Neer Dose Karnataka
Take a fresh look at your lifestyle.

Team India: ಒಂದಲ್ಲ ಎರಡಲ್ಲ ಐದು ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ಬಂದ ಖಡಕ್ ಆಲ್ ರೌಂಡರ್- ಇನ್ನು ಭಾರತವನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರು ಗೊತ್ತೇ?

153

Team India: ಈಗಷ್ಟೇ ನಡೆದ ವರ್ಲ್ಡ್ ಟೆಸ್ಟ್ ಚಾಂಪಿಯನ್ಷಿಪ್ (World Test Championship) ನಲ್ಲಿ ಭಾರತ ತಂಡವು (Team India) ಆಸ್ಟ್ರೇಲಿಯಾ ವಿರುದ್ಧ ಹೀನಾಯವಾದ ಸೋಲು ಅನುಭವಿಸಿತು. ಈ ಸೋಲಿಗೆ ತಂಡದಲ್ಲಿ ಸರಿಯಾದ ಆಟಗಾರರು ಇಲ್ಲದಿರುವುದೇ ಕಾರಣ ಎನ್ನುವ ಮಾತುಗಳು ಕೇಳಿಬಂದವು. ತಂಡದ ಆಯ್ಕೆ ಬಗ್ಗೆ ಆಟಗಾರರು ಕೂಡ ಆಯ್ಕೆ ಸಮಿತಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಭಾರತ ತಂಡದ ಕೆಲವು ಸ್ಟಾರ್ ಆಟಗಾರರು ಅನಾರೋಗ್ಯದ ಸಮಸ್ಯೆಯಿಂದ ಹೊರಗಿರುವುದು ಕೂಡ ಇದಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ.

ಈ ವೇಳೆ ಆ ಒಬ್ಬ ಸ್ಟಾರ್ ಆಲ್ ರೌಂಡರ್ ಟೆಸ್ಟ್ ತಂಡಕ್ಕೆ ಬರಬೇಕು ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ಇವರು ಟೆಸ್ಟ್ ಪಂದ್ಯವನ್ನಾಡಿ 5 ವರ್ಷವಾಗಿದೆ. ಆಗಿದೆ ಟೀಮ್ ಇಂಡಿಯಾದ ಆಲ್ ರೌಂಡರ್ ಆಗಿ ಒಳ್ಳೆಯ ಹೆಸರು ಮಾಡಿದ್ದಾರೆ. ಇವರ ಅನುಪಸ್ಥಿತಿ ಟೆಸ್ಟ್ ತಂಡದಲ್ಲಿ ಕಾಡುತ್ತಿದೆ, ಹಾಗಾಗಿ ಈ ಆಟಗಾರ ತಂಡಕ್ಕೆ ಮರಳಿ ಬಂದರೆ, ಸಹಾಯ ಆಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಎಲ್ಲರೂ ಈತ ಬರಬೇಕು ಎಂದು ಹೇಳುತ್ತಿರುವ ಆಟಗಾರ ಮತ್ಯಾರು ಅಲ್ಲ.. ಹಾರ್ದಿಕ್ ಪಾಂಡ್ಯ (Hardik Pandya). ಇದನ್ನು ಓದಿ..Rahul Dravid: ಇಷ್ಟು ದಿವಸ ಸುಮ್ಮನಿದ್ದು, ಸೋತ ಮೇಲೆ ಹೊಸ ರಾಗ ತೆಗೆದ ದ್ರಾವಿಡ್- ಈ ಮಾತು ಈಗ್ಯಾಕೆ ಬಿಡಿ ಎಂದ ಫ್ಯಾನ್ಸ್. ಏನಾಗಿದೆ ಗೊತ್ತೇ??

ಹಾರ್ದಿಕ್ ಪಾಂಡ್ಯ ಅವರು ಈಗ ಭಾರತ ತಂಡದ ಟಿ20 ಹಾಗು ಓಡಿಐ ತಂಡಗಳಲ್ಲಿದ್ದು, ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ 2018ರಿಂದ ಟೆಸ್ಟ್ ತಂಡದಿಂದ ದೂರವೇ ಉಳಿದಿದ್ದಾರೆ. 2018ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದರು ಹಾರ್ದಿಕ್ ಪಾಂಡ್ಯ. ಅದೇ ವರ್ಷ ನಡೆದ ಏಷ್ಯಾಕಪ್ ವೇಳೆ ಇವರ ಬೆನ್ನಿಗೆ ಗಾಯವಾಗಿ ಕ್ರಿಕೆಟ್ ಇಂದ ದೂರ ಉಳಿದರು. 2022ರಲ್ಲಿ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿ ಕಂಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರು..

ಈ ಮೂಲಕ ಭಾರತ ತಂಡಕ್ಕೂ ಮತ್ತೆ ಆಯ್ಕೆಯಾದರು. ಟೀಮ್ ಇಂಡಿಯಾದಲ್ಲಿ ಈಗ ಹಾರ್ದಿಕ್ ಪಾಂಡ್ಯ ಅವರು ಓಡಿಐ ಮತ್ತು ಟಿ20 ಪಂದ್ಯಗಳನ್ನಾಡಿದ್ದು, ಟೆಸ್ಟ್ ತಂಡಕ್ಕೆ ಇನ್ನು ಕಂಬ್ಯಾಕ್ ಮಾಡಿಲ್ಲ. ಭಾರತ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರು ಕೂಡ ಹಾರ್ದಿಕ್ ಪಾಂಡ್ಯ ಅವರು ಟೆಸ್ಟ್ ತಂಡಕ್ಕೆ ವಾಪಸ್ ಬರಬೇಕು ಎನ್ನುವ ಮಾತುಗಳನ್ನಾಡಿದ್ದಾರೆ. ಇವರಷ್ಟೇ ಅಲ್ಲದೆ, ಇನ್ನು ಹಲವು ಅನುಭವಿ ಕ್ರಿಕೆಟರ್ ಗಳು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾಗೆ ವಾಪಸ್ ಬರುತ್ತಾರಾ ಎಂದು ಕಾದು ನೋಡಬೇಕಿದೆ.. ಇದನ್ನು ಓದಿ..Sourav Ganguly: ಮತ್ತದೇ ಶುರುವಾಯ್ತು- ಭಾರತ ತಂಡ ಸೋತ ಬೆನ್ನಲ್ಲೇ, ಗಂಗೂಲಿ ಸುಮ್ಮನಿರಲಾರದೆ, ಕೊಹ್ಲಿ ಬಗ್ಗೆ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ?

Leave A Reply

Your email address will not be published.