Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
Business Idea: ನಮ್ಮ ಹಿಂದಿನ ಕಾಲದಲ್ಲಿ, ನಮ್ಮ ಅಜ್ಜ, ತಂದೆ ಎಲ್ಲರೂ ಸರ್ಕಾರಿ ಕೆಲಸ ಇದ್ದರೆ ಜೀವನ ಸೆಟ್ಲ್ ಎನ್ನುತ್ತಿದ್ದರು. ಆದರೆ ಈಗ ಸರ್ಕಾರಿ ಕೆಲಸಕ್ಕಿಂತ ಎಲ್ಲರೂ ಬ್ಯುಸಿನೆಸ್ ಕಡೆಗೆ ಮುಖ ಮಾಡುತ್ತಿದ್ದಾರೆ. ಬ್ಯುಸಿನೆಸ್ ಮಾಡಿ ಚೆನ್ನಾಗಿ ಹಣ ಸಂಪಾದನೆ ಮಾಡಬೇಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಆದರೆ ಬ್ಯುಸಿನೆಸ್ ಮಾಡುವುದು ಬಹಳ ಸುಲಭ ಆಗಿರುವುದಿಲ್ಲ, ಒಂದು ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲು ಅದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು.

ನಮಗೆ ಯಾವುದರಲ್ಲಿ ಆಸಕ್ತಿ ಇದೆಯೋ, ಆ ಬ್ಯುಸಿನೆಸ್ ಶುರು ಮಾಡಬೇಕು. ಅದರ ಬಗ್ಗೆ ಸ್ಕಿಲ್ಸ್ ಬೆಳೆಸಿಕೊಳ್ಳಬೇಕು, ಕೆಲವೊಮ್ಮೆ ಬೇರೆ ಎಲ್ಲವೂ ಗೊತ್ತಿದ್ದು, ಯಾವ ಬ್ಯುಸಿನೆಸ್ ಒಳ್ಳೆಯದು, ಹೇಗೆ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎನ್ನುವ ಮುಖ್ಯ ವಿಚಾರವೇ ಗೊತ್ತಿಲ್ಲದೇ, ತರಾತುರಿಯಲ್ಲಿ ಬ್ಯುಸಿನೆಸ್ ಶುರು ಮಾಡಿ, ಅದರಲ್ಲಿ ಯಶಸ್ಸು ಗಳಿಸುವುದಕ್ಕಿಂತ, ನಷ್ಟ ಅನುಭವಿಸುವುದೇ ಹೆಚ್ಚಿರುತ್ತದೆ.. ಇದನ್ನು ಓದಿ..Business Idea: ಒಂದು ರೂಪಾಯಿ ಕೂಡ ಬಂಡವಾಳವಿಲ್ಲದೆ ಆರಂಭಿಸಿ, ನಂತರ ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ? ಆರಂಭಿಸಲು ಏನು ಮಾಡ್ಬೇಕು ಗೊತ್ತೇ?
ಈ ಕಾರಣಕ್ಕೆ ಬ್ಯುಸಿನೆಸ್ ಶುರು ಮಾಡುವಾಗ, ಹೂಡಿಕೆ ಕಡಿಮೆ ಮಾಡಿ ಬ್ಯುಸಿನೆಸ್ ಶುರು ಮಾಡಬೇಕು. ನಂತರ ನಿಮ್ಮ ಕೌಶಲ್ಯತೆ, ಸ್ಕಿಲ್ ಇದನ್ನೆಲ್ಲ ಬಳಸಿ ದೊಡ್ಡದಾಗಿ ಬೆಳೆಸಿಕೊಂಡು ಹೋಗಬೇಕು, ಅಂಥದ್ದೇ ಒಂದು ಬ್ಯುಸಿನೆಸ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.. ಇದು ಟೀ ಶರ್ಟ್ ಪ್ರಿಂಟಿಂಗ್ ಬ್ಯುಸಿನೆಸ್ ಆಗಿದೆ. ಇದನ್ನು ನೀವು ಬಹಳ ಕಡಿಮೆ ಹೂಡಿಕೆಯಲ್ಲಿ ಶುರು ಮಾಡಬಹುದು. ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ಟೀ ಶರ್ಟ್ ಪ್ರಿಂಟ್ ಮಾಡುವ ಮಷಿನ್ ಖರೀದಿ ಮಾಡಬೇಕು.
ಈ ಮಷಿನ್ ಗಳು ನಿಮ್ಮ ಬಜೆಟ್ ಗೆ ತಕ್ಕಹಾಗೆಯೇ 20 ಸಾವಿರದಿಂದ 1.5 ಲಕ್ಷ ರೂಪಾಯಿವರೆಗು ಮಷಿನ್ ಗಳು ಸಿಗುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದನೆ ಮಾಡಬೇಕು ಎಂದು ನೀವು ಅಂದುಕೊಂಡಿದ್ದರೆ, ಹೆಚ್ಚು ಬೆಲೆಬಾಳುವ ಯಂತ್ರವನ್ನು ಖರೀದಿ ಮಾಡಿ. ಈ ಬ್ಯುಸಿನೆಸ್ ಅನ್ನು ಮನೆಯಿಂದಲೇ ಶುರು ಮಾಡಿ, ನಂತರ ದೊಡ್ಡದಾಗಿ ಮಾಡಬಹುದು. ಈ ಬ್ಯುಸಿನೆಸ್ ಅನ್ನು ನೀವು ಚೆನ್ನಾಗಿ ಮಾಡಿ ಕ್ಲಿಕ್ ಆದರೆ, ಒಳ್ಳೆಯ ಆದಾಯ ಹಾಗೂ ಲಾಭವನ್ನು ಸಹ ಪಡೆಯಬಹುದು. ಇದನ್ನು ಓದಿ..Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?