Watch Movie: ಬಿಗ್ ನ್ಯೂಸ್: ಇನ್ನು ಮುಂದೆ ಸಿನಿಮಾ ಬಿಡುಗಡೆಯಾದ ದಿನವೇ ಮನೆಯಲ್ಲೂ ಕೂತು ನೋಡಬಹುದು. ಹೇಗೆ ಗೊತ್ತೇ??
Watch Movie: ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡುವ ಮಜವೇ ಬೇರೆ. ಆದರೆ ಮೊದಲ ದಿನ ಥಿಯೇಟರ್ ಗಳಲ್ಲಿ ಸಿಕ್ಕಾಪಟ್ಟೆ ರಶ್ ಇರುವುದರಿಂದ ಬಹಳಷ್ಟು ಜನರು ಮೊದಲ ದಿನ ಸಿನಿಮಾ ನೋಡಲು ಥಿಯೇಟರ್ ಗೆ ಹೋಗುವುದಿಲ್ಲ, ಬದಲಾಗಿ ಮರುದಿನ ಅಥವಾ ಮುಂದಿನ ಪ್ರದರ್ಶನಕ್ಕೆ ಹೋಗುತ್ತಾರೆ. ಆದರೆ ಸಿನಿಮಾ ಬಿಡುಗಡೆಯಾದ ದಿನ ನಿಮ್ಮ ಮನೆಯಲ್ಲಿ ಕೂತು ಫಸ್ಟ್ ಡೇ ಸಿನಿಮಾ ನೋಡುವ ಅವಕಾಶ ಸಿಕ್ಕರೆ ಹೇಗಿರುತ್ತೆ?
ಈ ಕಲ್ಪನೆಯೇ ಹೊಸದಾಗಿದೆ ಅನ್ನಿಸುವುದು ಸಹಜ.
ಆದರೆ ಇದು ನಿಜ, ಸಿನಿಮಾ ಬಿಡುಗಡೆಯಾದ ಮೊದಲ ದಿನ ಮನೆಯಲ್ಲೇ ಕೂತು ಸಿನಿಮಾ ನೋಡುವ ಅವಕಾಶವನ್ನು ಆಂಧ್ರಪ್ರದೇಶದ ಸರ್ಕಾರ ನೀಡುವುದಕ್ಕೆ ಮುಂದಾಗಿದೆ. ಆಂಧ್ರಪ್ರದೇಶ ಸ್ಟೇಟ್ ಫೈಬರ್ ನೆಟ್ ಲಿಮಿಟೆಡ್ ಮೂಲಕ ಈ ಅವಕಾಶ ಕೊಡುವ ಪ್ಲಾನ್ ಮಾಡಿದ್ದು, ಇದು ಸಿನಿಪ್ರಿಯರಿಗೆ ಗುಡ್ ನ್ಯೂಸ್ ಆಗಿದೆ. ಫೈಬರ್ ನೆಟ್ ಹೊಂದಿರುವವರಿಗೆ ಮನೆಯಲ್ಲೇ ಫಸ್ಟ್ ಡೇ ಸಿನಿಮಾ ನೋಡುವ ಅವಕಾಶ ನೀಡಲಾಗುತ್ತದೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವ ಅನುಕೂಲ ಹೊರತರುತ್ತೇವೆ ಎಂದು APSFL ಅಧ್ಯಕ್ಷ ಗೌತಮ್ ರೆಡ್ಡಿ ತಿಳಿಸಿದ್ದಾರ್ಸ್. ಇದನ್ನು ಓದಿ..Tamilnadu: ಈ ತಾಯಿ ಕಷ್ಟ ಯಾವುದೇ ತಾಯಿಗೆ ಬೇಡ ದೇವರೇ- ಬಿಟ್ಟಿ ಭಾಗ್ಯ ಕೊಡುವ ತಮಿಳುನಾಡಿನ ನೈಜ ಮುಖ- ಏನಾಗಿದೆ ಗೊತ್ತೇ??
ಸಿನಿಮಾ ಬಿಡುಗಡೆ ಆಗುವ ದಿನವೇ ಸಿನಿಪ್ರಿಯರು APSFL ಮೂಲಕ ಸಿನಿಮಾ ನೋಡಬೇಕು ಎಂದರೆ ತಿಂಗಳಿಗೆ ಒಂದು ಸಾರಿ ರೀಚಾರ್ಜ್ ಮಾಡಬೇಕಿಲ್ಲ, ಆದರೆ ಪ್ರತಿದಿನ ರೀಚಾರ್ಜ್ ಮಾಡಬೇಕಾಗುತ್ತದೆ ಎಂದಿದ್ದಾರೆ. ಹಾಗೆ ಹೊಸ ಸಿನಿಮಾಗೆ subscribe ಮಾಡಿಕೊಂಡರೆ 24 ಗಂಟೆಗಳ ಕಾಲ ಸಿನಿಮಾ ಲಭ್ಯವಿರುತ್ತದೆ.. ಎಂದು ತಿಳಿಸಿದ್ದಾರೆ. ಸಿನಿಮಾ ನಿರ್ಮಾಪಕರ ಜೊತೆಗೆ ಮಾತನಾಡಿದ ಬಳಿಕ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ..
ಇದು ಓಟಿಟಿ ವೇದಿಕೆ ಅಲ್ಲ, ಜೂನ್ 2ರಂದು ವಿಶಾಖಪಟ್ಟಣಂನಲ್ಲಿ ಈ ಹೊಸ ಕಾರ್ಯಕ್ರಮಕ್ಕೆ ಚಾಲನೆ ಸಿಗುತ್ತದೆ, ಮೂರು ತಿಂಗಳುಗಳ ಒಳಗೆ ಈ ಸೇವೆ ಲಭ್ಯವಾಗುತ್ತದೆ ಎಂದು ಗೌತಮ್ ರೆಡ್ಡಿ ಹೇಳಿದ್ದಾರೆ. ಚಿತ್ರರಂಗದ ಗಣ್ಯವ್ಯಕ್ತಿಗಳ ಜೊತೆಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಬಿಗ್ ಬಜೆಟ್ ಸಿನಿಮಾಗಳ ವಿಷಯದಲ್ಲಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಈ ಪ್ಲಾನ್ ಜಾರಿಯಾದ ಬಳಿಕ ಯಾವುದೇ ಸಿನಿಮಾ ಆದರು ಕುಟುಂಬ ಜೊತೆಯಲ್ಲಿ ಕೂತು ಮನೆಯಲ್ಲಿ ಜೊತೆಯಾಗಿ ಸಿನಿಮಾ ನೋಡಬಹುದು ಎಂದಿದ್ದಾರೆ. 24 ಸಿನಿಮಾ ಲಭ್ಯವಿರುತ್ತದೆ, ಹಾಗಾಗಿ ಮಧ್ಯದಲ್ಲಿ ಏನಾದರೂ ತೊಂದರಯಾದರು ಸಹ, ಯಾವಾಗಲಾದರೂ ವೀಕ್ಷಿಸಬಹುದು ಎಂದಿದ್ದಾರೆ. ಇದನ್ನು ಓದಿ..LIC: ಮಹಿಳೆಯರಿಗೆ ಬೆಸ್ಟ್ LIC ಪಾಲಿಸಿ ಯಾವುದು ಗೊತ್ತೇ?? 58 ರೂಪಾಯಿ ಇಂದ 8 ಲಕ್ಷ ಪಡೆಯುವುದು ಹೇಗೆ ಗೊತ್ತೆ? ಅದು ಫಿಕ್ಸ್ ಸ್ವಾಮಿ.
Comments are closed.