Check Your Loans: ನಿಮ್ಮ ಹೆಸರಿನಲ್ಲಿ ಯಾರಾದರೂ ಸಾಲ ಪಡೆದಿದ್ದಾರೆಯೇ?? ಸ್ನೇಹಿತರು ಟೋಪಿ ಹಾಕಿರುವುದನ್ನು ಚೆಕ್ ಮಾಡುವುದು ಹೇಗೆ ಗೊತ್ತೇ??
Check Your Loans: ಈಗಿನ ಕಾಲದಲ್ಲಿ ಸೈಬರ್ ಕ್ರೈಮ್ ಗಳು ಹೆಚ್ಚಾಗಿ ನಡೆಯುತ್ತಿದೆ. ನಿಮಗೆ ಗೊತ್ತೇ ಆಗದ ಹಾಗೆ ನಿಮ್ಮ ಪ್ಯಾನ್ ಕಾರ್ಡ್ ನಂಬರ್ ಬಳಸಿ ಸಾಲ ಪಡೆದುಕೊಂಡಿರುತ್ತಾರೆ. ಇದು ಹಲವರಿಗೆ ಗೊತ್ತಿಲ್ಲ, ಆದರೆ ಇಂಥ ಮೋಸಗಳು ನಡೆಯುವುದಂತೂ ನಿಜ. ನಿಮಗೆ ಗೊತ್ತಿಲ್ಲದೆ ನಿಮ್ಮ ಮೊಬೈಲ್ ನಂಬರ್ ಮತ್ತು ಪ್ಯಾನ್ ಕಾರ್ಡ್ ನಂಬರ್ ಇಂದ ಸಾಲ ತೆಗೆದುಕೊಳ್ಳುತ್ತಾರೆ. ಇದು ನಿಮಗೆ ಗೊತ್ತಾಗುವ ವೇಳೆಗೆ ನಿಮ್ಮ ಹೆಸರಿನಲ್ಲಿ ಸಾಲ ಮತ್ತು ಅದಕ್ಕೆ ಬಡ್ಡಿ ಎರಡು ಕೂಡ ಜಾಸ್ತಿಯಾಗಿರುತ್ತದೆ. ಕೋವಿಡ್ ಸಮಯದಿಂದ ಇಂಥ ಕ್ರೈಮ್ ಗಳು ಜಾಸ್ತಿಯಾಗಿದೆ.

ಹಾಗಿದ್ದರೆ ಈ ಕ್ರೈಮ್ ಗಳು ಹೇಗೆ ನಡೆಯುತ್ತದೆ? ನಿಮ್ಮ ಪ್ಯಾನ್ ಕಾರ್ಡ್ ಇಂದಲೂ ಯಾರಾದರೂ ಸಾಲ ತೆಗೆದುಕೊಂಡಿದ್ದಾರಾ? ಇದರಿಂದ ಪಾರಾಗುವುದು ಹೇಗೆ? ತಿಳಿಸುತ್ತೇವೆ ನೋಡಿ.. ಮೊದಲಿಗೆ ಈ ಕ್ರೈಮ್ ಹೇಗೆ ನಡೆಯುತ್ತದೆ ಎಂದು ನೋಡುವುದಾದರೆ, ಸ್ಕ್ಯಾಮ್ ಮಾಡುವವರು ನಿಮಗೆ ಗೊತ್ತಿಲ್ಲದ ನಿಮ್ಮ ಮೊಬೈಲ್ ನಂಬರ್ ಮತ್ತು ಪ್ಯಾನ್ ನಂಬರ್ ಇಂದ ಹೀಗೆ ಮಾಡಿ, ನಿಕ್ಮ ಹೆಸರಿನಲ್ಲಿ ಸಾಲ ತೆಗೆದುಕೊಳ್ಳುತ್ತಾರೆ. ಈಗ ಮೊಬೈಲ್ ಅಪ್ಲಿಕೇಶನ್ ಗಳ ಮೂಲಕವೇ ಸಾಲ ಪಡೆಯಬಹುದು. ನಿಮಿಷಗಳ ಸಮಯದಲ್ಲಿ ಆಪ್ ಇಂದ ಸಾಲ ಪಡೆಯುವುದು ಸುಲಭ, ನಿಮ್ಮ ಡೇಟಾ ನೀಡಿ ಅವರು ಹೀಗೆ ಸಾಲ ಪಡೆಯುತ್ತಾರೆ.
