Oil Price: ಅಡುಗೆ ಎಣ್ಣೆ ಬೆಲೆಯಲ್ಲಿ ಬಾರಿ ಇಳಿಕೆ: ಕುಣಿದು ಕುಪ್ಪಳಿಸಿದ ಗ್ರಾಹಕರು: ಎಷ್ಟಾಗಿದೆ ಗೊತ್ತೇ? ತಿಳಿದರೆ, ಇಂದೇ ಅಂಗಡಿಗೆ ಓಡಿ ಹೋಗ್ತೀರಾ.
Oil Price: ಕೆಲ ತಿಂಗಳುಗಳಿಂದ ಪ್ರಪಂಚದಲ್ಲಿ ಹಲವೆಡೆ ಹಣದುಬ್ಬರ ಜಾಸ್ತಿಯಾಗಿ, ದಿನಬಳಕೆ ವಸ್ತುಗಳ ಬೆಲೆ ಕೂಡ ಗಗನಕ್ಕೆ ಏರಿತ್ತು. ಎಲ್ಲಾ ವಸ್ತುಗಳ ಬೆಲೆ ಹೀಗೆ ಜಾಸ್ತಿಯಾಗುತ್ತಿರುವುದನ್ನು ನೋಡಿ, ಸಾಮಾನ್ಯ ಜನರು ತಲೆ ಮೇಲೆ ಕೈಹೊತ್ತು ಕೂರುವ ಹಾಗೆ ಆಗಿತ್ತು. ಬೆಲೆ ಏರಿಕೆ ಇಂದ ತತ್ತರಿಸಿದ್ದ ಜನರಿಗೆ ಈಗ ನೆಮ್ಮದಿ ಎನ್ನಿಸುವಂಥ ಒಂದು ಸುದ್ದಿ ಸಿಕ್ಕಿದೆ..
ಇದೀಗ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ ಆಗಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಗಳ ಬೆಲೆ ಕಡಿಮೆ ಆಗಿರುವ ಕಾರಣ, ನಮ್ಮ ದೇಶದಲ್ಲಿ ಸಹ ಬೆಲೆ ಇಳಿಕೆ ಆಗಿದೆ. ಅಕ್ಕಪಕ್ಕದ ಮಂಡಿಗಳಲ್ಲಿ ಅಡುಗೆ ಎಣ್ಣೆ ಹಾಗೂ ಎಣ್ಣೆ ಕಾಳುಗಳ ಬೆಲೆ ಎರಡು ಕೂಡ ಕಡಿಮೆ ಆಗಿದೆ. ಹಾಗಾಗಿ ಹೊರದೇಶದಿಂದ ಕಡಿಮೆ ಬೆಲೆಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ಅವುಗಳ ಬೆಲೆಯಲ್ಲಿ ಕಡಿಮೆ ಆಗಿದ್ದು, ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಈಗ ಮಾಹಿತಿ ನೀಡಿದ್ದು, ನವೆಂಬರ್ ಇಂದ ಮಾರ್ಚ್ ವರೆಗು ಪ್ರತಿವರ್ಷ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿರುವ ಬೆಲೆಯಲ್ಲಿ 23.7% ಜಾಸ್ತಿಯಾಗುತ್ತಿದೆ. ಈಗ 6.98 ಮಿಲಿಯನ್ ಟನ್ಸ್ ದಾಖಲಾಗಿದೆ.
ಇದೀಗ ಪಾಮ್ ಆಯ್ಲ್ ನ ಬೆಲೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿ 42% ಅಷ್ಟು ಇಳಿಕೆ ಆಗಿದೆ. ಒಂದು ಟನ್ ಗೆ $1791 ಡಾಲರ್ ಇತ್ತು, ಈಗ $1030 ಡಾಲರ್ ಆಗಿದೆ. ಹಾಗೆಯೇ ಕಚ್ಚಾ ಆಯ್ಲ್ 45% ಇಳಿಕೆ ಆಗಿ, ಇದು ಒಂದು ಟನ್ ಬೆಲೆ $1040 ಡಾಲರ್ ಆಗಿದೆ. ಹಾಗೂ ಸೂರ್ಯಕಾಂತಿ ಎಣ್ಣೆ 53% ಇಳಿಕೆ ಆಗಿ, ಒಂದು ಟನ್ ಬೆಲೆ $1010 ಡಾಲರ್ ಆಗಿದೆ. ಈಗ ಬೆಲೆಯಲ್ಲಿ ಕುಸಿತ ಆಗಿರುವುದರಿಂದ, ಆಮದುಗಳ ಬೆಲೆ ಕೂಡ ಕಡಿಮೆಯಾಗಿದೆ. SOPA ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ, ನಮ್ಮ ಸರ್ಕಾರ ಸಾಸಿವೆ ಎಣ್ಣೆಯನ್ನು ಮಿನಿಮಮ್ ಬೆಲೆಗೆ ಖರೀದಿ ಮಾಡುತ್ತದೆ. ಸಾಸಿವೆ ಎಣ್ಣೆ ಈಗ 5000 ಇಂದ 5100 ರೂಪಾಯಿ ಆಗಿದೆ. ಈ ಎಣ್ಣೆಯ ಬೆಂಬಲದ ಬೆಲೆ ₹5450 ರೂಪಾಯಿಗಿಂತ ಕಡಿಮೆ ಆಗಿದೆ.
ಇನ್ನು ಕಡಲೆಕಾಯಿ ಎಣ್ಣೆಯ ಬೆಲೆ ಒಂದು ಕ್ವಿನ್ಟಾಲ್ ಗೆ 6805 ಇಂದ 6865 ರೂಪಾಯಿ ಆಗಿದೆ. ಹಾಗೂ ಕಡಲೆಯನ್ನು ಸಂಸ್ಕರಿಸಿದ ಎಣ್ಣೆಯ ಬೆಲೆ ಒಂದು ಟನ್ ಗೆ ₹2540 ಇಂದ ₹2805 ಆಗಿದೆ. ಪಾಮೊಲಿನ್ x ಕ್ಯಾಂಡೆಲಾ ಎಣ್ಣೆಯ ಬೆಲೆ ಒಂದು ಕ್ವಿನ್ಟಾಲ್ ಗೆ 9400 ರೂಪಾಯಿ ಆಗಿದೆ. ಸೋಯಾಬೀನ್ ಎಣ್ಣೆ ಡಿಗುಮ್ ಕ್ಯಾಂಡ್ಲಾ ಬೆಲೆ ಒಂದು ಕ್ವಿನ್ಟಾಲ್ ಗೆ 9 ಸಾವಿರ ರೂಪಾಯಿ ಆಗಿದೆ. ಪಾಮೊಲಿನ್ ಆರ್.ಬಿ.ಡಿ ಎಣ್ಣೆ ಬೆಲೆ ಒಂದು ಕ್ವಿನ್ಟಾಲ್ ಗೆ 10,250 ರೂಪಾಯಿ ಆಗಿದೆ. ಜಾಗತಿಕವಾಗಿ ಎಣ್ಣೆಯ ಬೆಲೆ ಕಡಿಮೆ ಆಗಿರುವುದರಿಂದ ನಮ್ಮ ದೇಶದಲ್ಲಿ ಕೂಡ ಕಡಿಮೆ ಆಗಿದ್ದು, ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆ ಇನ್ನಷ್ಟು ಕಡಿಮೆ ಆಗಲಿದೆ. ಜನರಿಗೆ ಇದು ನೆಮ್ಮದಿ ತಂದಿದೆ.
Comments are closed.