Astrology: ನೀವು ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಬೇಕು ಎಂದರೆ, ಈ ಕೆಲಸಗಳಿಂದ ದೂರವಿರಿ. ಏನು ಮಾಡಬಾರದು ಗೊತ್ತೆ?
Astrology: ನಮ್ಮ ಹಿಂದೂ ಸಂಪ್ರದಾಯದ ಆಚರಣೆಗಳಲ್ಲಿ ಜ್ಯೋತಿಷ್ಯ ಶಾಸ್ತ್ರ ಹಾಗೂ ಪೂಜೆ ಪುನಸ್ಕಾರಗಳ ವಿಚಾರದಲ್ಲಿ ಕೆಲವು ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಾರೆ, ಕೆಲವು ವಿಚಾರಗಳ ಬಗ್ಗೆ ಬಹಳ ಹುಷಾರಾಗಿರಬೇಕು. ನಮ್ಮ ಧರ್ಮದಲ್ಲಿ ಕೆಲವು ವಿಷಯಕ್ಕೆ ಪವಿತ್ರತೆ ಇದೆ, ಅವುಗಳನ್ನು ಶುದ್ಧವಾದ ಸ್ಥಳದಲ್ಲಿ ಮಾತ್ರ ಇರಬೇಕು ಎಂದು ಹೇಳಲಾಗುತ್ತದೆ. ಅಂಥ ವಸ್ತುಗಳು ಕೆಳಗೆ ಬಿದ್ದರೆ, ಅದು ಕೆಟ್ಟ ಶಕುನ ಎಂದು ಹೇಳುತ್ತಾರೆ. ಕೆಲವೊಮ್ಮೆ ಗೊತ್ತಿಲ್ಲದೆ ಈ ರೀತಿ ಆಗಬಹುದು, ಆದರೆ ಗೊತ್ತಿದ್ದೂ ಈ ರೀತಿ ಮಾಡಬಾರದು.
ಈ ನಿಯಮಗಳು ಯಾವ ವಿಚಾರಕ್ಕೆ ಎಂದರೆ, ಪೂಜೆ ಮಾಡಲು ಇಟ್ಟುಕೊಂಡ ಪೂಜೆಯ ಸಾಮಗ್ರಿಗಳನ್ನು ಕೆಳಗೆ ಇಡಬಾರದು, ಕರ್ಪೂರ, ತೆಂಗಿನ ಎಣ್ಣೆ ಹಾಗೂ ಹೂವುಗಳನ್ನು ಯಾವುದೇ ಕಾರಣಕ್ಕೂ ಕೆಳಗೆ ಇಡಬಾರದು, ಒಂದು ವೇಳೆ ಕೆಳಗೆ ಬಿದ್ದರೆ, ಅದನ್ನು ಪೂಜೆಗೆ ಬಳಸಬಾರದು. ಹಾಗೂ ಸಾಲಿಗ್ರಾಮವನ್ನು ಈ ರೀತಿ ಕೆಳಗೆ ಇಡಬಾರದು ಎಂದು ದೊಡ್ಡವರು ಹೇಳುತ್ತಾರೆ. ಅದಕ್ಕೆ ಕಾರಣ ಏನು ಅಂದ್ರೆ ಸಾಲಿಗ್ರಾಮ ವಿಷ್ಣುದೇವರ ಪ್ರತಿರೂಪ ಆಗಿದೆ, ಹಾಗಾಗಿ ಯಾವುದೇ ಕಾರಣಕ್ಕೂ ಇಂಥ ತಪ್ಪನ್ನು ಮಾಡಬಾರದು..
ಸಾಲಿಗ್ರಾಮ ಧರಿಸುವುದು ಕೆಲವು ವಿಶೇಷ ಸಮುದಾಯಕ್ಕೆ ಸೇರಿದವರು ಮಾತ್ರ, ಇದನ್ನು ತಂದೆ ತಾಯಿ ಹಾಗೂ ಶಿಕ್ಷಕರಿಗೆ ಸಮಾನ ಎಂದು ಹೇಳುತ್ತಾರೆ. ಹಾಗಾಗಿ ಈ ವಸ್ತುಗಳನ್ನು ನೆಲದ ಮೇಲೆ ಇಡಬಾರದು ಎನ್ನುತ್ತಾರೆ ದೊಡ್ಡವರು. ಹಾಗೆಯೇ ದೀಪವನ್ನು ನೆಲದ ಮೇಲೆ ಇಡಬಾರದು, ದೀಪದ ಕೆಳಗೆ ಸಣ್ಣ ತಟ್ಟೆ ಅಥವಾ ವೀಳ್ಯದ ಎಲೆ ಇಟ್ಟು ಅದರ ಮೇಲೆ ದೀಪ ಇಡಬಹುದು. ಪೂಜೆಯ ಸಾಮಾಗ್ರಿಗಳು ಕೆಳಗೆ ಬಿದ್ದರೆ ದೇವರಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ ಎಂದು ಪರಿಗಣಿಸಲಾಗಿದೆ.
ಹಾಗಾಗಿ ಸಂದರ್ಭ ಹೇಗೆ ಇದ್ದರು ಪೂಜೆಯ ಸಾಮಗ್ರಿಗಳನ್ನು ಕೆಳಗೆ ಇಡಬಾರದು. ಹಾಗೆಯೇ ಚಿನ್ನವನ್ನು ಕೂಡ ಕೆಳಗೆ ಇಡಬಾರದು ಎನ್ನುತ್ತಾರೆ, ಚಿನ್ನವನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ನಾಣ್ಯಗಳನ್ನು ಸಹ ಕೆಳಗೆ ಬೀಳಿಸಬಾರದು. ಈ ಎಲ್ಲಾ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಪೂಜೆಯ ಕೆಲಸಗಳನ್ನು ಬಹಳ ಹುಷಾರಾಗಿ ಮಾಡಬೇಕು.
Comments are closed.