Chapati Benefits: ನೀವು ಅನ್ನದ ಬದಲು ಚಪಾತಿ ತಿನ್ನುತ್ತಿದ್ದೀರಾ?? ಉತ್ತಮ ಆರೋಗ್ಯಕ್ಕಾಗಿ ನಿಜಕ್ಕೂ ಎಷ್ಟು ಚಪಾತಿ ತಿನ್ನಬೇಕು ಗೊತ್ತೇ?? 90 % ಜನ ಮಾಡುವ ತಪ್ಪು ಏನು ಗೊತ್ತೇ??
Chapati Benefits: ನಮ್ಮ ರಾಜ್ಯದ ಜನರು ಹೆಚ್ಚಾಗಿ ಅನ್ನ ಸೇವಿಸುತ್ತಾರೆ, ಆದರೆ ಕೆಲವರು ಚಪಾತಿ ಪ್ರಿಯರು ಕೂಡ ಇರುತ್ತಾರೆ, ಚಪಾತಿಯಲ್ಲಿ ಈಗ ಹಲವು ವಿಧಗಳಿವೆ,ನಾನ್, ಪುಲ್ಕ, ರೋಟಿ, ತಂದೂರಿ ರೋಟಿ, ರುಮಾಲಿ ರೋಟಿ ಹೀಗೆ ವಿವಿಧ ರೀತಿಯಲ್ಲಿ ಚಪಾತಿ ಸೇವಿಸುತ್ತಾರೆ. ಇನ್ನು ಕೆಲವರು ಹೆಲ್ತ್ ವಿಚಾರದಿಂದ ಅನ್ನಕ್ಕಿಂತ ಚಪಾತಿ ಒಳ್ಳೆಯದು ಎಂದು ಸೇವಿಸುತ್ತಾರೆ. ಆದರೆ ದಿನಕ್ಕೆ ಎಷ್ಟು ಚಪಾತಿ ತಿಂದರೆ ಒಳ್ಳೆಯದು ಎಂದು ಎಲ್ಲರಲ್ಲೂ ಪ್ರಶ್ನೆ ಮೂಡುತ್ತದೆ. ಹೆಚ್ಚಾಗಿ ತಿಂದರೆ ಯಾವುದು ಒಳ್ಳೆಯದಲ್ಲ. ಹಾಗಿದ್ದಲ್ಲಿ ದಿನಕ್ಕೆ ಎಷ್ಟು ಚಪಾತಿ ತಿನ್ನಬಹುದು ಎಂದು ತಿಳಿಸುತ್ತೇವೆ ನೋಡಿ..

ದೇಹದ ತೂಕ ಇಳಿಸಬೇಕು ಎಂದುಕೊಂಡಿರುವವರು ಚಪಾತಿ ತಿನ್ನುವುದರಲ್ಲಿ ಲಿಮಿಟ್ ಇಟ್ಟುಕೊಂಡಿರಬೇಕು. ವಯಸ್ಸಿನ ಗಂಡಸರಿಗೆ ಒಂದು ದಿನಕ್ಕೆ 1700 ಕ್ಯಾಲೋರಿ ಅವಶ್ಯಕತೆ ಇರುತ್ತದೆ, ಇವರು ಒಂದು ಹೊತ್ತಿಗೆ 3 ಚಪಾತಿ, ಎರಡು ಹೊತ್ತಿಗೆ 6 ಚಪಾತಿ ತಿಂದರೆ ಸಾಕಾಗುತ್ತದೆ. ಹೆಣ್ಣುಮಕ್ಕಳಿಗೆ ದಿನಕ್ಕೆ 1400 ಕ್ಯಾಲೋರಿ ಬೇಕಾಗುತ್ತದೆ, ಆಗ ಮಹಿಳೆಯರು ಒಂದು ಹೊತ್ತಿಗೆ 2 ಚಪಾತಿ, ಒಂದು ದಿನಕ್ಕೆ ಒಟ್ಟಾರೆಯಾಗಿ 4 ಚಪಾತಿ ಸೇವಿಸಬಹುದು. ಇದರಿಂದ ನಿಮ್ಮ ದೇಹದ ತೂಕ ಹೆಚ್ಚಾಗದ ಹಾಗೆ ನೋಡಿಕೊಳ್ಳಬಹುದು.
ಅನ್ನ ತಿನ್ನುವುದಕ್ಕಿಂತ ಚಪಾತಿ ಒಳ್ಳೆಯದು ಎಂದು ಬಹುತೇಕರು ತಿನ್ನುತ್ತಾರೆ. ಆದರೆ ಹಾಗೆ ತಿನ್ನುವುದಕ್ಕಿಂತ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಚಪಾತಿ ತಿನ್ನುವುದು ಯಾಕೆ ಅಂದ್ರೆ, ಅದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಆ ಮೂಲಕ ಬೇಗ ಹಸಿವಾಗುವುದಿಲ್ಲ ಎಂದು. ಹಾಗಿದ್ದಾಗ, ಚಪಾತಿ ತಿಂದ ನಂತರ ನೀವು 15 ರಿಂದ 20 ನಿಮಿಷ ವಾಕ್ ಮಾಡುವುದು ಒಳ್ಳೆಯದು. ಅದರಲ್ಲೂ ರಾತ್ರಿ ಸಮಯದಲ್ಲಿ ತಿಂದರೆ, ಒಂದು ಗಂಟೆಯ ನಂತರವೇ ನಿದ್ದೆ ಮಾಡಬೇಕು. ಇಲ್ಲದೆ ಹೋದರೆ, ನಿಮಗೆ ಅನಾರೋಗ್ಯ , ಅಜೀರ್ಣ ಇಂಥ ಸಮಸ್ಯೆ ಕಾಡಬಹುದು.
ಬೇಗ ದೇಹದ ತೂಕ ಇಳಿಸಿಕೊಳ್ಲಬೇಕು ಎಂದುಕೊಂಡಿರುವವರಿಗೆ ಸಾಮಾನ್ಯವಾಗಿ ಗೋಧಿ ಇಂದ ಮಾಡುವ ಚಪಾತಿಗಿಂತ ಹೆಚ್ಚಾಗಿ, ಬೇರೆ ಬೇರೆ ಧಾನ್ಯಗಳಿಂದ ಮಾಡಿದ ಚಪಾತಿ ತಿನ್ನುವುದು ಒಳ್ಳೆಯದು. ಜೋಳ, ಮೆಕ್ಕೆ, ರಾಗಿ, ಹುರುಳಿ ಮತ್ತು ಬಾಜ್ರಾ ಇವುಗಳಿಂದ ಮಾಡಿದ ಚಪಾತಿ ತಿಂದರೆ ಬೇಗ ಹಸಿವಾಗುವುದಿಲ್ಲ. ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು, ಜೊತೆಗೆ ಪದೇ ಪದೇ ತಿನ್ನುವ ಅಗತ್ಯ ಇರುವುದಿಲ್ಲ.