Money: 333 ರೂಪಾಯಿಯಂತೆ ಉಳಿಸಿ, ಹತ್ತೇ ವರ್ಷದಲ್ಲಿ ಬರೋಬ್ಬರಿ 16 ಲಕ್ಷ ಪಡೆಯುವುದು ಹೇಗೆ ಗೊತ್ತೇ?? ಇದಪ್ಪ ಅದೃಷ್ಟ ಅಂದ್ರೆ.
Money: ಹಣ ಸಂಪಾದನೆ ಮಾಡುವ ಎಲ್ಲರೂ ಕೂಡ ಒಂದಷ್ಟು ಹಣವನ್ನು ಉಳಿಸಬೇಕು ಎಂದು ಬಯಸುತ್ತಾರೆ. ಆದರೆ ಎಷ್ಟೇ ಹಣ ಸಂಪಾದನೆ ಮಾಡಿದರು ಸಹ, ಕೊನೆಗೆ ಕೈಯಲ್ಲಿ ಉಳಿಯುವುದು ಬಿಡಿಗಾಸು ಎಂದರೆ ತಪ್ಪಲ್ಲ. ಆದರೆ ಹಣ ಉಳಿಸುವುದು ಮುಂದಿನ ಭವಿಷ್ಯದ ದೃಷ್ಟಿ ಇಂದ ಒಳ್ಳೆಯದು. ಹೀಗೆ ಹಣ ಉಳಿಸಬೇಕು ಎಂದುಕೊಂಡಿರುವವರಿಗೆ ಪೋಸ್ಟ್ ಆಫೀಸ್ ನ ಯೋಜನೆ ಉಪಯೋಗ ತರುತ್ತದೆ. ಇಲ್ಲಿ ನೀವು 333 ರೂಪಾಯಿ ಉಳಿಸುವ ಮೂಲಕ 16 ಲಕ್ಷ ಗಳಿಸಬಹುದು. ಅದು ಹೇಗೆ? ಯಾವ ಯೋಜನೆ ಎಂದು ತಿಳಿಸುತ್ತೇವೆ ನೋಡಿ..
ಉಳಿತಾಯ ಮಾಡಬೇಕು ಎಂದುಕೊಂಡಿರುವವರಿಗೆ ಪೋಸ್ಟ್ ಆಫೀಸ್ ಮಲ್ಲಿ ಅನೇಕ ಯೋಜನೆಗಳು ಇದೆ., ಸಣ್ಣ ಉಳಿತಾಯ ಯೋಜನೆಗಳಲ್ಲಿ ಈ ಯೋಜನೆ ಕೂಡ ಒಂದು. ಇದರಲ್ಲಿ ನೀವು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಹಣ ಹೂಡಿಕೆ ಮಾಡಿದರೆ, ಮೆಚ್ಯುರಿಟಿ ಬಳಿಕ ಒಳ್ಳೆಯ ಆದಾಯ ಪಡೆಯುತ್ತೀರಿ. ಇದು ಸರ್ಕಾರದ ಕಡೆಯಿಂದ ಜಾರಿಗೆ ತಂದಿರುವ ಯೋಜನೆ ಆಗಿರುವುದರಿಂದ ಇಲ್ಲಿ ಅಪಾಯ ಉಂಟಾಗುವುದಿಲ್ಲ, ಜೊತೆಗೆ ಬಡ್ಡಿ ಕೂಡ ಜಾಸ್ತಿಯಿದೆ. ಈ ಯೋಜನೆಯಲ್ಲಿ ನೀವು, 100, 1000, 5000, 10000 ಹೂಡಿಕೆ ಮಾಡಬಹುದು..
ಪೋಸ್ಟ್ ಆಫೀಸ್ ನ ರಿಕರಿಂಗ್ ಡೆಪಾಸಿಟ್ ಯೋಜನೆಯ ಸಮಯ 5 ವರ್ಷಗಳು, ಅಂದರೆ 60 ತಿಂಗಳುಗಳು. ನಿಮಗೆ ಅವಶ್ಯಕತೆ ಇದ್ದರೆ ಇನ್ನು 5 ವರ್ಷಗಳ ಕಾಲ ಯೋಜನೆಯನ್ನು ಮುಂದುವರೆಸಬಹುದು. ಈ ಯೋಜನೆಯಲ್ಲಿ 6.2% ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಬರುಬ ಆದಾಯ ಎಷ್ಟು? ಎಂದು ತಿಳಿಸುತ್ತೇವೆ..ಈ ಯೋಜನೆಯಲ್ಲಿ ನೀವು ಮಿನಿಮಮ್ 100 ರೂಪಾಯಿ, ತಿಂಗಳಿಗೆ 1000 ಅಥವಾ ದಿನಕ್ಕೆ 33 ರೂಪಾಯಿ ಹೂಡಿಕೆ ಮಾಡಿದರೆ, ಮೆಚ್ಯುರಿಟಿ ಸಮಯದಲ್ಲಿ ₹70,431 ರೂಪಾಯಿ ನಿಮ್ಮ ಕೈ ಸೇರುತ್ತದೆ. 10 ವರ್ಷಕ್ಕೆ ₹1.66ಲಕ್ಷ ರೂಪಾಯಿ ಸಿಗುತ್ತದೆ..
ನೀವು ಹೆಚ್ಚು ಹಣ ಗಳಿಕೆ ಮಾಡುತ್ತಿದ್ದು, ಹೆಚ್ಚು ಉಳಿತಾಯ ಮಾಡಬಹುದು ಎಂದಾದರೆ, ದಿನಕ್ಕೆ ₹333 ರೂಪಾಯಿಯ ಹಾಗೆ ತಿಂಗಳಿಗೆ ₹10,000 ರೂಪಾಯಿ ಹೂಡಿಕೆ ಮಾಡಬಹುದು. ಇಲ್ಲಿ ನೀವು 5 ವರ್ಷಕ್ಕೆ ₹7.04 ಲಕ್ಷ ಹೂಡಿಕೆ ಮಾಡುತ್ತೀರಿ. ಇಮ್ಮ ವರ್ಷಗಳ ಕಾಲ ವಿಸ್ತರಣೆ ಮಾಡಿದರೆ, ನಿಮ್ಮ ಕೈಗೆ ₹16.6 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತದೆ.. ಈ ಹಣವನ್ನು ಮನೆ ಕಟ್ಟಲು ಅಥವಾ ಬೇರೆ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು.
Comments are closed.