೇರಿಸಿ, ಈಗ ಆಕೆಯನ್ನು ಭೋಪಾಲ್ ನ ಬಾಲಿಕ ಸಂಪ್ರೇಕ್ಷನ್ ಗ್ರಿಹ್ ಗೆ ಕಳಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಈಕೆಯ ಅಂದ ನೋಡಿ ಫಿದಾ ಆಗುವರು ಎಲ್ಲಾ, ಅದಕ್ಕಾಗಿಯೇ ಸಿನೆಮಾಗಳ ನಂತರ ಮತ್ತೊಂದು ರೀತಿಯಲ್ಲಿ ಡಿಮ್ಯಾಂಡ್. ಹನಿ ರೋಸ್ ಕಥೆ ಏನಾಗಿದೆ ಗೊತ್ತೇ??