Haldi Milk Benefits: ಹೊರಗಡೆ ಮಳೆ ಬರುವ ಈ ಕಾಲದಲ್ಲಿ ಅರಿಶಿನ ಹಾಲು ಕುಡಿದರೆ, ದಿಡೀರ್ ಎಂದು ಏನಾಗುತ್ತದೆ ಗೊತ್ತೇ? ತಿಳಿದರೆ ಲೀಟರ್ ಲೀಟರ್ ಕುಡಿಯುತ್ತಿರಿ.
Haldi Milk Benefits: ಅರಿಶಿನ ಹಾಲು ಇದನ್ನು ಮನೆಯಲ್ಲಿ ಬಹಳ ಸುಲಭವಾಗಿ ತಯಾರಿಸಬಹುದು ಅರಿಶಿನ ಹಾಲನ್ನು ಸಾಮಾನ್ಯವಾಗಿ ಅನಾರೋಗ್ಯ ಉಂಟಾದಾಗ ಕೊಡುತ್ತಾರೆ, ಕೆಲವು ಸಾರಿ ಕಾಫಿ ಟೀ ಬದಲಾಗಿ ಕೂಡ ಇದನ್ನು ಸೇವಿಸಲಾಗುತ್ತದೆ. ಅರಿಶಿನ ಹಾಲಿನಲ್ಲಿ ಸಾಕಷ್ಟು ಪೋಷಕಾಂಶ ಎಲ್ಲವೂ ಇರುವುದರಿಂದ ಈ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಿದ್ದರೆ ಅರಿಶಿನ ಹಾಲು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಸುತ್ತೇವೆ ನೋಡಿ..
ಇಮ್ಯುನಿಟಿ ಹೆಚ್ಚಿಸುತ್ತದೆ :- ಅರಿಶಿನದಲ್ಲಿ ಕರ್ಕ್ಯೂಮಿನ್ ಎನ್ನುವ ಅಂಶವಿದೆ, ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಆಂಟಿವೈರಲ್ ಅಂಶಗಳು ಇರುವುದರಿಂದ ಅದು ಆರೋಗ್ಯಕ್ಕೆ ಒಳ್ಳೆಯದು, ಹಾಗೆಯೇ ದೇಹದ ಇಮ್ಯುನಿಟಿಯನ್ನು ಜಾಸ್ತಿ ಮಾಡುತ್ತದೆ.
ಜೀರ್ಣಕ್ಕೆ ಒಳ್ಳೆಯದು :- ಒಂದು ವೇಳೆ ನಿಮಗೆ ಜೀರ್ಣ ಆಗುವುದಕ್ಕೆ ಸಮಸ್ಯೆ ಗಳು ಇದ್ದರೆ, ಅರಿಶಿನ ಹಾಲಿನಲ್ಲಿ ಆಂಟಿ ಮೈಕ್ರೊಬಿಯಲ್ ಮತ್ತು ಉರಿಯೂತ ಕಡಿಮೆ ಮಾಡುವ ಅಂಶಗಳು ಇರುವುದರಿಂದ ನಿಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದೆ ಯಾವುದೇ ತೊಂದರೆ ಇದ್ದರು ಎಲ್ಲವನ್ನು ಸರಿ ಮಾಡುತ್ತದೆ.
ಮೂಳೆಗಳ ಶಕ್ತಿ ಹೆಚ್ಚಿಸುತ್ತದೆ :- ಅರಿಷಿನ ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಅಂಶಗಳು ಜಾಸ್ತಿ ಇದ್ದು, ಇದು ಮೂಳೆಗಳಿಗೆ ಬಹಳ ಒಳ್ಳೆಯದು. ಹಾಗಾಗಿ ಅರಿಶಿನ ಹಾಲು ಸೇವನೆ ಇಂದ ಅಸ್ಥಿಪಂಜರಕ್ಕೆ ಒಳ್ಳೆಯದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು :- ಹೃದಯದ ಆರೋಗ್ಯದ ಬಗ್ಗೆ ನಾವೆಲ್ಲರೂ ಹೆಚ್ಚು ಕಾಳಜಿ ವಹಿಸುತ್ತೇವೆ. ಅರಿಶಿನ ಹಾಲಿನಲ್ಲಿ ಇರುವ ಪೋಷಕಾಂಶಗಳು ನಮ್ಮ ಹೃದಯವನ್ನು ಆರೋಗ್ಯಕರವಾಗಿ ಇಡಲು ಸಹಾಯ ಮಾಡುತ್ತದೆ.
ಡೈಯಾಬಿಟಿಸ್ ಕಂಟ್ರೋಲ್ :- ಅರಿಶಿನ ಹಾಲಿಗೆ ಸಕ್ಕರೆ ಬೆರೆಸದೆ ಹಾಗೆ ಕುಡಿಯಬೇಕು, ಆಗ ದೇಹದಲ್ಲಿ ಡೈಯಾಬಿಟಿಸ್ ಮಟ್ಟವನ್ನು ಕಂಟ್ರೋಲ್ ಮಾಡಬಹುದು.
Comments are closed.