News: ಸಾಲ ಕೊಟ್ಟ, ತೀರಿಸಲು ಲೇಟ್ ಆದಾಗ ಹಣ ಬೇಡ ಆಸೆ ತೀರಿಸು ಎಂದ. ಕೊನೆಗೆ ಆಕೆ ಬೇರೆ ದಾರಿ ಕಾಣದಿದ್ದಾಗ ಏನು ಮಾಡಿದ್ದಾಳೆ ಗೊತ್ತೇ??
News: ನಮ್ಮ ದೇಶದಲ್ಲಿ ಹೆಣ್ಣಿಗೆ ಈಗಲೂ ಸಂಪೂರ್ಣವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಮಧ್ಯರಾತ್ರಿ 12ಗಂಟೆಗೆ ಒಂದು ಹೆಣ್ಣು ಸ್ವಾತಂತ್ರ್ಯವಾಗಿ ಯಾವುದೇ ಭಯವಿಲ್ಲದೆ ರೋಡಿನಲ್ಲಿ ಓಡಾಡಿದ ದಿನ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಹಾಗೆ ಎಂದು ದೊಡ್ಡವರು ಹೇಳುತ್ತಾರೆ. ಆದರೆ ಓಂದು ಹೆಣ್ಣಿಗೆ ಇನ್ನು ಆ ಸ್ವಾತಂತ್ರ್ಯ ಸಿಕ್ಕಿಲ್ಲ. ಹೆಣ್ಣನ್ನು ತಮಗೆ ಬೇಕಾದ ಹಾಗೆ ಉಪಯೋಗಿಸಿಕೊಳ್ಳಬೇಕು ಎಂದು ಯೋಚಿಸುವ ಗಂಡಸರೇ ಇಲ್ಲಿ ಹೆಚ್ಚಾಗಿದ್ದಾರೆ..
ಒಂದು ಹೆಣ್ಣು ಸ್ವಲ್ಪ ಸಲುಗೆಯಿಂದ ಚೆನ್ನಾಗಿ ಮಾತನಾಡಿಸಿದರೆ, ಆಕೆಯನ್ನು ಹೇಗಾದರು ಮಾಡಿ ಪಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಶಾಲೆ, ಕಾಲೇಜು, ಆಫೀಸ್ ಎಲ್ಲಿಯು ಹೆಣ್ಣಿಗೆ ಸಂಪೂರ್ಣ ಸುರಕ್ಷತೆ ಇಲ್ಲ. ಇದೇ ರೀತಿಯಲ್ಲಿ ಒಬ್ಬ ವ್ಯಕ್ತಿ ಒಂದು ಹುಡುಗಿಯನ್ನು ತನಗೆ ಬೇಕಾದ ಹಾಗೆ ಬಳಸಿಕೊಳ್ಳಲು ಪ್ರಯತ್ನ ಮಾಡಿದ್ದ. ನಡೆದಿದ್ದೇನು ಎಂದರೆ, ನಿಜಾಮಾಬಾದ್ ನ ಮೋಪಾಲ್ ಮಂಡಲದ ಮುದಕ್ ಪೆಲ್ಲಿ ಗ್ರಾಮದಲ್ಲಿ 21 ವರ್ಷದ ಹುಡುಗಿ ಗೌತಮಿ ವಾಸವಾಗಿದ್ದಳು. ಇದನ್ನು ಓದಿ..Dam Empty Case: ಆತನ ಆಸ್ತಿ ಕೋಟಿ ಕೋಟಿ, ಡ್ಯಾಮ್ ಖಾಲಿ ಮಾಡಿಸಿದಕ್ಕೆ ವಿಧಿಸಿದ ಚಿಲ್ಲರೆ ದಂಡ ಎಷ್ಟು ಗೊತ್ತೇ?? ಈ ಖುಷಿಗೆ ದಂಡ ಬೇಕೇ?? ಶಾಕ್ ಆಗಿ ಶೇಕ್ ಆದ ನೆಟ್ಟಿಗರು.
