Horoscope: ಕೇವಲ ಒಂದೇ ಕರ್ಪೂರದಿಂದ ಶುಕ್ರ ದೆಸೆ ಬರುವಂತೆ ಮಾಡಿ, ಶ್ರೀಮಂತರಾಗುವುದು ಹೇಗೆ ಗೊತ್ತೇ? ಮುಟ್ಟಿದೆಲ್ಲಾ ಚಿನ್ನ ಆಗಬೇಕು ಎಂದರೆ ಈ ಕೆಲಸ ಮಾಡಿ ಸಾಕು.
Horoscope: ವಾಸ್ತು ಶಾಸ್ತ್ರವು ಎಲ್ಲರ ಜೀವನಕ್ಕೆ ಬಹಳ ಮುಖ್ಯವಾಗುತ್ತದೆ. ಅವುಗಳನ್ನು ಅನುಸರಿಸಿದರೆ, ಮನೆಯಲ್ಲಿ ನೆಮ್ಮದಿ, ಸಂತೋಷ, ಸಮೃದ್ಧಿ ಎಲ್ಲವು ಚೆನ್ನಾಗಿರುತ್ತದೆ. ವಾಸ್ತು ಶಾಸ್ತ್ರವನ್ನು ಅನುಸರಿಸುವುದರಿಂದ ನಿಮ್ಮ ಜೀವನದಲ್ಲಿ ತೊಂದರೆಗಳು ಕೂಡ ಬರುವುದಿಲ್ಲ. ವಾಸ್ತು ಶಾಸ್ತ್ರದ ಕೆಲವು ಪರಿಹಾರಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ನಿಮ್ಮ ಕಷ್ಟಗಳೆಲ್ಲಾ ಕಳೆದು, ನಿಮಗೆ ಶುಕ್ರದೆಸೆ ಶುರುವಾಗಲು ಕರ್ಪೂರ ಸಹಾಯ ಮಾಡುತ್ತದೆ.

ಕರ್ಪೂರದ ಪರಿಹಾರಗಳನ್ನು ಮಾಡುವುದರಿಂದ ನಿಮ್ಮ ಅನೇಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಹಾಗಿದ್ದರೆ ಕರ್ಪೂರದಿಂದ ಸಿಗುವ ಎಲ್ಲಾ ಪರಿಹಾರಗಳನ್ನು ತಿಳಿಸುತ್ತೇವೆ ನೋಡಿ..
*ಒಂದು ವೇಳೆ ಯಾರಿಗಾದರೂ ದೃಷ್ಟಿ ಆಗಿದ್ದರೆ, ಕರ್ಪೂರ ತೆಗೆದುಕೊಂಡು, ದೃಷ್ಟಿ ಆಗಿರುವ ವ್ಯಕ್ತಿಯ ತಲೆಯಿಂದ ಕಾಲಿನವರೆಗೂ ಕರ್ಪೂರವನ್ನು ಪ್ರದಕ್ಷಿಣೆ ರೀತಿಯಲ್ಲಿ ತಿರುಗಿಸಿ ನಂತರ ಆ ಕರ್ಪೂರವನ್ನು ನೆಲೆದ ಮೇಲೆ ಇಟ್ಟು ಸುಡಬೇಕು. ಇದರಿಂದ ಕೆಟ್ಟ ದೃಷ್ಟಿ ಇಂದ ಮುಕ್ತಿ ಸಿಗುತ್ತದೆ.
*ನಿಮ್ಮ ಮನೆಯಲ್ಲಿ ನೆಗಟಿವ್ ಏನರ್ಜಿ ದೂರ ಆಗಬೇಕು ಎನ್ನುವುದಾದರೆ, ರಾತ್ರಿ ಅಡುಗೆ ಮನೆಯಲ್ಲಿ ಎಲ್ಲಾ ಕೆಲಸಗಳು ಮುಗಿದ ನಂತರ, ಒಂದು ಬೆಳ್ಳಿಯ ಬಟ್ಟಲು ತೆಗೆದುಕೊಂಡು, ಅದರಲ್ಲಿ ಕರ್ಪೂರ ಮತ್ತು ಲವಂಗ ಎರಡನ್ನು ಸುಟ್ಟು ಹಾಕಿ, ಇದರಿಂದ ನಿಮ್ಮ ಮನೆಯ ನೆಗಟಿವ್ ಎನರ್ಜಿ ದೂರವಾಗುತ್ತದೆ. ಹಾಗೆಯೇ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ.
*ಒಂದು ವೇಳೆ ನಿಮಗೆ ಪಿತೃದೋಷ ಅಥವಾ ಕಾಳಸರ್ಪ ದೋಷ ಇದ್ದರೆ, ಅದರಿಂದ ಮುಕ್ತಿ ಪಡೆಯಲು ಕರ್ಪೂರ ಒಳ್ಳೆಯ ಉಪಯೋಗ ಆಗಿದೆ..ಬೆಳಗ್ಗೆ, ಸಾಯಂಕಾಲ ಮತ್ತು ರಾತ್ರಿ ಮೂರು ಸಾರಿ ಮನೆಯಲ್ಲಿ ಕರ್ಪೂರ ಹಚ್ಚುವುದರಿಂದ ಈ ದೋಷದಿಂದ ಮುಕ್ತಿ ಪಡೆಯಬಹುದು.