Neer Dose Karnataka
Take a fresh look at your lifestyle.

Home Loan Tricks: ನಿಮ್ಮ ಮನೆಯ ಹೋಂ ಲೋನ್ ನಲ್ಲಿ ಬಡ್ಡಿಯನ್ನು ಕಡಿಮೆ ಮಾಡುವುದು ಹೇಗೆ ಗೊತ್ತೇ?? ಸುಲಭ ಟ್ರಿಕ್ ಬಳಸಿ, ಲಕ್ಷ ಲಕ್ಷ ಉಳಿಸಿ

Home Loan Tricks: ಸ್ವಂತ ಮನೆ ಹೊಂದಬೇಕು ಎನ್ನುವುದು ಎಲ್ಲರ ಕನಸು, ಹಲವರು ಹೋಮ್ ಲೋನ್ ಪಡೆದು ಮನೆ ಕಟ್ಟುತ್ತಾರೆ. 30 ವರ್ಷ ಅವಧಿಗೆ ಹೋಮ್ ಲೋನ್ ಸಿಗುತ್ತದೆ. ಹೋಮ್ ಲೋನ್ ಗಳಲ್ಲಿ ಮುಖ್ಯವಾಗಿ ಮರುಪಾವತಿ ಸಮಯ, ಲೋನ್ ಪಡೆದವರ ವಯಸ್ಸು, EMI ಅಸಲಿನ ಮೊತ್ತ, ಬಡ್ಡಿದರ, ಸಾಲದ ಸಮಯ ಇದಿಷ್ಟು ಅಂಶಗಳ ಮೇಲೆ ಒಳಗೊಂಡಿರುತ್ತದೆ. ನೀವು ಕಟ್ಟುವ ಬಡ್ಡಿ ಮೊತ್ತ ಎಷ್ಟು ಎನ್ನುವುದಕ್ಕೆ ಹೋಮ್ ಲೋನ್ ಅವಧಿ ಮುಖ್ಯವಾಗುತ್ತದೆ, ಕೆಲವರು EMI ಮೊತ್ತ ಕಡಿಮೆ ಮಾಡಲು ದೀರ್ಘಾವಧಿಗೆ ಲೋನ್ ಕಟ್ಟುತ್ತಾರೆ, ಆದರೆ ಇದರಿಂದ ಬಡ್ಡಿ ಮೊತ್ತ ಕಾಸ್ತಿಯಾಗುತ್ತದೆ..ಹಾಗಾಗಿ ಹೋಮ್ ಲೋನ್ ಗೆ ಅಪ್ಲೈ ಮಾಡುವಾಗಲೇ ಎಚ್ಚರಿಕೆಯಿಂದ ಸಾಲದ ಅವಧಿಯನ್ನು ಆಯ್ಕೆ ಮಾಡಿದರೆ ಈ ಸಮಸ್ಯೆ ಆಗುವುದಿಲ್ಲ.

*ಅವಕಾಶ ಸಿಕ್ಕಾಗಲೆಲ್ಲಾ ಲೋನ್ ಪಾವತಿಸಿ :- ಬಹಳ ಸಾರಿ ಬ್ಯಾಂಕ್ ಗಳು ಫ್ಲೋಟಿಂಗ್ ಬಡ್ಡಿದರವನ್ನು ಹೋಮ್ ಲೋನ್ ಮೇಲೆ ವಿಧಿಸುವುದಿಲ್ಲ.ಈ ಕಾರಣಕ್ಕೆ ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿದ್ದಾಗ, ನಿಮ್ಮ ಫ್ಲೋಟಿಂಗ್ ಬಡ್ಡಿದರ ಆಧಾರಿಸಿದ್ದರೆ, ಆ ವೇಳೆಯಲ್ಲೇ ಲೋನ್ ಹಣವನ್ನು ತೀರಿಸಲು ಟ್ರೈ ಮಾಡಿ. ಆರಂಭದಲ್ಲಿ ನೀವು ಕಟ್ಟುವ ಮೊತ್ತ ಹೋಮ್ ಲೋನ್ ನ ಬಡ್ಡಿಗೆ ಹೋಗುವುದರಿಂದ, ಮುಂಗಡವಾಗಿ ಹಣ ಕಟ್ಟಿ ಲೋನ್ ಕ್ಲಿಯರ್ ಮಾಡುತ್ತಾ ಬಂದರೆ, ನಿಮ್ಮ ಅಸಲು ಮೊತ್ತ ಕಡಿಮೆ ಆಗುತ್ತಾ ಹೋಗುತ್ತದೆ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿರುವ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಈ ಬಿಸಿನೆಸ್ ಮಾಡಿ, ಕೈ ತುಂಬಾ ಕಾಸು, ನಿಮಗೆ ನೀವೇ ಬಾಸ್. ಲಕ್ಷ ಲಕ್ಷ ಆದಾಯ ಫಿಕ್ಸ್. ಏನು ಗೊತ್ತೇ?