ಈಕೆ ಎಲ್ಲಮ್ಮ ಗುಟ್ಟಾ ಚೌಕದಲ್ಲಿ ಇರುವ ಮನೋರಮಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಮನೆಯಲ್ಲಿ ಅವಶ್ಯಕತೆ ಇತ್ತು ಎಂದು ₹80,000 ಸಾಲ ತೆಗೆದುಕೊಂಡು, ತನ್ನ ಸಂಬಳದಲ್ಲಿ ಪ್ರತಿ ತಿಂಗಳು ₹5000 ಕಟ್ ಮಾಡಿಕೊಳ್ಳಲು ಒಪ್ಪಂದಕ್ಕೆ ಸಹಿ ಹಾಕಿದ್ದಳು..ಆದರೆ ಒಪ್ಪಂದವನ್ನು ಬಿಟ್ಟು, ಒಂದೇ ಸಾರಿ ಪೂರ್ತಿ ಸಾಲ ತೀರಿಸಬೇಕು ಎಂದು ಆಕೆಯ ಮೇಲೆ ಒತ್ತಡ ಹೇರುವುದಕ್ಕೆ ಶುರು ಮಾಡಲಾಯಿತು. ವೈದ್ಯರು ಕೂಡ ಆಕೆಯ ಮೇಲೆ ಒತ್ತಡ ಹಾಕಿ, ಹಿಂಸೆ ಮಾಡಿದ್ದಾರೆ. ಹಣ ಇಲ್ಲದೆ ಹೋದರೆ, ತನ್ನ ಆಸೆ ಪೂರೈಸಲು ತನ್ನ ಹತ್ತಿರ ಬರಬೇಕು ಎಂದು ಆಕೆಗೆ ಹೇಳಿದ್ದು..
ಗೌತಮಿ ಇದರಿಂದ ಮನನೊಂದು ಹಣ ಕೊಡಲು ಆಗದೆ ಅವರು ಹೇಳಿದ ಹಾಗೆ ಕೇಳಲು ಇಷ್ಟವಿಲ್ಲದೆ ತನ್ನ ಉಸಿರು ನಿಲ್ಲಿಸಿಕೊಂಡಿದ್ದಾಳೆ. ಹೀಗೆ ಮಾಡಿಕೊಳ್ಳುವ ಮೊದಲು ಆಸ್ಪತ್ರೆಯಲ್ಲಿ ಒಬ್ಬರಿಗೆ ಕರೆಮಾಡಿ, ತಾನು ಹೀಗೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ. ಅವರು ಬೇಡ ಎಂದು ಹೇಳಿ, ತಕ್ಷಣವೇ ಆಕೆಯ ಮನೆಯವರಿಗೆ ತಿಳಿಸಲಾಯಿತು, ಆದರೆ ಆಕೆ ಇದ್ದ ಜಾಗಕ್ಕೆ ಹೋಗುವ ವೇಳೆಗೆ ಗೌತಮಿ ಕೊನೆಯುಸಿರೆಳೆದಿದ್ದಳು. ಇದೀಗ ಆಕೆಯ ಮನೆಯವರು ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಕೇಳುತ್ತಿದ್ದಾರೆ. ಆಸ್ಪತ್ರೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ.. ಬಾಳಿ ಬದುಕಬೇಕಿದ್ದ ಹುಡುಗಿ ಅನ್ಯಾಯವಾಗಿ ಈ ರೀತಿ ಮಾಡಿಕೊಂಡಳು. ಇದನ್ನು ಓದಿ..Business Idea: ಪ್ರತಿ ದಿನವೂ ಗ್ರಾಹಕರು ಹುಡುಕಿಕೊಂಡು ಬರುವ ಈ ಬಿಸಿನೆಸ್ ಆರಂಭಿಸಿ, ಲಕ್ಷ ಲಕ್ಷ ಗಳಿಸಿ. ಯಾವುದು ಗೊತ್ತೇ ಆ ಉದ್ಯಮ?
Comments are closed.