NTR: ರಾತ್ರಿ ರಾತ್ರಿ ತಾನು ಮಾಡಿದ್ದು ತಪ್ಪು ಎಂದು ತಿಳಿದುಕೊಂಡು, ನಟಿಯ ಬಳಿ ಕರೆ ಮಾಡಿ ಕ್ಷಮೆ ಕೇಳಿದ ಎನ್ಟಿಆರ್. ಅಂದು ಏನು ಮಾಡಿದ್ದರು ಗೊತ್ತೇ??
NTR: ನಟ ಜ್ಯೂನಿಯರ್ ಎನ್ಟಿಆರ್ ಅವರು ನಂದಮೂರಿ ಕುಟುಂಬದ ಮೂರನೇ ತಲೆಮಾರಿನ ಕಲಾವಿದ. ಸೀನಿಯರ್ ಎನ್ಟಿಆರ್ ಅವರು ಹಾಗೂ ಬಾಲಯ್ಯ ಅವರ ನಂತರ ಅವರ ಸ್ಥಾನವನ್ನು ತುಂಬಬಲ್ಲ, ಭರವಸೆ ಮೂಡಿಸಿದವರು ಜ್ಯೂನಿಯರ್ ಎನ್ಟಿಆರ್. ನಂದಮೂರಿ ಕುಟುಂಬದಿಂದ ಬಂದ ನಟ ಎಂದು ಹೆಸರು ಇದ್ದರು ಕೂಡ, ಜ್ಯೂನಿಯರ್ ಎನ್ಟಿಆರ್ ಅವರು ಕಷ್ಟ ಮತ್ತು ಪರಿಶ್ರಮದಿಂದ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ..
ಅದರಲ್ಲು ಆರ್.ಆರ್.ಆರ್ ಸಿನಿಮಾ ನಂತರ ಜ್ಯೂನಿಯರ್ ಎನ್ಟಿಆರ್ ಅವರು ಗ್ಲೋಬಲ್ ಸ್ಟಾರ್ ಎನ್ನಿಸಿಕೊಂಡಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ. ಇವರ ಜೊತೆಗೆ ಸಿನಿಮಾ ಮಾಡಬೇಕು ಎಂದು ಹಾಲಿವುಡ್ ನಿರ್ದೇಶಕ ಜೇಮ್ಸ್ ಗನ್ ಕೂಡ ಆಸೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ಎನ್ಟಿಆರ್ ಅವರ ಬಗ್ಗೆ ಆಗಾಗ ಕೆಲವು ವಿಚಾರಗಳು ವೈರಲ್ ಆಗುತ್ತಿರುತ್ತದೆ.
ಇದೀಗ ಜ್ಯೂನಿಯರ್ ಎನ್ಟಿಆರ್ ಅವರು ಹೀರೋಯಿನ್ ಒಬ್ಬರಿಗೆ ಕಾಲ್ ಮಾಡಿ, ಕ್ಷಮೆ ಕೇಳಿದ ವಿಚಾರ ವೈರಲ್ ಆಗಿದೆ. ನಮಗೆಲ್ಲ ಗೊತ್ತಿರುವ ಹಾಗೆ ಯಮದೊಂಗ ಎನ್ಟಿಆರ್ ಅವರ ಕೆರಿಯರ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಇದರಲ್ಲಿ ಹೀರೋಯಿನ್ ಆಗಿ ನಟಿಯರಾದ ಪ್ರಿಯಾಮಣಿ ಹಾಗೂ ಮಮತಾ ಮೋಹನ್ ದಾಸ್ ನಟಿಸಿದ್ದರು. ಈ ಸಿನಿಮಾದಲ್ಲಿ ಒಲಮ್ಮಿ ತಿಕ್ಕೇರಗುಂದ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಆ ಹಾಡಿನಲ್ಲಿ ಎನ್ಟಿಆರ್ ಅವರು ಮಮತಾ ಅವರ ಬೆನ್ನಿಗೆ ಹೊಡೆಯುವ ಹಾಗೆ ದೃಶ್ಯವಿದೆ.
ಆ ರೀತಿ ಮಾಡಬೇಕು ಎಂದು ಡೈರೆಕ್ಟರ್ ಫೋರ್ಸ್ ಮಾಡಿದ್ದಕ್ಕೆ ಮಾಡಿದ್ದರಂತೆ ಜ್ಯೂನಿಯರ್ ಎನ್ಟಿಆರ್. ಆದರೆ ಚಿತ್ರೀಕರಣ ಮುಗಿದ ನಂತರ ಮಮತಾ ಅವರಿಗೆ ಕಾಲ್ ಮಾಡಿ, ಆ ರೀತಿ ಮಾಡಿದ್ದಕ್ಕೆ ಕ್ಷಮೆ ಕೇಳಿದ್ದರಂತೆ. ಮಮತಾ ಅವರು ಅಷ್ಟು ದೊಡ್ಡ ನಟ ಆದರೂ ಹೀಗೆ ಕ್ಷಮೆ ಕೇಳಿದ್ದಕ್ಕೆ ಶಾಕ್ ಆಗಿದ್ದರಂತೆ. ಜ್ಯೂನಿಯರ್ ಎನ್ಟಿಆರ್ ಅವರದ್ದು ಎಷ್ಟು ಸೂಕ್ಷ್ಮವಾದ ಮನಸ್ಸು ಎಂದು ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ.
Comments are closed.