UPI Payment: ಹೆಚ್ಚಿನ ಚಿಂತೆ ಬೇಡ- ನಿಮ್ಮ ಯುಪಿಐ ಪೇಮೆಂಟ್ ವಿಫಲವಾದರೆ ಏನು ಮಾಡಬೇಕು ಗೊತ್ತೆ?? ಏನೆಲ್ಲಾ ಮಾಡಬಹುದು ಗೊತ್ತೇ??
UPI Payment: ಭಾರತ ಈಗ ಡಿಜಿಟಲ್ ಇಂಡಿಯಾ ಆಗಿದ್ದು, ಈಗ ಹೆಚ್ಚಿನ ಜನರು ಹಣದ ವಹಿವಾಟು ನಡೆಸುವುದು UPI ಮೂಲಕ, ತರಕಾರಿ ಹಣ್ಣುಗಳು ಸ್ವೇಇದ ಹಾಗೆ ಸಣ್ಣ ಪುಟ್ಟ ಖರೀದಿ ಗಳಿಂದ ಹಿಡಿದು ದೊಡ್ಡ ವಹಿವಾಟುಗಳು ಕೂಡ UPI ಮೂಲಕವೇ ನಡೆಯುತ್ತಿದೆ. ಆದರೆ ನೀವು ಯುಪಿಐ ನಲ್ಲಿ ಹಣ ಕಳಿಸುವಾಗ ಕೆಲವೊಮ್ಮೆ ಸ್ಟ್ರಕ್ ಆಗುತ್ತದೆ, ಅಥವಾ ಇನ್ನೇನಾದರೂ ಆಗಿ ಹಣ ಕಳಿಸಲು ಆಗುವುದಿಲ್ಲ. ಈ ರೀತಿ ಸಮಸ್ಯೆ ಆದಾಗ ನೀವು ಅದನ್ನು ಸರಿಮಾಡಿಕೊಳ್ಳಬಹುದು. ಸರಿಪಡಿಸಲು ಏನನ್ನು ಚೆಕ್ ಮಾಡಬೇಕು ಎಂದು ತಿಳಿಸುತ್ತೇವೆ ನೋಡಿ..
ಇಂಟರ್ನೆಟ್ ಕನೆಕ್ಷನ್ :- UPI ಮೂಲಕ ಹಣಕಳಿಸಲು ಇಂಟರ್ನೆಟ್ ಕನೆಕ್ಷನ್ ಮುಖ್ಯವಾಗಿ ಇರಲೇಬೇಕು. ಇಂಟರ್ನೆಟ್ ಕನೆಕ್ಷನ್ ನಲ್ಲಿ ಸಮಸ್ಯೆ ಇದ್ದರು ಕೂಡ ಹಣ ಪಾವತಿ ಮಾಡಲು ಸಾಧ್ಯ ಆಗುವುದಿಲ್ಲ. ಹಾಗಾಗಿ ಮೊಬೈಲ್ ನಲ್ಲಿ ಇಂಟರ್ನೆಟ್ ಕನೆಕ್ಷನ್ ಇದೆಯಾ ಎಂದು ಚೆಕ್ ಮಾಡಿ, ಒಂದು ವೇಳೆ ತೊಂದರೆ ಇದ್ದರೆ ಮೊಬೈಲ್ ಅನ್ನು ಏರ್ ಪ್ಲೇನ್ ಮೋಡ್ ಗೆ ಹಾಕಿ ಚೆಕ್ ಮಾಡಿ.. ಇದನ್ನು ಓದಿ..Business Idea: ಎಲ್ಲರೂ ತಿನ್ನುವ ಬಿರಿಯಾನಿ ಎಲೆ ಬಳಸಿಕೊಂಡು ಇದೊಂದು ಚಿಕ್ಕ ಬಿಸಿನೆಸ್ ಮಾಡಿ, 1 ಗಂಟೆ ದಿನಕ್ಕೆ ಸಾಕು- ಲಕ್ಷ ಲಕ್ಷ ಆದಾಯ. ಏನು ಗೊತ್ತೇ??
