Neer Dose Karnataka
Take a fresh look at your lifestyle.

Yuzvendra Chahal: ತನ್ನ ನೆಚ್ಚಿನ ನಾಯಕನನ್ನು ಆಯ್ಕೆ ಮಾಡಿದ ಯುಜ್ವೇಂದ್ರ ಚಾಹಲ್: ಕೊಹ್ಲಿ ಧೋನಿ ಇಬ್ಬರಿಗೂ ಶಾಕ್ ನೀಡಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Yuzvendra Chahal: ಈಗ ಐಪಿಎಲ್ (IPL) ನಲ್ಲಿ ಶೈನ್ ಆಗುತ್ತಿರುವ ಬೌಲರ್ ಗಳ ಪೈಕಿ, ಯುಜವೇಂದ್ರ ಚಾಹಲ್ ಸಹ ಇದ್ದಾರೆ. ಎರಡು ವರ್ಷಗಳಿಂದ ರಾಜಸ್ತಾನ್ ರಾಯಲ್ಸ್ (Rajasthan Royals) ತಂಡದ ಪರವಾಗಿ ಆಡುತ್ತಿರುವ ಯುಜವೇಂದ್ರ ಚಾಹಲ್ ಅವರು ಈಗಾಗಲೇ ಐಪಿಎಲ್16ನೇ ಸೀಸನ್ ನಲ್ಲಿ 12 ವಿಕೆಟ್ಸ್ ಉರುಳಿಸಿ ಪರ್ಪಲ್ ಕ್ಯಾಪ್ ಪಡೆಯುವ ಕಡೆಗೆ ಸಾಗುತ್ತಿದ್ದಾರೆ. ಚಾಹಲ್ ಅವರು ಹೇಳಿರುವ ಹಾಗೆ ಅವರ ಮೆಚ್ಚಿನ ಕ್ಯಾಪ್ಟನ್ ಯಾರು ಗೊತ್ತಾ?

ಸ್ಪಿನ್ ಮಾಂತ್ರಿಕ ಚಾಹಲ್ ಅವರ ಬೌಲಿಂಗ್ ಎಂದರೆ ಎದುರಾಳಿ ತಂಡದ ಬ್ಯಾಟ್ಸ್ಮನ್ ಗಳು ಭಯ ಪಡುವುದಂತೂ ನಿಜ. ಮೂರು ವರ್ಷಗಳ ಹಿಂದೆ ಫಾರ್ಮ್ ಕಳೆದುಕೊಂಡಿದ್ದ ಚಾಹಲ್ ಅವರು ಕಳೆದ ಸೀಸನ್ ಇಂದ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ಐಪಿಎಲ್ (IPL) ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿರುವ ಚಾಹಲ್ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.

ಇದನ್ನು ಓದಿ: Virat Kohli: CTR ನಲ್ಲಿ ವಿರಾಟ್, ಅನುಷ್ಕಾ ಸವಿದ ಮಸಾಲಾ ದೋಸೆ ಬೆಲೆ ಎಷ್ಟು ಗೊತ್ತೇ?? ಯಪ್ಪಾ ವಿರಾಟ್ ಎಂದ ತಕ್ಷಣ ಬೆಲೆ ಎಷ್ಟಾಗಿದೆ ಗೊತ್ತೇ??

ಅದರಲ್ಲಿ ಚಾಹಲ್ ಅವರಿಗೆ ತಮ್ಮ ಮೆಚ್ಚಿನ ಕ್ಯಾಪ್ಟನ್ ಯಾರು ಎನ್ನುವ ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಶಾಕಿಂಗ್ ಉತ್ತರ ಕೊಟ್ಟಿದ್ದಾರೆ ಚಾಹಲ್. ವಿರಾಟ್ ಕೊಹ್ಲಿ (Virat Kohli), ಎಂ.ಎಸ್.ಧೋನಿ (M S Dhoni), ರೋಹಿತ್ ಶರ್ಮಾ (Rohit Sharma) ಇವರ ಕ್ಯಾಪ್ಟನ್ಸಿಯಲ್ಲಿ ಆಡಿರುವ ಚಾಹಲ್ ಅವರು ಆಯ್ಕೆ ಮಾಡಿದ್ದು ಮತ್ತೊಬ್ಬ ಕ್ಯಾಪ್ಟನ್ ಅನ್ನು. “ನಾನು ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ ಆಡಿದ್ದೇನೆ..ಅವರೆಲ್ಲಾ ಬೌಲರ್ ಫ್ರೀಡಂ ನೀಡುತ್ತಾರೆ.. ಹಾಗಿದ್ದರೂ ನನ್ನ ಮೆಚ್ಚಿನ ಕ್ಯಾಪ್ಟನ್ ಸಂಜು ಫ್ಯಾಮ್ಸನ್.

ಧೋನಿ ಅವರ ಗುಣಗಳನ್ನು ಸಂಜು ಅವರಲ್ಲಿ ನೋಡುತ್ತಿದ್ದೇವೆ.. 2 ವರ್ಷಗಳಿಂದ ಅವರ ಕ್ಯಾಪ್ಟನ್ಸಿಯಲ್ಲಿ ಆಡಿದ್ದೇನೆ, ಅವರಿಂದ ನನ್ನ ಆಟದಲ್ಲಿ ಕೂಡ ಪ್ರಗತಿ ಕಂಡುಬಂದಿದೆ. ಪ್ರತಿ ಮ್ಯಾಚ್ ನಲ್ಲೂ ಸಂಜು ಸ್ಯಾಮ್ಸನ್ ಅವರು ನನಗೆ ಪ್ರೋತ್ಸಾಹ ನೀಡುತ್ತಾರೆ. 4 ಓವರ್ ನಿನ್ನದು, ನಿಮಗೆ ಹೇಗೆ ಬೌಲಿಂಗ್ ಮಾಡಬೇಕು ಅನ್ನಿಸುತ್ತೋ ಹಾಗೆ ಮಾಡಿ..ಈ ಎಲ್ಲಾ ಕಾರಣಗಳಿಂದ ಸಂಜು ಸ್ಯಾಮ್ಸನ್ ಅವರು ನನ್ನ ಮೆಚ್ಚಿನ ಕ್ಯಾಪ್ಟನ್..” ಎಂದು ಚಾಹಲ್ ಅವರು ಹೇಳಿದ್ದಾರೆ.

ಇದನ್ನು ಓದಿ: Business: ಜುಜುಬಿ 150 ರೂಪಾಯಿ ಅಂತೇ ಹೂಡಿಕೆ ಮಾಡಿ, 1 ಕೋಟಿ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಯೋಜನೆ ಯಾವುದು ಗೊತ್ತೇ??

Comments are closed.