Isha Ambani Bag: ಬೀದಿ ಬದಿ ಸಿಗುವ ಬೊಂಬೆಯಂತೆ ಕಾಣುವ ಈ ಬ್ಯಾಗ್ ಬೆಲೆ ಎಷ್ಟು ಗೊತ್ತೇ? ಅಂಬಾನಿ ಮಗಳು ಬಳಸುವ ಈ ಬ್ಯಾಗ್ ಬೆಲೆ ಕೇಳಿದರೆ…
Isha Ambani Bag: ಮುಕೇಶ್ ಅಂಬಾನಿ ಅವರು ಎಷ್ಟು ದೊಡ್ಡ ಉದ್ಯಮಿ ಎನ್ನುವ ವಿಷಯ ನಮಗೆಲ್ಲ ಗೊತ್ತಿದೆ. ಇವರು ಈಗ ತಮ್ಮ ಸಾಮ್ರಾಜ್ಯವನ್ನು ತಮ್ಮ ಉತ್ತರಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಎಲ್ಲರಿಗೂ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಜವಾಬ್ದಾರಿಗಳನ್ನು ಕೊಟ್ಟಿದ್ದಾರೆ. ಇವರ ಮನೆಯವರು ಸರಿಯಾದ ರೀತಿಯಲ್ಲಿ ತಂದೆಯ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಇತ್ತೀಚೆಗೆ ನಡೆದ ವಿಶ್ವದ ಅತಿದೊಡ್ಡ ಫ್ಯಾಶನ್ ಇವೆಂಟ್ ಗಳಲ್ಲಿ ಒಂದು ಮೆಟ್ ಗಾಲಾ 2023ಇವೆಂಟ್ ನಲ್ಲಿ ಕಾಣಿಸಿಕೊಂಡ ಇಷಾ ಅಂಬಾನಿ ತಮ್ಮ ಸ್ಟೈಲಿಶ್ ಲುಕ್ ಇಂದ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದ ಆಲಿಯಾ ಭಟ್, ಪ್ರಿಯಾಂಕ ಚೋಪ್ರಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದರು. ಹಾಗೆಯೇ ಇಷಾ ಅಂಬಾನಿ ಅವರು ಖ್ಯಾತ ಡಿಸೈನರ್ ಡಿಸೈನ್ ಮಾಡಿರುವ ಕಾಸ್ಟ್ಯೂಮ್ ನಲ್ಲಿ ಕಂಗೊಳಸಿದ್ದಾರೆ.
ಇಶಾ ಅಂಬಾನಿ ಅವರು ಕೋಟಿಗಟ್ಟಲೆ ಬೆಲೆ ಬಾಳುವ ವಜ್ರ, ರತ್ನಗಳು, ಮುಟ್ಟುಗಳಿಂದ ಡಿಸೈನ್ ಮಾಡಲ್ಪಟ್ಟ ರೆಡಿಮೇಡ್ ಸೀರೆ ಕಂ ಗೌನ್ ಧರಿಸಿ ಎಲ್ಲರ ಎದುರು ಬಹಳ ಸುಂದರವಾಗಿ ಕಂಡರು. ಈ ಡ್ರೆಸ್ ಅನ್ನು ಡಿಸೈನ್ ಮಾಡಿರುವುದು ನೇಪಾಳದ ಖ್ಯಾತ ಡಿಸೈನರ್ ಪ್ರಬಲ್ ಗೌರಂಗ್. ಬಹಳ ಸುಂದರವಾಗಿರುವ ಈ ಡ್ರೆಸ್ ನ ಜೊತೆಗೆ ಇಷಾ ಅಂಬಾನಿ ಅವರ ಕೈಯಲ್ಲಿ ಒಂದು ಬ್ಯಾಗ್ ಇತ್ತು, ಅದು ಕೂಡ ಎಲ್ಲರನ್ನು ಆಕರ್ಷಿಸಿತು.
ಈ ಬ್ಯಾಗ್ ಗೂಬೆಯ ಮುಖದ ಆಕಾರದಲ್ಲಿ ಡಿಸೈನ್ ಮಾಡಲಾಗಿದೆ. ಬಹಳ ಫೇಮಸ್ ಆಗಿರುವ ಫ್ಯಾಶನ್ ಹೌಸ್ ಒಂದು ಈ ಬ್ಯಾಗ್ ಡಿಸೈನ್ ಮಾಡಿದ್ದು, ಇದರ ಬೆಲೆ $30,550 ಡಾಲರ್ ಆಗಿದೆ, ಭಾರತದ ಕರೆನ್ಸಿಯಲ್ಲಿ ₹24,97,951 ರೂಪಾಯಿಗಳು. ಈ ಬೆಲೆ ಕೇಳಿದ ನೆಟ್ಟಿಗರು ಒಂದು ಬ್ಯಾಗ್ ಗೆ 2ಮಿಲಿಯನ್ ಖರ್ಚು ಮಾಡುತ್ತಾರಾ ಎಂದು ಟ್ರೋಲ್ ಮಾಡಿದ್ದು, ಈ ಒಂದು ಬ್ಯಾಗ್ ಕದ್ದುಬಿಟ್ಟರೆ ಸಾಕು ಲೈಫ್ ಸೆಟ್ಲ್ ಎನ್ನುತ್ತಿದ್ದಾರೆ.
Comments are closed.