ಪ್ರತಿದಿನದ UPI ಲಿಮಿಟ್ ಚೆಕ್ ಮಾಡಿ :- ಈಗ ಬಹುತೇಕ ಎಲ್ಲಾ ಬ್ಯಾಂಕ್ ಗಳು ಕೂಡ UPI ಟ್ರಾನ್ಸಾಕ್ಷನ್ ಗಳಿಗೆ ಮಿತಿಯನ್ನು ಇಟ್ಟಿದೆ. UPI ಮೂಲಕ ನೀವು ಗರಿಷ್ಠ 1 ಲಕ್ಷ ರೂಪಾಯಿವರೆಗು ಹಣದ ವಹಿವಾಟು ನಡೆಸಬಹುದು. ಅಥವಾ 10 ಟ್ರಾನ್ಸಾಕ್ಷನ್ ಎಂದು ಮಿತಿ ಇಟ್ಟಿರುತ್ತಾರೆ. ಹೀಗಿದ್ದಾಗ ನೀವು 10 ಟ್ರಾನ್ಸಾಕ್ಷನ್ ನಂತರ ನೀವು UPI payments ಮಾಡಲು ಸಾಧ್ಯ ಆಗುವುದಿಲ್ಲ.
UPI Lite App ಟ್ರೈ ಮಾಡಿ :- UPI ಅಪ್ಲಿಕೇಶನ್ ಗಳು ವರ್ಕ್ ಆಗದೆ ಇರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಬ್ಯಾಂಕ್ ಸರ್ವರ್, ಈ ಸಮಸ್ಯೆ ಎದುರಾದರೆ NCPI UPI Lite app ಗಳನ್ನು ಪರಿಚಯ ಮಾಡಿದೆ. ಈ ಆಪ್ಲಿಕೇಶನ್ ಗಳ ಮೂಲಕ ನೀವು ಹಣದ ವಹಿವಾಟು ಮಾಡಬಹುದು. ಈಗ UPI lite ಸೇವೆ ಪೇಟಿಎಂ ಮತ್ತು ಫೋನ್ ಪೇ ನಲ್ಲಿ ಲಭ್ಯವಿದೆ. ಇದನ್ನು ಓದಿ..Finance: ಗಂಡ ಹೆಂಡತಿ ಇಬ್ಬರಿಗೂ ಕೂಡ ಆರ್ಥಿಕವಾಗಿ ಉಪಯೋಗವಾಗುವಂತಹ ಸ್ಕೀಮ್ ಯಾವುದು ಗೊತ್ತೇ? ಇದಕ್ಕಿಂತ ಬೆಸ್ಟ್ ಮತ್ತೊಂದು ಇಲ್ಲ
ಹೆಚ್ಚು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿ :- UPI ಪೇಮೆಂಟ್ ಗಳಲ್ಲಿ ಸಮಸ್ಯೆ ಆಗುವುದಕ್ಕೆ ಕಾರಣ ಒಂದು ಬ್ಯಾಂಕ್ ನ ಸರ್ವರ್ ಆಗಿದ್ದರೆ, ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಗಳನ್ನು ಲಿಂಕ್ ಮಾಡಬಹುದು. ಆಗ ಮತ್ತೊಂದು ಬ್ಯಾಂಕ್ ಅಕೌಂಟ್ ಹಣವನ್ನು ಕಳಿಸಬಹುದು..
ಸರಿಯಾದ UPI ಪಿನ್ ಹಾಕಿ :- ಒಂದು ವೇಳೆ ನೀವು UPI ಪಿನ್ ನಂಬರ್ ಹಾಕುವುದು ತಪ್ಪಾಗಿದ್ದರೆ ಆಗಲು ಸಹ ನಿಮ್ಮ UPI ಟ್ರಾನ್ಸಾಕ್ಷನ್ ಗಳು ನಡೆಯುವುದಿಲ್ಲ. ಹಾಗಾಗಿ UPI Pin ಸರಿಯಾಗಿ ಹಾಕಿದ್ದೀರಾ ಎಂದು ಚೆಕ್ ಮಾಡಿ.
Comments are closed.