JIO Cinema: ಅಂದುಕೊಂಡಂತೆ ಶಾಕ್ ಕೊಟ್ಟ ಅಂಬಾನಿ; ಐಪಿಎಲ್ ಉಚಿತವಾಗಿ ನೋಡುತ್ತಿದ್ದೀರಾ?? ತೆರೆ ಹಿಂದೆ ಅಂಬಾನಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೆ??
JIO Cinema: ಈ ವರ್ಷ ಐಪಿಎಲ್ (IPL) ಟೂರ್ನಿ ಭರ್ಜರಿಯಾಗಿ ಸಾಗುತ್ತಿದೆ, ಟಿವಿಯಲ್ಲಿ ಮ್ಯಾಚ್ ನೋಡಲು ಸಾಧ್ಯ ಆಗದೆ ಇರುವವರಿಗೆ ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ, ಉಚಿತವಾಗಿ ಐಪಿಎಲ್ ನೋಡಲು ಅಂಬಾನಿ ಅವರು ವ್ಯವಸ್ಥೆ ಮಾಡಿದ್ದರು. ಆದರೆ ಐಪಿಎಲ್ ವೀಕ್ಷಕರಿಗೆ ಅಂಬಾನಿ ಅವರ ಕಡೆಯಿಂದ ಈಗ ದೊಡ್ಡ ಶಾಕ್ ಸಿಕ್ಕಿದೆ. ಅದೇನೆಂದರೆ, ಈ ವರ್ಷದ ಐಪಿಎಲ್ ಸೀಸನ್ ಮುಗಿಯುವುದಕ್ಕಿಂತ ಮೊದಲೇ, ಜಿಯೋ ಸಿನಿಮಾ ಅಪ್ಲಿಕೇಶನ್ ನ ಚಂದಾದಾರಿಕೆ ಶುರು ಮಾಡಬಹುದು ಎಂದು ಹೇಳಲಾಗುತ್ತಿದೆ.

ಐಪಿಎಲ್ ಮ್ಯಾಚ್ ಗಳ ಡಿಜಿಟಲ್ ಹಕ್ಕು ಖರೀದಿಗೆ ಭಾರಿ ಪೈಪೋಟಿ ನಡೆದಿತ್ತು, ಡಿಸ್ನಿ+ಹಾಟ್ ಸ್ಟಾರ್ (Disney+Hotstar), ಸೋನಿ (Sony) ಹಾಗೂ ಇನ್ನಿತರ ಸಂಸ್ಥೆಗಳ ನಡುವೆ ಪೈಪೋಟಿಯಲ್ಲಿ, 20,500 ಕೋಟಿ ರೂಪಾಯಿ ಕೊಟ್ಟು ಅಂಬಾನಿ ಅವರು ಹಕ್ಕು ಖರೀದಿ ಮಾಡಿ, ಎಲ್ಲಾ ಜನರಿಗು ಉಚಿತವಾಗಿ ಐಪಿಎಲ್ ನೋಡುವ ಅವಕಾಶ ಕಲ್ಪಿಸಿಕೊಡುವುದಾಗಿ ಹೇಳಿದರು. ಐದು ವರ್ಷಗಳ ಕಾಲಕ್ಕೆ ಜಿಯೋ ಸಂಸ್ಥೆ ಕಾಂಟ್ರ್ಯಾಕ್ಟ್ ತೆಗೆದುಕೊಂಡಿದೆ. ಈ ಹಿಂದೆ ಫಿಫಾ ವರ್ಲ್ಡ್ ಕಪ್ (FIFA World Cup), ವುಮನ್ಸ್ ಐಪಿಎಲ್ (WPL) ಗಳನ್ನು ಸಹ ಫ್ರೀಯಾಗಿ ನೋಡುವ ಅವಕಾಶ ನೀಡಿತ್ತು. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.
ಆದರೆ ಮುಂದಿನ ತಿಂಗಳಿನಿಂದ ಚಂದಾದಾರಿಕೆ ಶುರುವಾಗಬಹುದು ಎನ್ನಲಾಗುತ್ತಿದೆ. ಜಿಯೋ ಸಂಸ್ಥೆ ಫ್ರೀಯಾಗಿ ಮ್ಯಾಚ್ ವೀಕ್ಷಣೆ ನೀಡುತ್ತಿರುವ ಕಾರಣ, ಅಪ್ಲಿಕೇಶನ್ ಗಳು ಕೋಟ್ಯಾಂತರ ಸಾರಿ ಡೌನ್ಲೋಡ್ ಆಗಿ ದಾಖಲೆ ಬರೆದಿದೆ, ನಿನ್ನೆ ನಡೆದ ಆರ್ಸಿಬಿ ವರ್ಸಸ್ ಸಿ.ಎಸ್.ಕೆ ಮ್ಯಾಚ್ ಅನ್ನು 1.5ಕೋಟಿಗಿಂತ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಇನ್ನು ಐಪಿಎಲ್ ಟಿವಿ ಪ್ರಸಾರದ ಹಕ್ಕುಗಳನ್ನು ವಯಾಕಾಮ್18 ಪಡೆದಿದ್ದು, 14 ಭಾಷೆಗಳಲ್ಲಿ ಐಪಿಎಲ್ ಕಾಮೆಂಟೇಟರಿ ಕೊಡುವ ಮೂಲಕ, ಡಿಫರೆಂಟ್ ಕ್ಯಾಮೆರಾ ಆಂಗಲ್ ನಲ್ಲಿ ತೋರಿಸುವ ಮೂಲಕ ಹೆಚ್ಚು ಜನರನ್ನು ತಲುಪಿದೆ.
ಐಪಿಎಲ್ ಫಿನಾಲೆಗಿಂತ ಮೊದಲು, ಜಿಯೋ ಸಿನಿಮಾ ಈ ಚಂದಾದಾರಿಕೆಯ ಪ್ಲಾನ್ ಅನ್ನು ಬಿಡುಗಡೆ ಮಾಡಲಿದೆ, ಜಿಯೋ ಸಿನಿಮಾ ವಯಾಕಾಮ್ 18 ನ ಮಾಧ್ಯಮ ಮತ್ತು ವಿಷಯ ವ್ಯವಹಾರ ವಿಭಾಗದ ಅಧ್ಯಕ್ಷೆ ಆಗಿರುವ ಜ್ಯೋತಿ ದೇಶಪಾಂಡೆ ಅವರು ಸಂದರ್ಶನದಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಫ್ರೀ ಆಗಿ ಪಂದ್ಯಗಳನ್ನು ನೋಡುವ ಅವಕಾಶ ಕೊಟ್ಟಿರುವುದರಿಂದ ಅದು ಬೇರೆ ಓಟಿಟಿ ಪ್ಲಾಟ್ ಫಾರ್ಮ್ ಗಳ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕೆ ಚಂದಾದಾರಿಕೆಯ ಶುಲ್ಕ ವಿಧಿಸಲಿದ್ದು, ಬೇರೆ ಪ್ಲಾಟ್ ಫಾರ್ಮ್ ಗಳಿಗಿಂತ ಕಡಿಮೆ ಇರುತ್ತದೆ ಎಂದು ಜ್ಯೋತಿ ಅವರು ತಿಳಿಸಿದ್ದಾರೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??