Drumstick Benefits: ಸಿನಿಮಾದಲ್ಲಿ ತೋರಿಸಿದಂತೆ ನುಗ್ಗೆಕಾಯಿ ಅದಕ್ಕೆ ಮಾತ್ರ ಅನ್ಕೊಂಡ್ರೆ ತಪ್ಪು: ಇದರಿಂದ ಏನೆಲ್ಲಾ ಲಾಭವಿದೆ ಅಂತ ಗೊತ್ತಾದ್ರೆ. ಖರೀದಿ ಮಾಡಿ ತಂದು ತಿಂತಿರಾ.
Drumstick Benefits: ನುಗ್ಗೆಕಾಯಿವನ್ನು ಸಿನಿಮಾಗಳಲ್ಲಿ ಬೇರೆ ರೀತಿಯಾಗಿ ತೋರಿಸುತ್ತಾರೆ. ಆದರೆ ನುಗ್ಗೆಕಾಯಿಯ ಮಹಾಯ್ದ ಬೇರೆಯೇ ಆಗಿದೆ. ಈ ಕಾಯಿಯನ್ನು ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದ, ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಾಗಬಹುದು. ಹಾಗಿದ್ದರೆ ನುಗ್ಗೆಕಾಯಿಯಿಂದ ಆರೋಗ್ಯಕ್ಕೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ಇಂದು ನಿಮಗೆ ತಿಳಿಸುತ್ತೇವೆ..
ಬ್ಲಡ್ ಶುಗರ್ ಲೆವೆಲ್ :- ನುಗ್ಗೆಕಾಯಿಯಲ್ಲಿ ಹೆಚ್ಚಿನ ಐರನ್ ಕಂಟೆಂಟ್ ಹಾಗೂ ಜೀವಸತ್ವಗಳಿವೆ, ಈ ಕಾರಣದಿಂದ ನುಗ್ಗೆಕಾಯಿ ರಕ್ತದಲ್ಲಿ ಶುಗರ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಸಹಾಯ ಮಾಡುತ್ತದೆ. ಡೈಯಾಬಿಟಿಸ್ ಇರುವವರಿಗೆ ಸಹಕಾರಿ ಆಗಿದೆ, ಪಿತ್ತಕೋಶ ಸರಿಯಾಗಿ ಕೆಲಸ ಮಾಡುವ ಹಾಗೆ ಮಾಡುತ್ತದೆ.
ವಿಟಮಿನ್ A, B, C, D :- ನುಗ್ಗೆಕಾಯಿಯ ಫೈಬರ್ ಅಂಶ, ಕ್ಯಾಲ್ಸಿಯಂ, ಪ್ರೊಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ A, B, C, D, ಐರನ್, ಮೆಗ್ನಿಶಿಯಂ, ತಾಮ್ರ, ಮ್ಯಾಂಗನೀಸ್, ಸೋಡಿಯಂ, ಸತು, ಸೆಲೆನಿಯಂ ಹಾಗೂ ಇನ್ನಿತರ ಪೋಷಕಾಂಶಗಳಿವೆ.
ಕಫ ಹಾಗೂ ವಾತ ಸಮಸ್ಯೆ ಕಡಿಮೆ ಮಾಡುತ್ತದೆ :- ಸಂಧಿವಾತ ಸಮಸ್ಯೆ ಇರುವವರಿಗೆ ನುಗ್ಗೆಕಾಯಿ ಉತ್ತಮವಾದ ಆಹಾರ, ನುಗ್ಗೆಕಾಯಿಯ ತೊಗಟೆ ತೆಗೆದುಕೊಂಡು, ಅದನ್ನು ಪುಡಿ ಮಾಡಿ, ಆ ಪುಡಿಯನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಸೇವಿಸಬೇಕು. ಇದರಿಂದ ವಾತ ಮತ್ತು ಕಫದ ಸಮಸ್ಯೆ ಕಡಿಮೆಯಾಗುತ್ತದೆ.
ಡೈಯಾಬಿಟಿಸ್ :- ಇದು ಹೆಚ್ಚಿನ ಜನರನ್ನು ಕಾಡುತ್ತಿರುವ ಸಮಸ್ಯೆ, ನುಗ್ಗೆಕಾಯಿಯ ರೈಬೊಫ್ಲೆವಿನ್ ಅಂಶ ಇರುವುದದಿಂದ, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಬ್ಲಡ್ ಶುಗರ್ ಅನ್ನು ಕಂಟ್ರೋಲ್ ಮಾಡುತ್ತದೆ. ಹಾಗಾಗಿ, ಡೈಯಾಬಿಟಿಸ್ ಇರುವವರಿಗೆ ಇದು ಒಳ್ಳೆಯ ತರಕಾರಿ ಆಗಿದೆ.
ಇಮ್ಯುನಿಟಿ ಹೆಚ್ಚಿಸುತ್ತದೆ :- ದೇಹದಲ್ಲಿ ಇಮ್ಯುನಿಟಿ ಹೆಚ್ಚಿಸಲು ನುಗ್ಗೆಕಾಯಿಯನ್ನು ಸೇವಿಸಬಹುದು..ಇದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ. ಆಗಾಗ ನುಗ್ಗೆಕಾಯಿ ತಿನ್ನವವುದು ಆರೋಗ್ಯಕ್ಕೆ ಒಳ್ಳೆಯದು.
Comments are closed.