ನಿಮ್ಮ ಹೆಸರು ಬಳಸಿ ಯಾರಾದರೂ ಸಾಲ ಪಡೆದಿದ್ದಾರಾ ಎಂದು ಚೆಕ್ ಮಾಡುವುದು ಹೀಗೆ.. ಕೆಲವು ಸಾರಿ ನಾವು ನಮ್ಮ ಪ್ಯಾನ್ ನಂಬರ್ ಮತ್ತು ಆಧಾರ್ ಕಾರ್ಡ್ ಅನ್ನು ಬೇರೆ ಜನರ ಜೊತೆಗೆ ಶೇರ್ ಮಾಡುತ್ತೇವೆ. ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಅಕೌಂಟ್ ಜೊತೆಗೆ ಲಿಂಕ್ ಮಾಡಿದ್ದರೆ, ನಿಮ್ಮCIBIL ಸ್ಕೋರ್ ಚೆಕ್ ಮಾಡಬಹುದು. ಬೇರೆ ಮಾರ್ಗಗಳಲ್ಲಿ ಕೂಡ CIBIL ಸ್ಕೋರ್ ಚೆಕ್ ಮಾಡಬಹುದು, ಇದು ನಿಮ್ಮ ಹೆಸರಿನಲ್ಲಿ ಎಷ್ರು ಸಾಲ ಇದೆ ಎಂದು ತೋರಿಸುತ್ತದೆ. ಒಂದು ವೇಳೆ ನಿಮ್ಮ ಹೆಸರಲ್ಲಿ ಬೇರೆ ಯಾರಾದರೂ ಸಾಲ ಪಡೆದು ಅವರು ಅದನ್ನು ಪಾವತಿ ಮಾಡದೆ ಇದ್ದರೆ ನಿಮ್ಮ CIBIL ಸ್ಕೋರ್ ಕಡಿಮೆ ಆಗುತ್ತದೆ. CIBIL, Equifax, Experian ಮತ್ತು CRIF ಇವುಗಳಲ್ಲಿ ಕೂಡ ಕ್ರೆಡಿಟ್ ಕಾರ್ಡ್ ಹಿಸ್ಟರಿ ಪಡೆಯಬಹುದು. ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳ ಮೂಲಕ ಇದು ಸಾಧ್ಯವಾಗುತ್ತದೆ.
ಒಂದು ಕ್ರೆಡಿಟ್ ಕಾರ್ಡ್ ವಿಚಾರದಲ್ಲಿ ಹೆಚ್ಚು ಕಡಿಮೆ ಆಗಿದೆ ಎನ್ನಿಸ್8ದರೆ, ತಕ್ಷಣವೇ ಕ್ರೆಡಿಟ್ ಬ್ಯೂರೋ ಮತ್ತು ಕ್ರೆಡಿಟ್ ಪೂರೈಕೆ ಮಾಡಿದವರಿಗೆ ತಿಳಿಸಿ, ಸರಿಮಾಡಿಕೊಳ್ಳಬೇಕು. ಇಂಥ ತೊಂದರೆಗಳು ನಿಮಗೆ ಆಗಬಾರದು ಎನ್ನುವುದಾದರೆ ನೀವು ಬಹಳ ಹುಷಾರಾಗಿರಬೇಕು. ಗೊತ್ತಿಲ್ಲದವರ ಹತ್ತಿರ ನಿಮ್ಮ ಆಧಾರ್ ಅಥವಾ ಪ್ಯಾನ್ ಕಾರ್ಡ್ ಫೋಟೋಕಾಪಿ ಕೊಡುವಾಗ ಅದರ ಮೇಲೆ ಯಾವ ಉದ್ದೇಶಕ್ಕಾಗಿ ಕೊಡುತ್ತಿದ್ದೀರ ಎಂದು ಬರೆದು ಇಡಿ. ಹೀಗೆ ಮಾಡುವುದರಿಂದ, ನೀವು ಬರೆಯುವ ಅಕ್ಷರಗಳು ಕಾರ್ಡ್ ನ ಮೇಲೆ ಬರುತ್ತದೆ, ಅವರು ಬೇರೆ ಉದ್ದೇಶಕ್ಕೆ ಬಳಸಲು ಆಗುವುದಿಲ್ಲ.