Neer Dose Karnataka
Take a fresh look at your lifestyle.

Kannada Story: ಆಸೆಗೆ ಬಿದ್ದ, ಹೆಂಡತಿಗಾಗಿ ಅಮ್ಮನನ್ನು ವೃದ್ರಾಶ್ರಮಕ್ಕೆ ಸೇರಿಸಿ ಬಿಟ್ಟು ಬಂದ: ಕೊನೆ ಕ್ಷಣದಲ್ಲಿ ಅಮ್ಮ ಮಾಡಿದ್ದೇನು ಗೊತ್ತೆ?? ಸೊಸೆ ತಲೆ ತಗ್ಗಿಸಿದ್ದು ಯಾಕೆ ಗೊತ್ತೆ?

Kannada Story: ಪ್ರಪಂಚದಲ್ಲಿ ಯಾರಿಂದ ಏನೇ ಸಮಸ್ಯೆ ತೊಂದರೆ ಆದರೂ ಕೊಡ, ತಾಯಿ ಎನ್ನುವ ಆ ಒಂದು ಜೀವ ಮಾತ್ರ ನಿಮಗಾಗಿ ಮಿಡಿಯುತ್ತದೆ. ತಾಯಿ ತನ್ನ ಮಕ್ಕಳಿಗೆ ಏನೆಲ್ಲಾ ತ್ಯಾಗ ಮಾಡುತ್ತಾರೆ ಎನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮ ನಡುವಲ್ಲೇ ಇದೆ. ಅಂಥದ್ದೇ ಒಂದು ತಾಯಿಯ ಕಥೆಯನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ತಾಯಿಯ ಹೆಸರು ಜಯಮ್ಮ, ಇವರ ಮಗ ಮೂರು ವರ್ಷವಿದ್ದಾಗ ಗಂಡ ತೀರಿಹೋಗಿ ಎಲ್ಲಾ ಜವಾಬ್ದಾರಿ ಇವರ ಮೇಲೆ ಬಿತ್ತು. ಜಯಮ್ಮ ಅವರು ಆಗ ಮಗನನ್ನು ಚೆನ್ನಾಗಿ, ಓದಿಸಿ, ಬೆಳೆಸಿ, ದೊಡ್ಡವನಾಗಿ ಮಾಡಬೇಕು ಎಂದು ಮನೆಯಲ್ಲೇ ಸಣ್ಣದಾಗಿ ಕಿರಾಣಿ ಅಂಗಡಿ ಶುರು ಮಾಡಿದರು, ಮಗನಿಗೆ ಪ್ರವೀಣ ಎಂದು ಹೆಸರಿಟ್ಟರು. ಮಗನನ್ನು ಚೆನ್ನಾಗಿ ಓದಿಸಿ ಬೆಳೆಸಿದರು, ಇವರ ಮಗ ಬಿಕಾಂ ಓದಿ ಕೆಲಸ ಪಡೆದು, ಮೊದಲ ಸಂಬಳವನ್ನು ತಾಯಿಯ ಕೈಗೆ ಕೊಟ್ಟಾಗ ತಾಯಿಗೆ ಬಹಳ ಸಂತೋಷಪಟ್ಟರು. ತನ್ನ ಮಗನಿಗೆ ಮದುವೆ ಮಾಡುವ ಸಮಯ ಬಂದಿದೆ ಎಂದುಕೊಂಡಾಗ..

