Dam Empty Case: ಆತನ ಆಸ್ತಿ ಕೋಟಿ ಕೋಟಿ, ಡ್ಯಾಮ್ ಖಾಲಿ ಮಾಡಿಸಿದಕ್ಕೆ ವಿಧಿಸಿದ ಚಿಲ್ಲರೆ ದಂಡ ಎಷ್ಟು ಗೊತ್ತೇ?? ಈ ಖುಷಿಗೆ ದಂಡ ಬೇಕೇ?? ಶಾಕ್ ಆಗಿ ಶೇಕ್ ಆದ ನೆಟ್ಟಿಗರು.
Dam Empty Case: ಇತ್ತೀಚೆಗೆ ಛತ್ತೀಸ್ಘಡದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ರಾಜೇಶ್ ವಿಶ್ವಾಸ್ ನೀರಿನಲ್ಲಿ ಬಿದ್ದ ಫೋನ್ ಹುಡುಕಲು 41 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿದ ಘಟನೆ ಭಾರಿ ಸಂಚಲನ ಸೃಷ್ಟಿಸಿದೆ. ಕಳೆದ ಭಾನುವಾರ ರಾಜೇಶ್ ತನ್ನ. ಸ್ನೇಹಿತರ ಜೊತೆಗೆ ಕೇರ್ ಕಟ್ಟಾ ಅಣೆಕಟ್ಟಿಗೆ ಬಂದಿದ್ದು, ಅಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಮೊಬೈಲ್ ನೀರಿಗೆ ಬಿದ್ದಿದೆ, ಅದು 15 ಆಳದ ಸ್ಥಳವಾಗಿತ್ತು. ಮೊಬೈಲ್ ಹುಡುಕಲು ಕೆಲವರು ನೀರಿಗೆ ಇಳಿದರು ಸಹ ಪ್ರಯೋಜನವಾಗಲಿಲ್ಲ.

ನೀರು ಆಳ ಇರುವುದರಿಂದ ಮೊಬೈಲ್ ಸಿಕ್ಕಿಲ್ಲ ಎನ್ನಲಾಗಿತ್ತು. ಅದಕ್ಕಾಗಿ ಸೋಮವಾರದಿಂದ ಗುರುವಾರದವರೆಗೂ ಸುಮಾರು 3 ದಿನಗಳ ಕಾಲ 30Hp ಡೀಸೆಲ್ ಪಂಪ್ ಗಳನ್ನು ತರಿಸಿ, ಸುಮಾರು 41ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿದ್ದಾನೆ. ಇಷ್ಟು ನೀರು ಸುಮಾರು 1500 ಎಕರೆ ಭೂಮಿಗೆ ನೀರಾವರಿ ಕೆಲಸಕ್ಕೆ ಬಳಕೆಯಾಗುತ್ತಿತ್ತು ಎನ್ನಲಾಗಿದೆ. ಕೊನೆಗೆ ನೀರನ್ನು ಪೂರ್ತಿಯಾಗಿ ಖಾಲಿ ಮಾಡಿದ ನಂತರ ಮೊಬೈಲ್ ಸಿಕ್ಕಿದೆಯಾದರು, ಅದು ಕೆಟ್ಟು ಹೋಗಿದೆ, ಬಳಕೆಗೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಇಂಥ ಕೆಲಸಕ್ಕೆ ಮಾಡಿದ್ದಕ್ಕೆ ತಕ್ಷಣವೇ ಈ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಇದನ್ನು ಓದಿ..Monsoon: ಮಾನುಸೂನ್ ಬಗ್ಗೆ ಕೇಳಿ ಬಂತು ಎಲ್ಲಾ ಮಾಹಿತಿ- ಈ ಬಾರಿ ಬರಗಾಲವೋ? ಅತಿ ವೃಷ್ಟಿಯೋ?? ಹೇಗಿರಲಿದೆ ಗೊತ್ತೇ ಈ ಬಾರಿಯ ಮಳೆಗಾಲ.
ಆದರೆ ರಾಜೇಶ್ ತಾವು ಮಾಡಿದ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.. 5 ಅಡಿಯಷ್ಟು ನೀರನ್ನು ತೆಗೆಯಲು ಸರ್ಕಾರ ಅನುಮತಿ ಕೊಟ್ಟಿತ್ತು, ಇಲಾಖೆಗೆ ಬೇಕಾದ ಮಾಹಿತಿಗಳು ಮೊಬೈಲ್ ನಲ್ಲೇ ಇದ್ದ ಕಾರಣ ಹೀಗೆ ಮಾಡಬೇಕಾಯಿತು ಆದರೆ ಮೊಬೈಲ್ ಹಾಳಾಗಿದೆ. ಆದರೆ ಇದರಿಂದ ಸರ್ಕಾರಕ್ಕೆ ನಷ್ಟವಾಗಿಲ್ಲ, ಹೊರತೆಗೆದಿರುವ ನೀರು, ಬಳಸಲು ಯೋಗ್ಯತೆ ಇಲ್ಲದ ನೀರು ಎಂದು ಹೇಳಿದ್ದಾರೆ. ಇನ್ನು ಈ ವ್ಯಕ್ತಿಗೆ ಸರ್ಕಾರ ದಂಡ ಹಾಕಿದೆ, ₹53,092 ರೂಪಾಯಿ ದಂಡ ವಿಧಿಸಿದೆ.
41ಲಕ್ಷ ಲೀಟರ್ ನೀರು ಖಾಲಿಯಾಗಿದೆ, 4,104 ಕ್ಯೂಬಿಕ್ ಮೀಟರ್ ನಷ್ಟು ನೀರು ನಷ್ಟವಾಗಿದೆ. ಒಂದು ಕ್ಯೂಬಿಕ್ ಮೀಟರ್ ನೀರಿಗೆ ₹10.50 ರೂಪಾಯಿಯ ಹಾಗೆ, ₹43,092 ರೂಪಾಯಿ ದಂಡ ಹಾಕಲಾಗಿದೆ, ಅನುಮತಿ ಇಲ್ಲದೆ ನೀರು ಖಾಲಿ ಮಾಡಿರುವುದಕ್ಕೆ ₹10,000 ಸಾವಿರ, ಒಟ್ಟಾರೆಯಾಗಿ ₹53,092 ರೂಪಾಯಿ ದಂಡ ವಿಧಿಸಿದ್ದು, 10 ದಿನಗಳ ಒಳಗೆ ಪಾವತಿ ಮಾಡಬೇಕು ಎಂದು ಸೂಕನೆ ನೀಡಿದೆ. ಈ ವ್ಯಕ್ತಿಯ ಹತ್ತಿರ ಕೋಟಿಗಟ್ಟಲೇ ಹಣ ಇರುವಾಗ, ಚಿಲ್ಲರೆ ಮೊತ್ತವನ್ನು ದಂಡವಾಗಿ ಹಾಕುವುದೇ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಇದನ್ನು ಓದಿ..Business Idea: ಪ್ರತಿ ದಿನವೂ ಗ್ರಾಹಕರು ಹುಡುಕಿಕೊಂಡು ಬರುವ ಈ ಬಿಸಿನೆಸ್ ಆರಂಭಿಸಿ, ಲಕ್ಷ ಲಕ್ಷ ಗಳಿಸಿ. ಯಾವುದು ಗೊತ್ತೇ ಆ ಉದ್ಯಮ?