Heroines: ಮೂವತ್ತು, ನಲವತ್ತು ದಾಟಿದ್ರೂ ಮದುವೆಯಾಗದೆ ಉಳಿದಿರುವ ಅಪ್ಸರೆಯರು ಯಾರ್ಯಾರು ಗೊತ್ತೇ?? ತಿಳಿದರೆ, ಕಣ್ಣೀರು ಹಾಕ್ತಿರ.
Heroines: ಸಿನಿಮಾ ನಟಿಯರು ಮದುವೆ ಆಗುವ ನಿರ್ಧಾರ ಮಾಡುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಅದಕ್ಕೆ ಕಾರಣ ಏನು ಎಂದು ಯಾರಿಗೂ ಗೊತ್ತಿರುವುದಿಲ್ಲ. ಕೆರಿಯರ್ ಮೇಲಿನ ಕಾಳಜಿ ಹಾಗೂ ಇನ್ನಿತರ ಕಾರಣಗಳಿಂದ ಮದುವೆ ಆಗದೆಯೇ ಹಾಗೆ ಇರುತ್ತಾರೆ. ನಮ್ಮ ದಕ್ಷಿಣ ಭಾರತದಲ್ಲಿ ಸಹ 30 ಹಾಗೂ 40 ವರ್ಷ ದಾಟಿದ್ದರು ಇನ್ನು ಮದುವೆ ಆಗದೆ ಇರುವ ಅನೇಕ ನಟಿಯರಿದ್ದಾರೆ. ಅವರ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..
ತಬು :- ಬಾಲಿವುಡ್ ಇಂದ ಸೌತ್ ಇಂಡಿಯಾವರೆಗು ಸ್ಟಾರ್ ನಟಿಯಾಗಿ ಹೆಸರು ಮಾಡಿದವರು ತಬು. ಇವರಿಗೆ ಈಗಲೂ ಒಳ್ಳೆಯ ಹೆಸರಿಗೆ. ವಯಸ್ಸು 50 ಆಗಿದ್ದರು ತಬು ಅವರು ಇನ್ನು ಮದುವೆಯಾಗಿಲ್ಲ.
ಅನುಷ್ಕಾ ಶೆಟ್ಟಿ :- ಇವರು ಮೂಲತಃ ಕನ್ನಡತಿಯಾದರು ಹೆಚ್ಚಿನ ಹೆಸರು ಮಾಡಿದ್ದು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ. ಅನುಷ್ಕಾ ಶೆಟ್ಟಿ ಅವರು ಬಾಹುಬಲಿ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಇವರಿಗು 41 ವರ್ಷ ತುಂಬಿದ್ದರು ಇನ್ನು ಮದುವೆಯಾಗಿಲ್ಲ.
ತಮನ್ನಾ ಭಾಟಿಯಾ :- ಇವರು ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗು, ತಮಿಳು ಹಾಗೂ ಬಾಲಿವುಡ್ ನಲ್ಲಿ ಹೆಸರು ಮಾಡಿರುವ ತಮನ್ನಾ ಅವರು ಮಿಲ್ಕಿ ಬ್ಯೂಟಿ ಎಂದೇ ಹೆಸರು ಪಡೆದಿದ್ದಾರೆ. 34 ವರ್ಷವಾಗಿದ್ದರು ಇವರು ಇನ್ನು ಮದುವೆಯಾಗಿಲ್ಲ.
ತಾಪ್ಸಿ ಪನ್ನು :- ಇವರು ಈಗ ಬಾಲಿವುಡ್ ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಹಾಗೂ ತಮಿಳಿನಲ್ಲಿ ಸಕ್ರಿಯರಾಗಿದ್ದಾರೆ. ಇವರಿಗೆ 34 ವರ್ಷವಾಗಿದ್ದರು ಇನ್ನು ಮದುವೆ ಆಗುವ ಮನಸ್ಸು ಮಾಡಿಲ್ಲ.
ತ್ರಿಷಾ ಕೃಷ್ಣನ್ :- ಇವರು ಕೂಡ 1 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗು ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಬಹಳ ಬೇಡಿಕೆ ಹೊಂದಿರುವ ನಟಿ ತ್ರಿಷಾ ಅವರು 39 ವರ್ಷ ವಯಸ್ಸಾಗಿದ್ದರು ಇನ್ನು ಮದುವೆಯಾಗಿಲ್ಲ.
ಶ್ರುತಿ ಹಾಸನ್ :- ಖ್ಯಾತ ನಟ ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್ ಗಾಯಕಿಯಾಗಿ ಮತ್ತು ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಶ್ರುತಿಹಾಸನ್ ಅವರಿಗೆ 38 ವರ್ಷವಾಗಿದ್ದರು ಇನ್ನು ಮದುವೆಯಾಗಿಲ್ಲ.
ರಾಕುಲ್ ಪ್ರೀತ್ ಸಿಂಗ್ :- ಉತ್ತರ ಭಾರತದವರಾದರು ಇವರಿಗೆ ಸಿನಿಮಾ ಅವಕಾಶಗಳು ಮತ್ತು ಯಶಸ್ಸು ಸಿಕ್ಕಿದ್ದು ದಕ್ಷಿಣ ದಲ್ಲಿ, ತೆಲುಗು ಹಾಗೂ ತಮಿಳು ಚಿತ್ರರಂಗದದಲ್ಲಿ ರಾಕುಲ್ ಪ್ರೀತ್ ಸಿಂಗ್ ಫೇಮಸ್ ಆಗಿದ್ದಾರೆ. ಇವರಿಗೆ 34 ವರ್ಷ ವಯಸ್ಸಾಗಿದ್ದರು ಇನ್ನು ಮದುವೆಯಾಗಿಲ್ಲ.
ಇಲಿಯಾನ ಡಿ ಕ್ರೂಜ್ :-ಇವರು ಬಾಲಿವುಡ್ ಹಾಗೂ ತೆಲುಗಿನಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದಲ್ಲಿ ಹುಡುಗ ಹುಡುಗಿ ಸಿನಿಮಾ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇವರಿಗೆ 36 ವರ್ಷ ವಯಸ್ಸಾಗಿದ್ದರು ಇನ್ನು ಮದುವೆಯಾಗಿಲ್ಲ.
ನಿತ್ಯಾ ಮೆನನ್ :- ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಿತ್ಯಾ ಮೆನನ್ ಅವರು ಕನ್ನಡ, ತಮಿಳು, ಮಲಯಾಳಂ, ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರ ನಟನೆಗೆ ಫಿದಾ ಆಗದವರಿಲ್ಲ. ನಿತ್ಯಾ ಮೆನನ್ ಅವರಿಗೆ 34 ವರ್ಷವಾಗಿದ್ದರು ಇನ್ನು ಮದುವೆಯಾಗಿಲ್ಲ.
ಪೂಜಾ ಹೆಗ್ಡೆ :- ಕರಾವಳಿ ಬೆಡಗಿ ಪೂಜಾ ಹೆಗ್ಡೆ ಬಾಲಿವುಡ್ ಇಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಇವರಿಗೆ ಸಕ್ಸಸ್ ಸಿಕ್ಕಿದ್ದು ತೆಲುಗಿನಲ್ಲಿ. ಸ್ಟಾರ್ ನಟಿಯಾಗಿ ಚಾಲ್ತಿಯಲ್ಲಿರುವ ಇವರಿಗೆ 31 ವರ್ಷವಾಗಿದ್ದರು ಇನ್ನು ಮದುವೆಯಾಗಿಲ್ಲ.
Comments are closed.