Neer Dose Karnataka
Take a fresh look at your lifestyle.

Investment Ideas: ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??

Investment Ideas: ಬದುಕಿನಲ್ಲಿ ಭವಿಷ್ಯ ಚೆನ್ನಾಗಿರಬೇಕು ಎಂದರೆ ಹಣ ಉಳಿಸುವುದು, ಹೂಡಿಕೆ ಮಾಡುವುದು ಬಹಳ ಮುಖ್ಯ, ಸಾಮಾನ್ಯವಾಗಿ ಜನರು FDಯಲ್ಲಿ ಹೂಡಿಕೆ ಮಾಡುತ್ತಾರೆ, ಇದೊಂದು ಸುರಕ್ಷಿತವಾದ ಹೂಡಿಕೆ ಎಂದು ಹೇಳಲಾಗಿದೆ. ಇದರ ಲಾಕ್ ಇನ್ ಸಮಯ ಮುಗಿದ ನಂತರ ಇಷ್ಟು ಮೊತ್ತದ ಬಡ್ಡಿ ಸೇರಿಸಲಾಗುತ್ತದೆ. ಆದರೆ ಹಣ ಉಳಿತಾಯ ಮಾಡಲು FD ಮಾತ್ರವಲ್ಲ ಬೇರೆ ಆಯ್ಕೆಗಳಿವೆ. ಈ ಉಳಿತಾಯಕ್ಕಿಂತ ಹೆಚ್ಚು ಆದಾಯ ಪಡೆಯಬಹುದು. ಈ ಬಗ್ಗೆ ಹಣಕಾಸಿನ ಸಲಹೆಗಾರ್ತಿ ಶಿಖಾ ಚತುರ್ವೇದಿ ಅವರು ಕೆಲವು ಸಲಹೆ ನೀಡಿದ್ದಾರೆ..

ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ :- ನಿಮ್ಮ ಬಳಿ 2 ಲಕ್ಷಕ್ಕಿಂತ 5 ಲಕ್ಷಕ್ಕಿಂತ ಹೆಚ್ಚಿನ ಹಣ ಹೊಂದಿದ್ದರೆ, ಇದು ಉತ್ತಮವಾದ ಆಯ್ಕೆ ಆಗಿದೆ. ಇದು ಕೂಡ ಒಂದು ಥರ ಮ್ಯೂಚುವಲ್ ಫಂಡ್ ಆಗಿದೆ, ಶೇರ್ ಮಾರ್ಕೆಟ್ ನಲ್ಲಿ ಮಾಡುವ ಬದಲು ಆಸ್ತಿಗಳ ಮೇಲೆ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಕಮರ್ಷಿಯಲ್ ಆಸ್ತಿಗಳನ್ನು ಹೊಂದಿರುವ ಕಂಪೆನಿಗಳಿಂದ ಇದನ್ನು ಶುರು ಮಾಡಲಾಗುತ್ತದೆ. ಈ ಹೂಡಿಕೆಯಲ್ಲಿ ಜನರಿಂದ ಹಣ ಹೂಡಿಕೆ ಮಾಡಿಸಿ, ಮಾಲ್ ಗಳು ಪಾರ್ಕ್ ಗಳನ್ನು ಖರೀದಿ ಮಾಡುತ್ತಾರೆ.. RTE ನಲ್ಲಿ ಹೂಡಿಕೆ ಮಾಡಿಕೊಂಡಿರುವುದಕ್ಕೆ ಡಿಮ್ಯಾಟ್ ಹಾಗೂ ಬ್ಯುಸಿನೆಸ್ ಅಕೌಂಟ್ ಇದ್ದರೆ ಸಾಕು. ಯೂನಿಟ್ ಹೋಲ್ಡರ್ ಆಗಿ, ನೀವು ಡಿವಿಡೆಂಡ್ ರೂಪದಲ್ಲಿ, RTE ನಲ್ಲಿ ಹೆಚ್ಚು ಮೌಲ್ಯ ಗಳಿಸುತ್ತೀರಿ. ನೀವು ಇದನ್ನೆಲ್ಲ ಖರೀದಿಸುವುದಕ್ಕೆ, ಆಧಾರ ಆಗಿರುವ ಸ್ವತ್ತುಗಳು ಚೆನ್ನಾಗಿರಬೇಕು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಆಗ ನಿಮಗೆ ಲಾಭ ಸಿಗುತ್ತದೆ. ಇದನ್ನು ಓದಿ..Best Jobs: ನೀವು ಭಾರತದಲ್ಲಿಯೇ ಇದ್ದು ಹಣ ಮಾಡಬೇಕು ಎಂದರೆ, ಈ ಉದ್ಯೋಗಗಳು ಬೆಸ್ಟ್. ಜಾಸ್ತಿ ಸಂಬಳ ನೀಡುವ ಉದ್ಯೋಗಗಳು ಯಾವುದು ಗೊತ್ತೇ?

