Bank Holidays: ಮುಂದಿನ ತಿಂಗಳಿನಲ್ಲಿ ಭರ್ಜರಿ ರಜೆಯಲ್ಲಿ ಬ್ಯಾಂಕ್: ಎಷ್ಟು ದಿವಸ ಕ್ಲೋಸ್ ಗೊತ್ತಾ? ಬ್ಯಾಂಕ್ ಕೆಲಸ ಈ ದಿನಗಳಲ್ಲಿ ಇದ್ರೆ ಮರೆತು ಬಿಡಿ, ಬೇಗ ಕೆಲಸ ಮುಗಿಸಿಕೊಳ್ಳಿ.
Bank Holidays: ಮುಂದಿನ ಮೇ ತಿಂಗಳಿನಲ್ಲಿ ಬ್ಯಾಂಕ್ ಗಳು ಬರೋಬ್ಬರಿ 12 ದಿನಗಳು ಬಂದ್ ಆಗಿರುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ, ಕೇಂದ್ರ ಸರ್ಕಾರದ ರಜಾ ದಿನಗಳು ಹಾಗೂ ಕೆಲವು ರಾಜ್ಯ ಸರ್ಕಾರದ ರಜಾ ದಿನಗಳು ಈ ಎಲ್ಲಾ ದಿನಗಳು ಕೂಡ ಆರ್.ಬಿ.ಐ ಗೈಡ್ ಲೈನ್ಸ್ ಪ್ರಕಾರ ಬ್ಯಾಂಕ್ ರಜೆ ಇರುತ್ತದೆ. ಈ ರಜೆಗಳು ಮೂರು ರೀತಿಯಲ್ಲಿ ಇರುತ್ತದೆ, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ನ ರಜಾ ದಿನಗಳು.
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆ ಹಾಗು ಬ್ಯಾಂಕ್ ಕ್ಲೋಸಿಂಗ್ ಅಕೌಂಟ್. ಏಪ್ರಿಲ್1 ಕ್ಲೋಸಿಂಗ್ ಅಕೌಂಟ್ಸ್ ದಿನ ಬಹುತೇಕ ಬ್ಯಾಂಕ್ ಗಳು ರಜೆ ಇರುತ್ತದೆ. ಮೇ ತಿಂಗಳಿನಲ್ಲಿ ನೆಗೋಶಿಯಬಲ್ ಆಕ್ಟ್ ನ ಅಡಿಯಲ್ಲಿ ನಾಲ್ಕು ದಿನ ರಜೆ ಇದೆ, ಅದರಲ್ಲಿ ಮೂರು ದಿನಗಳ ರಜೆ ಖಚಿತವಾಗಿದೆ. ಇನ್ನೊಂದು ರಜೆ ಸೋಮವಾರ ದಿನ ಇರುತ್ತದೆ. ಬಳಿಕ ಎಲ್ಲಾ ಬ್ಯಾಂಕ್ ರಜೆ ವೀಕೆಂಡ್ ಗಳಲ್ಲಿ ಇರುತ್ತದೆ. ಬ್ಯಾಂಕ್ ರಜೆಗಳು ಬಹುತೇಕ ಸಾರಿ ಬ್ಯಾಂಕ್ ಇರುವ ಜಾಗದ ಮೇಲೆ ಅವಲಂಬಿಸಿರುತ್ತದೆ.
ಹಾಗಾಗಿ ಬ್ಯಾಂಕ್ ರಜೆಗಳು ಆಯಾ ಜಾಗದ ಮೇಲೆ ಡಿಪೆಂಡ್ ಆಗಿರುತ್ತದೆ. ಈಗ ಮೇ ತಿಂಗಳಿನಲ್ಲಿ ಯಾವೆಲ್ಲಾ ದಿನಗಳು ರಜೆ ಇದೆ ಎಂದು ನೋಡುವುದಾದರೆ..
ಮೇ 1, ಸೋಮವಾರ, ಕಾರ್ಮಿಕರ ದಿನಾಚರಣೆ.
ಮೇ 5, ಶುಕ್ರವಾರ, ಬುದ್ಧ ಪೂರ್ಣಿಮೆ, ಈ ದಿನ ರಜೆ ಇರುವುದು ದೆಹಲಿ, ಹರಿಯಾಣ, ಮಹಾರಾಷ್ಟ್ರ, ಪಂಜಾಬ್, ಉತ್ತರ ಪ್ರದೇಶ, ವೆಸ್ಟ್ ಬೆಂಗಾಲ್, ಉತ್ತರಾಖಂಡ್, ಅಸ್ಸಾಂ, ಬಿಹಾರ್, ಗುಜರಾತ್, ಅರುಣಾಚಲ ಪ್ರದೇಶ ಹಾಗೂ ಛತ್ತೀಸ್ಘಡದಲ್ಲಿ ಇರಲಿದೆ.
ಮೇ 7, ಭಾನುವಾರ ರಜೆ
ಮೇ 9, ಮಂಗಳವಾರ, ರವೀಂದ್ರನಾಥ ಟ್ಯಾಗೋರ್ ಅವರ ಹುಟ್ಟುಹಬ್ಬ.
ಮೇ 13, ಎರಡನೇ ಶನಿವಾರ
ಮೇ 14, ಭಾನುವಾರ
ಮೇ 16, ಮಂಗಳವಾರ, ಸ್ಟೇಟ್ ಡೇ (ಸಿಕ್ಕಿಂ ನಲ್ಲಿ ರಜೆ)
ಮೇ 21, ಭಾನುವಾರ
ಮೇ 22, ಸೋಮವಾರ, ಮಹಾರಾಣ ಪ್ರತಾಪ್ ಜಯಂತಿ, ಈ ರಜೆ ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್ ಹಾಗೂ ರಾಜಸ್ಥಾನದಲ್ಲಿ ಇರಲಿದೆ.
ಮೇ 24, ಬುಧವಾರ, ಕಾಜಿ ನಾಜರುಲ್ ಇಸ್ಲಾಮ್ ಜಯಂತಿ, ತ್ರಿಪುರದಲ್ಲಿ ರಜೆ
ಮೇ 27, ನಾಲ್ಕನೇ ಶನಿವಾರ
ಮೇ 28, ಭಾನುವಾರ.
Comments are closed.