Gold Rate Today: ದಿಡೀರ್ ಎಂದು ಮತ್ತಷ್ಟು ಕಡಿಮೆಯಾದ ಚಿನ್ನದ ಬೆಲೆ: ಖರೀದಿಸಲು ಮುಗಿ ಬಿದ್ದ ಜನ. ಬೆಲೆ ಎಷ್ಟಾಗಿದೆ ಗೊತ್ತೇ?? ನೋಡಿ ಖರೀದಿ ಮಾಡಿ ಇಟ್ಟುಕೊಳ್ಳಿ.
Gold Rate Today: ಚಿನ್ನದ ಆಭರಣ ಖರೀದಿ ಮಾಡಬೇಕು ಎಂದುಕೊಂಡವರು ಮೊದಲಿಗೆ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ತಿಳಿದು ನಂತರ ಚಿನ್ನ ಖರೀದಿ ಮಾಡುವ ನಿರ್ಧಾರ ಮಾಡುತ್ತಾರೆ. ಹೀಗೆ ನೀವು ಚಿನ್ನ ಖರೀದಿ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಲೇ ಇದೆ. ಬುಲಿಯನ್ ಮಾರುಕಟ್ಟೆಯಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಇದೀಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ.
ಮೊನ್ನೆಗಿಂತ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು, ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಫೆಬ್ರವರಿ ಇಂದ ಈ ಎರಡು ಲೋಹಗಳ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಬೆಳ್ಳಿಯ ಬೆಲೆ 1 ಕೆಜಿಗೆ ₹80,000 ತಲುಪಬಹುದು ಎಂದು ಕೂಡ ಹೇಳಲಾಗುತ್ತಿದೆ. ಮಲ್ಟಿ ಕಮೋಡಿಟಿ ಎಕ್ಸ್ಛೇಂಜ್ (ಎಂಸಿಕ್ಸ್) ಇಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಇಂದು ಚಿನ್ನದ ಬೆಲೆ ಈ ರೀತಿ ಇದೆ..
ಚಿನ್ನದ ಬೆಲೆಯಲ್ಲಿ ₹61 ರೂಪಾಯಿ ಇಳಿಕೆ ಕಂಡುಬಂದಿದೆ, ಶುಕ್ರವಾರದ 10ಗ್ರಾಮ್ ಚಿನ್ನಕ್ಕೆ ₹59,840 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲಿ 1 ಕೆಜಿಗೆ 49 ರೂಪಾಯಿ ಜಾಸ್ತಿಯಾಗಿ, 1ಕೆಜಿ ಬೆಳ್ಳಿಗೆ ₹75,325 ರೂಪಾಯಿ ಆಗಿದೆ. ಆದರೆ ಇಂದು ಇನ್ನು ಹೆಚ್ಚು ಇಳಿಕೆ ಆಗಿದೆ, 10ಗ್ರಾಮ್ 24 ಕ್ಯಾರೆಟ್ ಚಿನ್ನದ ಬೆಲೆ ₹60,169 ರೂಪಾಯಿ ಆಗಿದ್ದು, 350 ರೂಪಾಯಿ ಕಡಿಮೆ ಆಗಿದೆ. 23 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹59,928 ರೂಪಾಯಿ ಆಗಿದೆ, ಹಾಗೆಯೇ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹55,115 ರೂಪಾಯಿ ಆಗಿದೆ.
ಇನ್ನು 20 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಮ್ ಗೆ ₹45,127 ರೂಪಾಯಿ ಆಗಿದೆ. ಇನ್ನು ಬೆಳ್ಳಿಯ ಬೆಲೆಯಲ್ಲಿ 500 ರೂಪಾಯಿ ಕಡಿಮೆ ಆಗಿದ್ದು, ₹73,194 ರೂಪಾಯಿ ಆಗಿದೆ. ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ತಿಳಿಯಲು ನೀವು ಈ 8955664433 ಗೆ ಮಿಸ್ಡ್ ಕಾಲ್ ಕೊಟ್ಟರೆ ಸಾಕು, ನೀವು ಮಿಸ್ಡ್ ಕಾಲ್ ಕೊಟ್ಟ ನಂಬರ್ ಗೆ ಚಿನ್ನದ ಬೆಲೆಯ ಅಪ್ಡೇಟ್ ನಿಮಗೆ ಸಿಗುತ್ತದೆ.
Comments are closed.