Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?
Business Idea: ನಿಮಗೆ ಇನ್ನು ಕೆಲಸ ಸಿಕ್ಕಿಲ್ಲ ಎನ್ನುವುದಾದರೆ, ಕೆಲಸಕ್ಕಾಗಿ ಕಾಯುತ್ತಾ ಇರಬೇಡಿ, ನಿಮ್ಮದೇ ಆದ ಸ್ವಂತ ಉದ್ಯಮ ಶುರು ಮಾಡುವ ಮೂಲಕ ಹೆಚ್ಚು ಹಣ ಗಳಿಸಬಹುದು. ಆದರೆ ಲಾಭ ಬರುವಂಥ ಬ್ಯುಸಿನೆಸ್ ಯಾವುದು ಎನ್ನುವುದನ್ನು ಕೂಡ ನೀವು ತಿಳಿದುಕೊಂಡಿರಬೇಕು, ನಿಮಗಾಗಿ ಒಂದು ಬ್ಯುಸಿನೆಸ್ ಐಡಿಯಾ ಇಂದು ತಿಳಿಸುತ್ತೇವೆ. ಆಹಾರ ಕ್ಷೇತ್ರಕ್ಕೆ ಯಾವಾಗಲೂ ಬೇಡಿಕೆ ಇದೆ. ಜನರಿಗೆ ತಿನ್ನುವುದು ಅಂದ್ರೆ ತುಂಬಾ ಇಷ್ಟ. ಸಿಟಿಗಳಲ್ಲಿ ಈಗ ಚೈನೀಸ್ ಫುಡ್ ಗೆ ಭಾರಿ ಬೇಡಿಕೆ ಇದೆ. ಈಗಿನ ಪೀಳಿಗೆಯವರು ಫ್ರೈಡ್ ರೈಸ್, ನೂಡಲ್ಸ್ ಹಾಗೂ ಮಂಚೂರಿ ಇದನ್ನೆಲ್ಲಾ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ..
ಹಾಗಾಗಿ ಹೆಚ್ಚು ಜನರು ಓಡಾಡುವ ಜಾಗದಲ್ಲಿ ಚೈನೀಸ್ ಫಾಸ್ಟ್ ಫುಡ್ ಸೆಂಟರ್ ಅನ್ನು ಶುರು ಮಾಡಬಹುದು, ಇದರಿಂದ ಒಳ್ಳೆಯ ಲಾಭ ಪಡೆಯಬಹುದು. ಮೊದಲನೆಯದಾಗಿ ಈ ಸೆಂಟರ್ ಶುರು ಮಾಡಲು ಏನೆಲ್ಲಾ ಬೇಕಾಗುತ್ತದೆ ಎಂದು ನಿಮಗೆ ತಿಳಿಸುತ್ತೇವೆ. ಚೈನೀಸ್ ಫಾಸ್ಟ್ ಫುಡ್ ಸೆಂಟರ್ ಅನ್ನು ನೀವು ಒಂದು ಅಂಗಡಿ ಥರ ಶುರು ಮಾಡಬಹುದು. ನಿಮ್ಮ ಅಂಗಡಿ, ಕಾಲೇಜ್, ಆಫೀಸ್ ಇರುವ ಕಡೆ ಹೆಚ್ಚು ಜನ ಓಡಾಡುವ ಕಡೆ ಮಾಡಿ, ಆಗ ಹೆಚ್ಚು ಗ್ರಾಹಕರು ನಿಮಗೆ ಸಿಗುತ್ತಾರೆ. ಮೊದಲು, ಅಂಗಡಿ ಮಳಿಗೆ ಬಾಡಿಗೆಗೆ ಪಡೆದು, ಅದಕ್ಕೆ ಸರಿಯಾದ ಸ್ಟೇನ್ಲೆಸ್ ಫುಡ್ ಸ್ಟಾಲ್ ಶುರು ಮಾಡಿ. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.
ಇದಕ್ಕಾಗಿ 10 ರಿಂದ 20 ಸಾವಿರ ಮೌಲ್ಯದಷ್ಟು ಅಡುಗೆ ಪಾತ್ರೆಗಳು ಬೇಕಾಗುತ್ತದೆ, ಹಾಗೆ ವಾಣಿಜ್ಯ ಗ್ಯಾಸ್ ಸಿಲಿಂಡರ್, ಗ್ರಾಹಕರು ಕುಳಿತುಕೊಳ್ಳಲು ಚೇರ್ ಗಳು, ಟೇಬಲ್ ಗಳು ಇರಬೇಕು. ಎಲ್ಲವೂ ಸೇರಿ 1 ಲಕ್ಷದಿಂದ ಒಂದೂವರೆ ಲಕ್ಷ ರೂಪಾಯಿವರೆಗೂ ಖರ್ಚಾಗಬಹುದು. ನೇಪಾಲಿಗಳು ಹಾಗೂ ಪೂರ್ವ ಪ್ರದೇಶದವರು ಇಂಥ ತಿಂಡಿಗಳನ್ನು ರುಚಿಯಾಗಿ ತಯಾರಿಸುತ್ತಾರೆ. ಅಂಥವನರನ್ನು ಅಡುಗೆಗೆ ನೇಮಿಸಿಕೊಳ್ಳಬಹುದು ಅಥವಾ ನೀವೇ ಕಲಿತು ಮಾಡಬಹುದು. ಚೈನೀಸ್ ಅಡುಗೆ ಕಲಿಯಲು, ಕೆಲವು ಹೋಟೆಲ್ ಗಳಲ್ಲಿ ಕೋರ್ಸ್ ಕೂಡ ಇರುತ್ತದೆ.
ಯಾವುದೇ ಬ್ಯುಸಿನೆಸ್ ಆಗಿದ್ದರು ಟೇಸ್ಟ್ ಮತ್ತು ಕ್ವಾಲಿಟಿ ತುಂಬಾ ಮುಖ್ಯ. ನಿಮ್ಮ ಫುಡ್ ಸ್ಟಾಲ್ ನಲ್ಲಿ ಎರಡು ಚೆನ್ನಾಗಿದ್ದರೆ, ನಿಮ್ಮ ಸ್ಟಾಲ್ ಗೆ ಹೆಚ್ಚು ಜನರು ಬರುತ್ತಾರೆ, ಕಡಿಮೆ ಸಮಯದಲ್ಲೇ ನಿಮ್ಮ ಬ್ಯುಸಿನೆಸ್ ಎರಡದಿಂದ ಮೂರು ಪಟ್ಟು ಜಾಸ್ತಿಯಾಗುತ್ತದೆ. ನಿಮ್ಮ ಬ್ಯುಸಿನೆಸ್ ಚೆನ್ನಾಗಿ ನಡೆದರೆ, ದಿನಕ್ಕೆ 10 ಸಾವಿರ ಖರ್ಚು ಮಾಡಿ, 20 ಸಾವಿರ ವ್ಯಾಪಾರ ಮಾಡಬಹುದು.. ಈ ಮೂಲಕ ತಿಂಗಳಿಗೆ ಎರಡರಿಂದ ಮೂರು ಲಕ್ಷ ಹಣಗಳಿಕೆ ಮಾಡಬಹುದು. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.