ಇಂಡೆಕ್ಸ್ ಫಂಡ್ :- ಇಂಡೆಕ್ಸ್ ಫಂಡ್ ಮಾರ್ಕೆಟ್ ನಲ್ಲಿ ಈ ಸೂಚ್ಯಂಕವನ್ನು ಟ್ರ್ಯಾಕ್ ಮಾಡಲಾಗುತ್ತದೆ. ಇಲ್ಲಿ ಆದಾಯ ಕೂಡ ಇಂಡೆಕ್ಸ್ ನೀಡುವ ಹಾಗಿರುತ್ತದೆ. ಇಲ್ಲಿ ನೀವು ಕಡಿಮೆ ಅಪಾಯದಲ್ಲಿ ಹೆಚ್ಚು ಲಾಭ ಪಡೆಯುತ್ತಾರೆ. ಇಂಡೆಕ್ಸ್ ಫಂಡ್ ಗಳು ಕೂಡ ಕಡಿಮೆ ಹೂಡಿಕೆಗಳು ಎಂದು ಹೇಳಲಾಗುತ್ತದೆ. ಒಂದು ವೇಳೆ ನಿಮಗೆ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಇಷ್ಟವಿಲ್ಲದೇ ಹೋದರೆ ಇದರಲ್ಲಿ ಹೂಡಿಕೆ ಮಾಡುವುದು ಉತ್ತಮವಾದ ಆಯ್ಕೆಯಾಗಿದೆ. ನೀವು SIP ಅಲ್ಲಿ ಹೂಡಿಕೆ ಮಾಡುವುದರಿಂದ ಇಂಡೆಕ್ಸ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಇಂಡೆಕ್ಸ್ ಫಂಡ್ ಹೂಡಿಕೆ ಮಾಡುವುದಕ್ಕೆ ನೀವು ಹೌಸ್ ಆಫ್ ಫಂಡ್ ಅಧಿಕೃತ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಗಳ ಮೂಲಕ ಹೂಡಿಕೆ ಮಾಡಬಹುದು.

ಸಾವರಿನ್ ಗೋಲ್ಡ್ ಬಾಂಡ್ :- ಒಂದು ಗ್ರಾಮ್ ಬಂಗಾರ ಖರೀದಿ ಮಾಡುವ ಮೂಲಕ ಸಾವರಿನ್ ಬಾಂಡ್ ಹೂಡಿಕೆ ಶುರು ಮಾಡಬಹುದು. 99.9% ಶುದ್ಧವಾಗಿರುವ ಚಿನ್ನ ಡಿಜಿಟಲ್ ರೀತಿಯಲ್ಲಿ ಆಗಿ ಖರೀದಿ ಮಾಡುವ ಹಾಗೆ. ಈ ಹೂಡಿಕೆಯ ಲಾಕಿನ್ ಸಮಯ 8 ವರ್ಷಗಳು. 8 ವರ್ಷಗಳ ನಂತರ ಹಣ ಹಿಂಪಡೆಯಲು ಯಾವುದೇ ಲಾಭ ತೆರಿಗೆ ಕಟ್ಟಬೇಕಾಗುತ್ತದೆ. ಇಲ್ಲಿ ನಿಮಗೆ 2.5% ಬಡ್ಡಿ ಕೊಡಲಾಗುತ್ತದೆ. ಇದನ್ನು ಅರ್ಧ ವಾರ್ಷಿಕವಾಗಿ ಆಧಾರದ ಮೇಲೆ ಪಾವತಿ ಮಾಡಲಾಗುತ್ತದೆ. ಇದು GST ವ್ಯಾಪ್ತಿಯಿಂದ ಹೊರಗಿದೆ. 8 ವರ್ಷಗಳಲ್ಲಿ ಹೂಡಿಕೆ ಮಾಡಿದರೆ, 20% ಬಡ್ಡಿ ಪಡೆಯಬಹುದು. ಹಣವನ್ನು ಹಿಂಪಡೆಯುವಾಗ, ಚಿನ್ನದ ಮಾರ್ಕೆಟ್ ನ ಆಧಾರದ ಮೇಲೆ ಹಣ ಪಾವತಿ ಮಾಡಬಹುದು. ಇಲ್ಲಿ ನಿಮಗೆ ಚಿನ್ನದ ಬೆಲೆಯ ಲಾಭ ಪಡೆಯುತ್ತೀರಿ. ಇದನ್ನು ಓದಿ..Mysore Expressway: ಬೆಂಗಳೂರು-ಮೈಸೂರ್ ಟೋಲ್ ದರ ಹೆಚ್ಚಳದ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು ಗೊತ್ತೇ?? ಭೇಷ್ ಎಂದ ನೆಟ್ಟಿಗರು

Comments are closed.