Harbhajan: ಕೊಹ್ಲಿ, ಗಿಲ್ ಅಲ್ಲವೇ ಅಲ್ಲ, ಈತನೇ ಭಾರತದ ಗೇಮ್ ಚೇಂಜರ್ ಎಂದ ಹರ್ಭಜನ್. WTC ಫೈನಲ್ ಬಗ್ಗೆ ತಂಡ ಕಟ್ಟಿ ಹೇಳಿದ್ದೇನು ಗೊತ್ತೇ??
Harbhajan: ಮುಂಬರುವ 2023ರ ವಿಶ್ವ ಟೆಸ್ಟ್ ಚ್ಯಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಹಾಗೂ ಆಸ್ಟ್ರೇಲಿಯಾ ತಂಡ ಮುಖಾಮುಖಿಯಾಗಲಿದೆ ಎನ್ನುವ ವಿಚಾರ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಈ ಬಾರಿಯ ಈ ಟೆಸ್ಟ್ ಪಂದ್ಯ ಇಂಗ್ಲೆಂಡ್ ನ ಕೆನ್ನಿಂಗ್ಟನ್ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈಗಾಗಲೇ ಭಾರತ ತಂಡ ಹಾಗೂ ಆಸ್ಟ್ರೇಲಿಯಾ ತಂಡ ಪಂದ್ಯಕ್ಕೆ ಬೇಕಾದ ತಯಾರಿ ನಡೆಸಲು ಲಂಡನ್ ತಲುಪಿದೆ. ವಿಶೇಷವೇನೆಂದರೆ ಈ ಬಾರಿ ಭಾರತ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು ಪ್ಲೇಯಿಂಗ್ 11 ಅನ್ನು ಆಯ್ಕೆ ಮಾಡಿದ್ದಾರೆ.

ಹರ್ಭಜನ್ ಸಿಂಗ್ ಅವರು ಈ ಬಾರಿ ಭಾರತ ತಂಡದ ಪ್ಲೇಯಿಂಗ್ 11 ಅನ್ನು ಆಯ್ಕೆ ಮಾಡಿದ್ದು, ಪ್ಲೇಯಿಂಗ್ 11 ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಅವರನ್ನು ಬ್ಯಾಟಿಂಗ್ ಗಾಗಿ ಆಯ್ಕೆ ಮಾಡಲಾಗಿದ್ದು, ಇನ್ನು ಇದೆ ಕ್ರಮದಲ್ಲಿ ಚೇತೇಶ್ವರ್ ಪೂಜಾರಾ ಅವರನ್ನು ಮೂರನೇ ಸಾಲಿನಲ್ಲಿ ಆಯ್ಕೆ ಮಾಡಲಾಗಿದೆ. ಇದೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ತಮ್ಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದನ್ನು ಓದಿ..UPI Payment: ಹೆಚ್ಚಿನ ಚಿಂತೆ ಬೇಡ- ನಿಮ್ಮ ಯುಪಿಐ ಪೇಮೆಂಟ್ ವಿಫಲವಾದರೆ ಏನು ಮಾಡಬೇಕು ಗೊತ್ತೆ?? ಏನೆಲ್ಲಾ ಮಾಡಬಹುದು ಗೊತ್ತೇ??
ಐದನೇ ಸಾಲಿನಲ್ಲಿ ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡಲಾಗಿದ್ದು, ಅಜಿಂಕ್ಯ ರಹಾನೆ ಅವರು ಐಪಿಎಲ್ 2023ರಲ್ಲಿ ತಮ್ಮ ಅದ್ಭುತ ಫಾರ್ಮ್ ನ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ರನ್ನು ಆರನೇ ಕ್ರಮಾಂಕದಲ್ಲಿ ಆಯ್ಕೆ ಮಾಡಲಾಗಿದ್ದು, ಹರ್ಭಜನ್ ಸಿಂಗ್, ಇಶಾನ್ ಕಿಶನ್ ಅವರನ್ನು ಗೇಮ್ ಚೆಂಜರ್ ಎಂದು ಪರಿಗಣಿಸಿದ್ದಾರೆ. ಇಶಾನ್ ಕಿಶನ್ ಗೆ ಹೊಸ ಶೈಲಿಯ ಬೌಲಿಂಗ್ ಅನ್ನು ಹೇಗೆ ಎದುರಿಸಬೇಕು ಎನ್ನುವ ಟೆಕ್ನಿಕ್ ಗೊತ್ತಿದೆ, ಹಾಗೆ ಪಂತ್ ರೀತಿ ಅವರು ಅದ್ಭುತ ಬ್ಯಾಟಿಂಗ್ ಸ್ಕಿಲ್ಸ್ ಅನ್ನು ಸಹ ಹೊಂದಿದ್ದಾರೆ. ಈ ಕಾರಣದಿಂದ ಅವರನ್ನು ನಾನು ಗೇಮ್ ಚೇಂಜರ್ ಆಟಗಾರ ಎನ್ನುತ್ತಿದ್ದೇನೆ.
ಅಲ್ಲದೆ ಇಶಾನ್ ಕಿಶನ್ ಅವರು ಎಡ ಗೈ ಬ್ಯಾಟ್ಸ್ ಮ್ಯಾನ್ ಆಗಿರುವ ಕಾರಣ, ಭಾರತ ತಂಡಕ್ಕೆ ಲಾಭದಾಯಕ ಎನ್ನುವ ನನ್ನ ಅನಿಸಿಕೆ ಎಂದಿದ್ದಾರೆ. ಹರ್ಭಜನ್ ಸಿಂಗ್ ಅವರು ರವೀಂದ್ರ ಜಡೇಜಾ ಅವರನ್ನು ಏಳನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ಶಾರ್ದೂಲ್ ಠಾಕೂರ್ ಎಂಟನೇ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಶಾರ್ದೂಲ್ ಠಾಕೂರ್ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಹ ಪ್ರಮುಖರಾಗಿದ್ದಾರೆ. ಸ್ಪಿನ್ ಬೌಲಿಂಗ್ ನ ಎರಡನೇ ಸ್ಥಾನಕ್ಕೆ ಅಶ್ವಿನ್ ಅನ್ನು ಆಯ್ಕೆ ಮಾಡಲಾಗಿದೆ. ಮೊಹಮದ್ ಸಿರಾಜ್ ಹಾಗೂ ಉಮೇಶ್ ಯಾದವ್ ಇಬ್ಬರನ್ನೂ ಬೌಲಿಂಗ್ ಪಟ್ಟಿಯಲ್ಲಿ ನಂತರ ಆಯ್ಕೆ ಮಾಡಲಾಗಿದೆ. ಇದನ್ನು ಓದಿ..Lemon Tree: ಸುಮ್ಮನೆ ಏನೇನೊ ಮಾಡುವುದಲ್ಲ, ನಿಂಬೆ ಗಿಡವನ್ನು ಮನೆ ಮುಂದೆ ನೆಡಿ. ಏನಾಗುತ್ತದೆ ಎಂದು ತಿಳಿದರೆ, ಇಂದೇ ನೆಡ್ತಿರಾ. ಮಿಸ್ ಮಾಡೋದೇ ಇಲ್ಲ.