*ಹೋಮ್ ಲೋನ್ ಬಡ್ಡಿದರ ಚೆಕ್ ಮಾಡಿ :- ಮನೆ ಕಟ್ಟುವುದು ಲೈಫ್ ಟೈಮ್ ಇನ್ವೆಸ್ಟ್ಮೆಂಟ್ ಹಾಗೆಯೇ ಹೋಮ್ ಲೋನ್ ದೀರ್ಘವಧಿಗೆ ಕಟ್ಟುವ ಸಾಲ ಆಗಿದ್ದು, ಇದನ್ನು ಪಡೆಯುವಾಗ ಜಾಗೃತವಾಗಿರಿ. ಎಲ್ಲಾ ಬ್ಯಾಂಕ್ ಗಳಲ್ಲಿ ಬಡ್ಡಿದರ ಹೇಗಿದೆ, EMI ಹೇಗಿದೆ ಎಲ್ಲವನ್ನು ವಿಚಾರಿಸಿ ನಂತರ ಆಯ್ಕೆ ಮಾಡಿ..ಈ ವಿವರವನ್ನು ಆನ್ಲೈನ್ ಮೂಲಕ ಕೂಡ ಪಡೆಯಬಹುದು.

*ಕಡಿಮೆ ಬಡ್ಡಿಗೆ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ :- ಒಂದು ವೇಳೆ ನೀವು ಹಣವನ್ನು ಪೂರ್ವಪಾವತಿ ಮಾಡಲು ಶುರು ಮಾಡಿದರೆ, ಕೆಲವು ಕಡೆ ಹೋಮ್ ಲೋನ್ ಅನ್ನು ಟ್ರಾನ್ಸ್ಫರ್ ಮಾಡುತ್ತಾರೆ. ಇದರ ಅರ್ಥ ಮತ್ತೊಂದು ಬ್ಯಾಂಕ್ ಗೆ ಸಾಲ ವರ್ಗಾವಣೆ ಮಾಡುವುದು. ಈ ರೀತಿ ಆದರೆ ವರ್ಗಾವಣೆ ಪಡೆಯುವ ಬ್ಯಾಂಕ್ ರೂಲ್ಸ್ ಫಾಲೋ ಮಾಡಬೇಕಾಗುತ್ತದೆ. ಈ ವೇಳೆ ನೀವು ಸಾಲ ವರ್ಗಾವಣೆ ಶುಲ್ಕ ಎಷ್ಟಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇದನ್ನು ಓದಿ..Google Pay: ಗೂಗಲ್ ಪೇ ನಲ್ಲಿ ಮತ್ತೊಂದು ಮಸ್ತ್ ವೈಶಿಷ್ಯತೇ- ಇನ್ನು ಮುಂದೆ ನಿಮಗೆ ಎಟಿಎಂ ಕಾರ್ಡ್ ಬೇಕಾಗೇ ಇಲ್ಲ. ಯಾಕೆ ಗೊತ್ತೇ??

*ಹೆಚ್ಚು ಡೌನ್ ಪೇಮೆಂಟ್ ಮಾಡಿ :- ನಿಮ್ಮ ಆಸ್ತಿಯ ಮೌಲ್ಯದ ಮೇಲೆ 75% ಅಥವಾ 90% ಸಾಲವನ್ನು ಬ್ಯಾಂಕ್ ಗಳು ನೀಡುತ್ತದೆ. ಉಳಿದ ಹಣ ನೀವು ಹಾಕಬೇಕು, ಆಗ ನೀವು ಹಾಕುವ ಹಣ ಜಾಸ್ತಿ ಹಾಕಿದರೆ ಲೋನ್ ಮೊತ್ತ ಹಾಗೂ ಬಡ್ಡಿ ಕಡಿಮೆ ಆಗುತ್ತದೆ.

ಒಳ್ಳೆಯ ಕ್ರೆಡಿಟ್ ಸ್ಕೋರ್ :- ಸಾಲ ಪಡೆಯುವವರಿಗೆ ಒಳ್ಳೆಯ ಕ್ರೆಡಿಟ್ ಸ್ಕೋರ್ ಇರುವುದು ಬಹಳ ಮುಖ್ಯ. ಅಂಥ ಗ್ರಾಹಕರಿಗೆ ಬ್ಯಾಂಕ್ ಲೋನ್ ಸುಲಭವಾಗಿ ಸಿಗುತ್ತದೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ, ಸಾಲ ಪಡೆಯುವಾಗ ನಿಮ್ಮ ಮಾತಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲ ಎಂದರೆ, ಸಾಲ ಕೊಡುವವರ ವಿಶ್ವಾಸ ಗಳಿಸುವುದು ಕಷ್ಟ.. ಇದನ್ನು ಓದಿ..Business Idea: ನಿಮ್ಮ ಬಳಿ ಐದು ಸಾವಿರ ಇದ್ದರೇ, ಪ್ರತಿ ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್. ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರದ ಈ ಅಂಗಡಿ ಆರಂಭಿಸಿ. ಏನು ಗೊತ್ತೇ?

*EMI ಹೆಚ್ಚಿಸಿ :- ವಾರ್ಷಿಕವಾಗಿ EMI ದರ ಹೆಚ್ಚು ಮಾಡಲು ಅವಕಾಶ ಕೊಡುವುದಾದರೆ, ಅದನ್ನು ಹೆಚ್ಚಿಸಿ. ಆದಾಯಕ್ಕೆ ತಕ್ಕ ಹಾಗೆ EMI ದರವನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಲೋನ್ ಕಟ್ಟುವ ಸಮಯ ಕಡಿಮೆ ಆಗುತ್ತದೆ. ಇದರಿಂದ ಬಡ್ಡಿ ಕೂಡ ಕಡಿಮೆ ಆಗುತ್ತದೆ. ಈ ಸೌಲಭ್ಯ ಸಿಗುತ್ತಾ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ.

Comments are closed.