Neer Dose Karnataka
Take a fresh look at your lifestyle.

Film News: ಧ್ರುವ ಸರ್ಜಾ ರವರ KD ಸಿನೆಮಾಗಿ ಬಾಲಿವುಡ್ ನಟಿಯನ್ನು ಕರೆತರಲು ಮುಂದಾದ ತಂಡ: ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ??

458

Film News: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮತ್ತು ನಿರ್ದೇಶಕ ಜೋಗಿ ಪ್ರೇಮ್ (Jogi Prem) ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ KD . ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಧ್ರುವ ಸರ್ಜಾ ಅವರು ಅಭಿನಯಿಸುತ್ತಿರುವ 7ನೇ ಸಿನಿಮಾ ಆಗಿದೆ. KD ಸಿನಿಮಾ ಈಗಾಗಲೇ ಟೈಟಲ್ ಟೀಸರ್ ಇಂದಲೇ ಭಾರಿ ಸುದ್ದಿ ಮಾಡಿತ್ತು, ಇದೊಂದು 70ರ ದಶಕದಲ್ಲಿ ನಡೆಯುವ ಕಥೆ ಆಗಿದೆ. ಧ್ರುವ ಸರ್ಜಾ ಅವರನ್ನು ಬಹಳ ವಿಭಿನ್ನವಾಗಿ ತೋರಿಸಲಾಗುತ್ತದೆ ಎಂದು ಈಗಾಗಲೇ ಗೊತ್ತಾಗಿದೆ.

KD ಸಿನಿಮಾದಲ್ಲಿ ಈಗಾಗಲೇ ನಟ ರವಿಚಂದ್ರನ್ (Ravichandran), ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರು ನಟಿಸುವುದು ಪಕ್ಕಾ ಆಗಿದೆ. ಕೆಜಿಎಫ್2 ನಂತರ ಸಂಜಯ್ ದತ್ ಅವರು ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರೇಮ್ ಅವರ ಸಿನಿಮಾ ಎಂದರೆ ಅಲ್ಲಿ ದೊಡ್ಡ ತಾರಾಗಣ ಇದ್ದೇ ಇರುತ್ತದೆ. ಈಗ KD ಸಿನಿಮಾವನ್ನು ಇನ್ನು ದೊಡ್ಡದಾಗಿ ಪ್ಲಾನ್ ಮಾಡಲಾಗುತ್ತಿದೆ. ಈಗಾಗಲೇ ಆಯ್ಕೆ ಆಗಿರುವ ದೊಡ್ಡ ಕಲಾವಿದರ ಜೊತೆಗೆ, ಬಾಲಿವುಡ್ ಬೆಡಗಿ ಕನ್ನಡ ನಾಡಿನ ಹುಡುಗಿ ಶಿಲ್ಪಾ ಶೆಟ್ಟಿ ಅವರನ್ನು KD ಸಿನಿಮಾ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಶಿಲ್ಪಾ ಶೆಟ್ಟಿ ಅವರು ಈಗಾಗಲೇ ಮೂರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನು ಓದಿ..Kannada News: ಈಕೆಯ ಅಂದ ನೋಡಿ ಫಿದಾ ಆಗುವರು ಎಲ್ಲಾ, ಅದಕ್ಕಾಗಿಯೇ ಸಿನೆಮಾಗಳ ನಂತರ ಮತ್ತೊಂದು ರೀತಿಯಲ್ಲಿ ಡಿಮ್ಯಾಂಡ್. ಹನಿ ರೋಸ್ ಕಥೆ ಏನಾಗಿದೆ ಗೊತ್ತೇ??

KD ಅವರಿಗೆ ನಾಲ್ಕನೇ ಕನ್ನಡ ಸಿನಿಮಾ ಆಗಲಿದೆ, ಶಿಲ್ಪಾ ಶೆಟ್ಟಿ ಅವರು KD ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ, ಆದರೆ ಮೂಲಗಳ ಪ್ರಕಾರ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ ಕೂಡ ಈಗ ಬಿಡುಗಡೆಗೆ ಸಿದ್ಧವಾಗಿದ್ದು, ಚುನಾವಣೆ ಬಳಿಕ ಮಾರ್ಟಿನ್ ತೆರೆಕಾಣಬಹುದು ಎನ್ನಲಾಗುತ್ತಿದೆ. KD ಸಿನಿಮಾ ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷ ತೆರೆಕಾಣಬಹುದು ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಮೂಲಕ ಧ್ರುವ ಅವರ ಹೆಸರು ಇನ್ನು ದೊಡ್ಡದಾಗುವುದು ಖಂಡಿತ. ಇದನ್ನು ಓದಿ..Kannada News: ಕನ್ನಡತಿಯೇ ಬೇಕು ಎಂದು ಹುಡುಕಿಕೊಂಡು ಬಂದ ತೆಲುಗಿನ ನಟ ಪವನ್ ಕಲ್ಯಾಣ್; ಅವಕಾಶ ಪಡೆದ ಅದೃಷ್ಟವಂತೆ ಯಾರು ಗೊತ್ತೇ??

Leave A Reply

Your email address will not be published.