Monthly Returns: ಪ್ರತಿ ತಿಂಗಳು ಕೂತಲ್ಲಿಯೇ ಮೂರು ಸಾವಿರ ಗಳಿಸಬೇಕು ಎಂದರೆ, ಪೋಸ್ಟ್ ನಲ್ಲಿ ಈ ಚಿಕ್ಕ ಕೆಲಸ ಮಾಡಿ. ದೇಶದ ಪತಿಯೊಬ್ಬರು ಗಳಿಸಬಹುದಾದ ಯೋಜನೆ.
Monthly Returns: ಹಣ ಉಳಿತಾಯ ಮಾಡಿ ಒಳ್ಳೆಯ ರಿಟರ್ನ್ಸ್ ಪಡೆಯುವುದಕ್ಕೆ ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆ (Monthly Investment Scheme) ಉಪಯೋಗಕಾರಿ ಆಗಿದೆ. ಈ ಯೋಜನೆಯಲ್ಲಿ ನೀವು ಒಂದು ಸಾರಿ ಹೂಡಿಕೆ ಮಾಡಿ ಪ್ರತಿತಿಂಗಳು ಆದಾಯ ಪಡೆಯಬಹುದು. ಈ ಯೋಜನೆಯ ಮೆಚ್ಯುರಿಟಿ ಸಮಯ 5 ವರ್ಷಗಳು, ಬಳಿಕ ನೀವು ಠೇವಣಿ ಮಾಡಿದ ಹಣವನ್ನು ವಾಪಸ್ ಪಡೆಯಬಹುದು. ಒಂದು ಸಾರಿ ಠೇವಣಿ ಮಾಡಿದರೆ 5 ವರ್ಷದವರೆಗು ಆದಾಯ ಬರುತ್ತದೆ. ಈ ಯೋಜನೆ ಮೇಲಿನ ಹೂಡಿಕೆ ಮಾಡುವ ಹಣವನ್ನು ಸರ್ಕಾರ ಜಾಸ್ತಿ ಮಾಡಿದೆ.
ಈಗ ಸಿಂಗಲ್ ಖಾತೆಗೆ 9 ಲಕ್ಷದವರೆಗೆ ಹಾಗೂ ಜಾಯಿಂಟ್ ಅಕೌಂಟ್ ಗೆ 15 ಲಕ್ಷದ ವರೆಗು ಹೂಡಿಕೆ ಮಾಡಬಹುದು. ಈ ಯೋಜನೆಗೆ 7.4% ಬಡ್ಡಿ ಕೊಡಲಾಗುತ್ತದೆ. ಹಾಗಿದ್ದರೆ ಈ ಯೋಜನೆಯಲ್ಲಿ 2, 3, 4 ಮತ್ತು 5 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಈ ಯೋಜನೆಯಲ್ಲಿ ನೀವು 2 ಲಕ್ಷ ಹೂಡಿಕೆ ಮಾಡಿದರೆ, 4 ವರ್ಷಗಳಲ್ಲಿ ನಿಮಗೆ ₹73,980 ರೂಪಾಯಿ ಬಡ್ಡಿ ಹಣವಾಗಿ ಸಿಗುತ್ತದೆ.. ಹಾಗೆಯೇ 5 ವರ್ಷಗಳ ಕಾಲ ಪ್ರತಿ ತಿಂಗಳು ₹1,233 ರೂಪಾಯಿ ಬಡ್ಡಿ ಹಣ ಸಿಗುತ್ತದೆ.
ಈ ಯೋಜನೆಯಲ್ಲಿ ನೀವು 3 ಲಕ್ಷ ಹೂಡಿಕೆ ಮಾಡಿದರೆ, 5 ವರ್ಷಗಳಲ್ಲೋ ₹1,11,000 ರೂಪಾಯಿ ಬಡ್ಡಿ ಹಣ ನಿಮ್ಮ ಕೈಸೇರುತ್ತದೆ. ಹಾಗೆಯೇ ಪ್ರತಿ ತಿಂಗಳು ₹1,850 ರೂಪಾಯಿ ಆದಾಯ ನಿಮಗೆ ಸಿಗುತ್ತದೆ. 4 ಲಕ್ಷ ಹೂಡಿಕೆ ಮಾಡಿದರೆ, 7.4% ಬಡ್ಡಿಯ ಹಾಗೆ ₹1,48,020 ರೂಪಾಯಿ ಬಡ್ಡಿ ನಿಮಗೆ ಸಿಗುತ್ತದೆ. ಹಾಗೆಯೇ ಪ್ರತಿ ತಿಂಗಳು ₹2,467 ರೂಪಾಯಿ ಬಡ್ಡಿ ಹಣವಾಗಿ ಪಡೆಯುತ್ತೀರಿ.
ಹಾಗೆಯೇ 5 ಲಕ್ಷ ರೂಪಾಯಿ ಇನ್ವೆಸ್ಟ್ ಮಾಡಿದರೆ, 7.4% ಬಡ್ಡಿ ದರದಲ್ಲಿ ಐದು ವರ್ಷಗಳಿಗೆ ಒಟ್ಟು ₹1,84,980 ರೂಪಾಯಿ ಬಡ್ಡಿ ರೂಪದಲ್ಲಿ ಸಿಗುತ್ತದೆ. ಹಾಗೆಯೇ ತಿಂಗಳಿಗೆ ₹3083 ರೂಪಾಯಿ ಬಡ್ಡಿ ಹಣ ಸಿಗುತ್ತದೆ. ನೀವು ಎಷ್ಟು ಮೊತ್ತವನ್ನು ಜಾಸ್ತಿ ಹೂಡಿಕೆ ಮಾಡುತ್ತೀರೋ ಅಷ್ಟು ಬಡ್ಡಿ ಹಣ ನಿಮಗೆ ಜಾಸ್ತಿ ಸಿಗುತ್ತದೆ.
Comments are closed.