Gold Rate:ಅಕ್ಷಯ ತೃತೀಯದ ಬಳಿಕ ಮತ್ತಷ್ಟು ಕುಸಿತ ಕಂಡ ಚಿನ್ನದ ಬೆಲೆ: ಆಚರಣೆ ಬಿಟ್ಟು, ಇಂದೇ ಖರೀದಿ ಮಾಡಿ. ಎಲ್ಲಾ ಒಳ್ಳೆಯದೇ ಆಗುತ್ತದೆ.
Gold Rate: ಚಿನ್ನ ಕೊಂಡುಕೊಳ್ಳಲು ನಮ್ಮ ಜನರಿಗೆ ಬಹಳ ಇಷ್ಟ, ಆದರೆ ಯಾವಾಗ ಅಂದರೆ ಅವಾಗ ಚಿನ್ನ ಕೊಂಡುಕೊಳ್ಳುವುದಕ್ಕೆ ಆಗೋದಿಲ್ಲ, ಸಾಮಾನ್ಯವಾಗಿ ಎಲ್ಲರೂ ಕೂಡ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡಿ, ನಂತರ ಚಿನ್ನ ಖರೀದಿ ಬಗ್ಗೆ ಯೋಚನೆ ಮಾಡುತ್ತಾರೆ. ಒಂದು ವೇಳೆ ನೀವು ಚಿನ್ನ ಕೊಂಡುಕೊಳ್ಳಬೇಕು ಎಂದುಕೊಂಡಿದ್ದರೆ, ಇದು ಸರಿಯಾದ ಸಮಯ. ಈಗ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆ ಕೂಡ ಇಳಿಕೆ ಆಗಿದೆ.
ಹಾಗಾಗಿ ಚಿನ್ನ ಬೇಕು ಎಂದರೆ ಇಂದೇ ಕೊಂಡುಕೊಳ್ಳಿ. ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಇಳಿಕೆ ಆಗಿರುವುದರಿಂದ ಚಿನ್ನ ಬೆಳ್ಳಿ ಖರೀದಿ ಮಾಡಲು ಇದು ಸರಿಯಾದ ಸಮಯ ಆಗಿದೆ. ಮೊದಲ ಹಣಕಾಸಿನ ವಾರ ಈಗ ಶುರುವಾಗಿದ್ದು, ಈ ಸಮಯದಲ್ಲಿ ಚಿನ್ನದ ಬೆಲೆ ಏರಿಕೆ ಆಗುತ್ತದೆ ಅಥವಾ ಇಳಿಕೆ ಆಗುತ್ತದೆ. ಆದರೆ ಇಂದು ಪೂರ್ತಿ ಇಳಿಕೆ ಆಗಿದೆ, ಚಿನ್ನದ ಬೆಲೆ ಈಗ ಎಷ್ಟಿದೆ ಎಂದು ತಿಳಿಸುತ್ತೇವೆ ನೋಡಿ..
ಇಂದಿನಿಂದ ಬ್ಯುಸಿನೆಸ್ ನ ಹೊಸ ವಾರ ಶುರುವಾಗುತ್ತಿದೆ, ಇದು ಮೊದಲ ದಿನ. ಬುಲಿಯನ್ ಮಾರ್ಕೆಟ್ ನಲ್ಲಿ ಶನಿವಾರ ಮತ್ತು ಭಾನುವಾರದ ದಿನಗಳ ರೇಟ್ ಎಷ್ಟಿತ್ತು ಎನ್ನುವ ಮಾಹಿತಿ ಸಿಗುವುದಿಲ್ಲ. ಶುಕ್ರವಾರದ ದಿನ ಬುಲಿಯನ್ ಮಾರ್ಕೆಟ್ ಕ್ಲೋಸ್ ಆಗಿತ್ತು. ಹಾಗಾಗಿ ಇಂದು ದರಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಕೆಲ ದಿನಗಳ ಹಿಂದೆ ಚಿನ್ನದ ಬೆಲೆಯಲ್ಲಿ ತೀವ್ರವಾದ ಏರಿಕೆ ಕಂಡು ಬಂದಿತ್ತು. ಹಾಗಾಗಿ ಇಂದು ಚಿನ್ನದ ಬೆಲೆ ಹೇಗಿದೆ ಎಂದು ತಿಳಿಸುತ್ತೇವೆ ನೋಡಿ..
ಇಂದಿನ ಚಿನ್ನದ ದರ ಹೀಗಿದೆ, ಬೆಂಗಳೂರಿನಲ್ಲಿ 10ಗ್ರಾಮ್ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 50 ರೂಪಾಯಿ ಕಡಿಮೆ ಆಗಿದೆ. ಈಗ 10 ಗ್ರಾಮ್ 22 ಕ್ಯಾರೆಟ್ ಚಿನ್ನದ ಬೆಲೆ ₹55,750 ರೂಪಾಯಿ ಆಗಿದೆ. ಇನ್ನು 24ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10ಗ್ರಾಮ್ ಗೆ 30 ರೂಪಾಯಿ ಇಳಿಕೆ ಆಗಿದೆ, ಈಗ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹60,840 ರೂಪಾಯಿ ಆಗಿದೆ. ಚಿನ್ನ ಅಷ್ಟೇ ಅಲ್ಲದೆ, ಬೆಳ್ಳಿ ಬೆಲೆಯಲ್ಲಿ ಕೂಡ 646 ರೂಪಾಯಿ ಕಡಿಮೆ ಆಗಿದೆ, ಇಂದು ಒಂದು ಕೆಜಿ ಬೆಳ್ಳಿಯ ಬೆಲೆ ₹74,773 ರೂಪಾಯಿ ಆಗಿದೆ.
Comments are closed.