ಪ್ರವೀಣ ತಾನು ಕಾಲೇಜಿನಲ್ಲಿ ಪ್ರೀತಿ ಮಾಡಿದ ಹುಡುಗಿಯ ಬಗ್ಗೆ ಹೇಳಿದ. ಆಗ ತಾಯಿ ಮಗ ಪ್ರೀತಿಸಿರುವ ಹುಡುಗಿ ಎಂದು ತಮ್ಮ ಕೈಯಲ್ಲಾದ ಮಟ್ಟಿಗೆ ಸಂತೋಷವಾಗಿ ಮದುವೆ ಮಾಡಿ ಸೊಸೆಯನ್ನು ಮನೆತುಂಬಿಸಿಕೊಂಡರು. ಮೂರು ವರ್ಷ ಅತ್ತೆ ಸೊಸೆ ಬಾಂಧವ್ಯ ತುಂಬಾ ಚೆನ್ನಾಗಿಯೇ ಇತ್ತು. ಈ ಸಮಯದಲ್ಲಿ ಇಬ್ಬರು ಮಕ್ಕಳು ಜನಿಸಿದರು, ಜಯಮ್ಮನಿಗೆ ವಯಸ್ಸಾಗಿತ್ತು, ಹಾಗಿದ್ದರೂ ತನ್ನ ಮಕ್ಕಳನ್ನು ಮೊಮ್ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದರು. ಆದರೆ ಆ ಸಮಯಕ್ಕೆ ಜಯಮ್ಮ ಅವರಿಗೆ ಅಸ್ತಮಾ ಇರುವ ಬಗ್ಗೆ ಗೊತ್ತಾಗಿ, ಕಿರಾಣಿ ಅಂಗಡಿ ನಿಲ್ಲಿಸಬೇಕಾಯಿತು, ಜೊತೆಗೆ ಅವರಿಂದ ಮನೆ ಕೆಲಸ ಮಾಡಲಾಗದೆ, ಮಕ್ಕಳನ್ನು ನೋಡಿಕೊಳ್ಳಲು ಆಗದ ಹಾಗೆ ಆಯಿತು. ಆಗ ಸೊಸೆ ಅತ್ತೆಯನ್ನು ನೋಡಿಕೊಳ್ಳಲು ಆಗುವುದಿಲ್ಲ ಎಂದು ಗಂಡನ ಜೊತೆಗೆ ಪ್ರತಿದಿನ ಜಗಳ ಅಡುವುದಕ್ಕೆ ಶುರು ಮಾಡಿದಳು. ಮಗ ತಾಯಿಯನ್ನು ನೋಡಲು ಬಂದಾಗ, ಜಯಮ್ಮ ಅವರು ನಿನಗೆ ನನ್ನಿಂದ ತೊಂದರೆ ಎಂದು ಅಳುವುದಕ್ಕೆ ಶುರು ಮಾಡಿದರು.. ಇದನ್ನು ಓದಿ..Kannada News: ಬಿಗ್ ನ್ಯೂಸ್: ಕಂಡಕ್ಟರ್ ಬೆಂ’ಕಿಗಾಹುತಿ ಕೇಸ್ ಗೆ ಊಹಿಸದ ತಿರುವುದು; ಪೊಲೀಸರಿಂದ ಭರ್ಜರಿ ಹೆಜ್ಜೆ. ಶಾಕ್ ಆದ ರಾಜ್ಯದ ಜನತೆ.

ಆಗ ಪ್ರವೀಣಾ ಇಲ್ಲಮ್ಮ ನೀನು ಹುಷಾರಾಗುತ್ತೀಯಾ ಎಂದು ಹೇಳಿ, ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದಾಗ, ಮನೆಯಲ್ಲಿ ದೊಡ್ಡ ಜಗಳವಾಗಿ ಕೊನೆಗೆ ಜಯಮ್ಮ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಅಲ್ಲಿ ತನ್ನ ಹಾಗೆ ಇರುವ ತಂದೆ ತಾಯಿಯರ ಜೊತೆಗೆ ಜಯಮ್ಮ ವಾಸ ಮಾಡುತ್ತಾರೆ. ಮಗ ಪ್ರವೀಣಾ ಆಗಾಗ ತಿಂಗಳಿಗೆ, ಮೂರು ತಿಂಗಳಿಗೆ ಒಂದು ಸಾರಿ ಬಂದು ತಾಯಿಯನ್ನು ನೋಡಿಕೊಂಡು ಹೋಗುತ್ತಿರುತ್ತಾನೆ. ಆದರೆ, ಒಮ್ಮೆ ಇದ್ದಕ್ಕಿದ್ದ ಹಾಗೆ 1 ವರ್ಷಗಳ ಕಾಲ ತಾಯಿಯನ್ನು ನೋಡಲು ಪ್ರವೀಣ ಬರಲಾಗುವುದಿಲ್ಲ. ಅಲ್ಲಿ ಪ್ರವೀಣನ ಮಗನಿಗೆ ಆಕ್ಸಿಡೆಂಟ್ ಆಗಿ, ಕಾಲು ಮುರಿದು ಟ್ರೀಟ್ಮೆಂಟ್ ನಲ್ಲಿ ಬ್ಯುಸಿ ಆಗಿರುತ್ತಾನೆ. ಆಸ್ಪತ್ರೆಯಲ್ಲಿ 5 ಲಕ್ಷ ಕಟ್ಟಲು ಹೇಳಿರುತ್ತಾರೆ, ಆದರೆ ಪ್ರವೀಣನ ಹತ್ತಿರ ಅಷ್ಟು ಹಣ ಇರುವುದಿಲ್ಲ, ಆಗ ಅವನ ಜೊತೆಗೆ ಆಫೀಸ್ ನಲ್ಲಿ ಕೆಲಸ ಮಾಡುವ ಒಬ್ಬರು ಆಸ್ಪತ್ರೆಗೆ ಬಂದು ಹಣ ಕಟ್ಟಿ, ಮಗನಿಗೆ ಎಲ್ಲವೂ ಸರಿಯಾಗಿ ನಡೆದು ಮಗನನ್ನು ಮನೆಗೆ ಕರೆದುಕೊಂಡು ಬಂದ ನಂತರ ತಾಯಿಯನ್ನು ನೋಡಲು ಹೋಗಿಲ್ಲ ಎಂದು ನೆನಪಾಗಿ ಅಲ್ಲಿಗೆ ಹೋಗುತ್ತಾನೆ.

