Siddaramaiah: ಡಿಕೆಶಿ ಬೆಂಬಲಿತ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ನೇರವಾಗಿ ಗರಂ ಆದ ಸಿದ್ದು- ಮಾಡಿದ್ದೇನು ಗೊತ್ತೇ?? ಖಡಕ್ ಆಗಿ ಹೇಳಿದ್ದೇನು ಗೊತ್ತೇ??
Siddaramaiah: ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಗರಂ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ಕಾರಣ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಕೊಡುತ್ತಿರುವ ಮಾಹಿತಿಗಳು ಎನ್ನಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ.

ಮಗ ಟ್ಯಾಕ್ಸ್ ಕಟ್ಟಿದ್ದರೆ ತಾಯಿಗೆ 2000 ಸಿಗುವುದಿಲ್ಲ ಎಂದು ಹೇಳಿದ್ದರು. ಮರುದಿನ ಮಾತು ಬದಲಾಯಿಸಿ ಸಿಗುತ್ತದೆ ಎಂದು ಹೇಳಿದ್ದರು. ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೀಗೆ ದಿನಕ್ಕೊಂದು ಮಾಹಿತಿ ಬದಲಾವಣೆ ಆಗುತ್ತಿರುವುದರಿಂದ ಜನರು ಕೂಡ ಸರ್ಕಾರದ ವಿರುದ್ಧ ಗರಂ ಆಗಿದ್ದರು. ಈ ವಿಷಯಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಗರಂ ಆಗಿದ್ದು, ಲಕ್ಷ್ಮಿ ಅವರಿಗೆ ಸಂದೇಶ ನೀಡಿದ್ದಾರೆ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿರುವ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಈ ಬಿಸಿನೆಸ್ ಮಾಡಿ, ಕೈ ತುಂಬಾ ಕಾಸು, ನಿಮಗೆ ನೀವೇ ಬಾಸ್. ಲಕ್ಷ ಲಕ್ಷ ಆದಾಯ ಫಿಕ್ಸ್. ಏನು ಗೊತ್ತೇ?
ತಪ್ಪು ಮಾಹಿತಿಯನ್ನು ಜನರಿಗೆ ಕೊಡುವುದು ಬೇಡ, ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು ಜನರಿಗೆ ತಿಳಿಸಿ, ದಿನಕ್ಕೊಂದು ಮಾಹಿತಿ ಕೊಟ್ಟು ಅದುಜನರಿಗೆ ಹೋಗಿ ಅವರು ಸರ್ಕಾರದ ಮೇಲೆ ಆಕ್ರೋಶಗೊಳ್ಳುವುದು, ಸರ್ಕಾರದ ವಿರುದ್ಧ ಬೇಡ ಎಂದು ಹೇಳಿದ್ದಾರಂತೆ ಸಿಎಂ ಸಿದ್ದರಾಮಯ್ಯ. ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಭೆ ನಡೆದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದ ಎದುರು ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಫಾರ್ಮ್ ಓಡಾಡುತ್ತಿದೆ..ಅದು ನಿಜ ಆದರೆ ಫಾರ್ಮ್ ನಲ್ಲಿ ಕೆಲವು ಬದಲಾವಣೆ ಮಾಡಲಾಗುತ್ತದೆ.
ಬ್ಯಾಂಕ್ ಪಾಸ್ ಬುಕ್ ಮಾಹಿತಿ ಸೇರಿಸಲಾಗುತ್ತದೆ, ಜಾತಿ ಎನ್ನುವ ಬದಲು ವರ್ಗ ಎಂದು ಬದಲಾಯಿಸಲಾಗುತ್ತದೆ. ಸಂದೇಶ ತಪ್ಪಾಗಿ ಹೋಗಬಾರದು ಎಂದಿದ್ದಾರೆ..ಗಂಡ ಟ್ಯಾಕ್ಸ್ ಕಟ್ಟುತ್ತಿದ್ದರೆ ಅದು ಯೋಜನೆಗೆ ಅನ್ವಯವಾಗುತ್ತೆ, ಮಗ ಟ್ಯಾಕ್ಸ್ ಕಟ್ಟುವುದು ಯೋಜನೆಗೆ ಅನ್ವಯಿಸುವುದಿಲ್ಲ..90% ಬಿಪಿಎಲ್ ಕಾರ್ಡ್ ಗಳಲ್ಲಿ ಮಹಿಳೆಯರೇ ಪ್ರಮುಖವಾಗಿದ್ದು, ಯಾರಿಗೆ ಯೋಜನೆಯ ಫಲ ಸಿಗಬೇಕು ಎನ್ನುವುದನ್ನು ತಿಳಿಸಲಾಗುತ್ತದೆ. ಈಗ ನಮಗೆ ಅರ್ಜಿ ಡ್ರಾಫ್ಟ್ ಮಾತ್ರ ಬಂದಿದ್ದು, ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ.. ಎಂದು ತಿಳಿಸಿದ್ದಾರೆ. ಇದನ್ನು ಓದಿ..Google Pay: ಗೂಗಲ್ ಪೇ ನಲ್ಲಿ ಮತ್ತೊಂದು ಮಸ್ತ್ ವೈಶಿಷ್ಯತೇ- ಇನ್ನು ಮುಂದೆ ನಿಮಗೆ ಎಟಿಎಂ ಕಾರ್ಡ್ ಬೇಕಾಗೇ ಇಲ್ಲ. ಯಾಕೆ ಗೊತ್ತೇ??