Virat Kohli: CTR ನಲ್ಲಿ ವಿರಾಟ್, ಅನುಷ್ಕಾ ಸವಿದ ಮಸಾಲಾ ದೋಸೆ ಬೆಲೆ ಎಷ್ಟು ಗೊತ್ತೇ?? ಯಪ್ಪಾ ವಿರಾಟ್ ಎಂದ ತಕ್ಷಣ ಬೆಲೆ ಎಷ್ಟಾಗಿದೆ ಗೊತ್ತೇ??
Virat Kohli: ಐಪಿಎಲ್ (IPL) ನಲ್ಲಿ ನಮ್ಮ ಬೆಂಗಳೂರು (Bangalore) ತಂಡವನ್ನು ಕಿಂಗ್ ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ. ಇದೀಗ ಐಪಿಎಲ್ ಹೋಮ್ ಗ್ರೌಂಡ್ ನಲ್ಲೇ ನಡೆಯುತ್ತಿರುವುದರಿಂದ, ಆರ್ಸಿಬಿ (RCB) ಮ್ಯಾಚ್ ಬೆಂಗಳೂರಿನಲ್ಲಿ ಇದ್ದಾಗಲೆಲ್ಲಾ ವಿರಾಟ್ (Virat Kohli) ಅವರು ಇಲ್ಲಿಗೆ ಬರುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್.ಸಿ.ಬಿ. ವರ್ಸಸ್ ಆರ್.ಆರ್ ನಡುವಿನ ಮ್ಯಾಚ್ ನಡೆದು, ಆರ್.ಸಿ.ಬಿ ತಂಡ ಭರ್ಜರಿ ಜಯ ಸಾಧಿಸಿದೆ.
ಈ ಪಂದ್ಯ ವೀಕ್ಷಣೆಗೆ ವಿರಾಟ್ ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರು ಕೂಡ ಬಂದಿದ್ದರು. ಅನುಷ್ಕಾ ಅವರು ಓದಿದ್ದು ಬೆಂಗಳೂರಿನಲ್ಲಿಯೇ, ಇಲ್ಲಿನ ಊಟ ತಿಂಡಿ ಎಲ್ಲವೂ ಅವರಿಗೆ ತುಂಬಾ ಇಷ್ಟ. ಮ್ಯಾಚ್ ನೋಡಲು ಬಂದಿದ್ದಾಗ, ಶನಿವಾರ ಅನುಷ್ಕಾ ಶರ್ಮಾ ಅವರು ಪತಿ ವಿರಾಟ್ ಹಾಗೂ ಅನುಷ್ಕಾ ಅವರ ತಾಯಿ ಹಾಗೂ ಫ್ರೆಂಡ್ಸ್ ಜೊತೆಗೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರಿವ ಸೆಂಟ್ರಲ್ ಟಿಫನ್ ರೂಮ್ ಗೆ ಭೇಟಿ ನೀಡಿದ್ದಾರೆ.
ಅಲ್ಲಿನ ವಿಶೇಷ ಆಹಾರ ಇಡ್ಲಿ, ಮಸಾಲ ದೊಸ, ಕೇಸರಿಭಾತ್, ಗೋಳಿ ಬಜೆ ಇದೆಲ್ಲವನ್ನು ತಿಂದು ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಜೊತೆಗೆ ಎಂಜಾಯ್ ಮಾಡಿದ್ದಾರೆ ವಿರುಷ್ಕ ದಂಪತಿ. ಇವರಿಬ್ಬರು ಬಂದಿರುವ ವಿಷಯ ಗೊತ್ತಾಗಿ, ಅಭಿಮಾನಿಗಳೆಲ್ಲ ಸಿಟಿಆರ್ ಎದುರು ಜಮಾಯಿಸಿದ್ದರು. ಅನುಷ್ಕಾ ಶರ್ಮಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿಟಿಆರ್ ಮೆನು, ಅಲ್ಲಿನ ದೋಸೆ, ಈ ಎಲ್ಲಾ ಫೋಟೋಸ್ ಗಳನ್ನು ಸಹ ಶೇರ್ ಮಾಡಿಕೊಂಡಿದ್ದರು. ಅಭಿಮಾನಿಗಳಂತೂ ತಮ್ಮ ಮೆಚ್ಚಿನ ಸೆಲೆಬ್ರಿಟಿ ಕಪಲ್ ಸಿಟಿಆರ್ ಗೆ ಬಂದಿದ್ದಾರೆ ಎಂದು ಬಹಳ ಸಂತೋಷಪಟ್ಟಿದ್ದಾರೆ.
ಇನ್ನು ಅನುಷ್ಕಾ ವಿರಾಟ್ ತಿಂದ ದೋಸೆ, ಹಾಗೂ ಬೇರೆ ತಿಂಡಿಗಳ ಬೆಲೆ ಎಷ್ಟು ಎಂದು ತಿಳಿಯಲು ಕೂಡ ಅಭಿಮಾನಿಗಳು ಕುತೂಹಲವಾಗಿದ್ದು, ಮಸಾಲೆ ದೋಸೆ ಬೆಲೆ 70 ರೂಪಾಯಿ, ಕೇಸರಿಭಾತ್ ಬೆಲೆ 40 ರೂಪಾಯಿ, ಮಂಗಳೂರು ಬಜ್ಜಿ ಬೆಲೆ 50 ರೂಪಾಯಿ ಆಗಿದೆ. ಆದರೆ ಸಿಟಿಆರ್ ಮಾಲೀಕರು ಇವರಿಬ್ಬರಿಂದ ದುಡ್ಡು ತೆಗೆದುಕೊಂಡಿಲ್ಲ ಎಂದು ಮಾಹಿತಿ ಸಿಕ್ಕಿದೆ, ಆದರೆ ಇದರ ಬಗ್ಗೆ ಅಧಿಕೃತವಾಗಿ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ.
Comments are closed.