ತಾಯಿಯ ಹತ್ತಿರ ನಡೆದಿದ್ದೆಲ್ಲವನ್ನು ಹೇಳಿದಾಗ, ಪ್ರವೀಣನ ತಾಯಿ ಮಗನಿಗೆ ಪರವಾಗಿಲ್ಲಪ್ಪ ನೀನು ಚೆನ್ನಾಗಿರು ಮಗನನ್ನು ಚೆನ್ನಾಗಿ ನೋಡಿಕೊ ಎಂದು ಹೇಳುತ್ತಾರೆ. ಪ್ರವೀಣ ಮನೆಗೆ ಬಂದ ನಂತರ ಮೂರು ತಿಂಗಳು ವೃದ್ಧಾಶ್ರಮಕ್ಕೆ ಹೋಗಲು ಆಗುವುದಿಲ್ಲ. ಒಂದು ದಿನ ಅಲ್ಲಿಂದ ಈ ಕೂಡಲೇ ಬನ್ನಿ ಎಂದು ಟೆಲಿಗ್ರಾಮ್ ಬರುತ್ತದೆ. ಹೋಗಿ ನೋಡಿದರೆ, ಪ್ರವೀಣನ ತಾಯಿ ಕೊನೆಯುಸಿರೆಳೆದಿರುತ್ತಾರೆ. ಅವರು ಬಿಟ್ಟಿರುವ ಲಗೇಜ್ ಮತ್ತು ಪತ್ರ ಇರುತ್ತದೆ. ಆ ಪತ್ರದಲ್ಲಿ ತಮ್ಮ ಭಾವನೆಗಳನ್ನು ಬರೆದು, ತಾವು ಆಗಾಗ ಮೊಮ್ಮಗನನ್ನು ಸ್ಕೂಲ್ ಹತ್ತಿರ ಹೋಗಿ ಭೇಟಿ ಮಾಡಿದ್ದಾಗಿ ಬರೆದು, ಮೊಮ್ಮಗನಿಗೆ ಹೀಗಾಗಿದೆ ಎಂದು ಗೊತ್ತಾಗಿ, ತಮ್ಮ ಟ್ರೀಟ್ಮೆಂಟ್ ಗಾಗಿ ಇಟ್ಟುಕೊಂಡಿದ್ದ ಹಣವನ್ನು ಮೊಮ್ಮಗನಿಗಾಗಿ ಪ್ರವೀಣ್ ಆಫೀಸ್ ಸ್ಟಾಫ್ ಕೈಯಿಂದ ಕಳಿಸಿದ ವಿಷಯ ತಿಳಿಸಿ, ನಿನಗೆ ಬೇಸರವಾಗುತ್ತದೆ ಎಂದು ಹೇಳಿರಲಿಲ್ಲ, ಎಲ್ಲಿದ್ದರು ಚೆನ್ನಾಗಿರು ಎಂದು ಬರೆದಿರುತ್ತಾರೆ ಜಯಮ್ಮ. ತಾಯಿಯ ಈ ಪತ್ರ ನೋಡಿ ಮಗ ಪ್ರವೀಣ ಕಣ್ಣೀರ ಧಾರೆ ಹರಿಸುತ್ತಾನೆ. ಈ ಘಟನೆ ನಡೆದಿರುವುದು ಹಾಸನದಲ್ಲಿ ,ಈ ತಾಯಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ.. ಇದನ್ನು ಓದಿ..News: ಇಬ್ಬರನ್ನು ಮದುವೆಯಾಗಿರುವ ಗಂಡ, ಸಂಸಾರ ಹೇಗೆ ಮಾಡುತ್ತಾನೆ ಗೊತ್ತೇ? ಹೆಂಡತಿಯರು ಮಾಡಿದ ಕಠಿಣ ನಿರ್ಧಾರ ಏನು ಗೊತ್ತೇ?

Comments are closed.