Gruhalakshmi: ಇಷ್ಟು ದಿವಸ ಆದಮೇಲೆ ಮತ್ತೊಂದು ಶಾಕ್ ಕೊಟ್ಟ ಕಾಂಗ್ರೆಸ್- ಗೃಹ ಲಕ್ಷ್ಮಿ ಯೋಜನೆ ಗ್ರಾಹಕರಿಗೆ ಬಿಗ್ ಶಾಕ್. ಏನಾಗಿದೆ ಗೊತ್ತೇ??
Gruhalakshmi: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲಿ 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಉಚಿತವಾಗಿ ನೀಡುವ ಭರವಸೆ ಮೂಡಿಸಿತ್ತು, ಈಗ ಅಧಿಕಾರಕ್ಕೆ ಬಂದು ಅದನ್ನೆಲ್ಲಾ ಜಾರಿಗೆ ತರುವ ಪ್ರಯತ್ನದಲ್ಲಿದ್ದು, ಆದರೆ ಈ ಯೋಜನೆಗಳ ಸ್ಪೈಲಭ್ಯ ಪಡೆಯಲು ಜನರಿಗೆ ಹೆಚ್ಚು ಕಷ್ಟವಾಗುತ್ತಿದೆ. ಈ ಸೌಲಭ್ಯಗಳನ್ನು ಪಡೆಯಲು ಜನರ ಹತ್ತಿರ ರೇಶನ್ ಕಾರ್ಡ್ ಇರಬೇಕು. ಆದರೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಪಡೆಯುವುದಕ್ಕೆ ಜನರು ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ.
ಜೂನ್ ಮೊದಲ ವಾರದಲ್ಲೇ ರೇಷನ್ ಕಾರ್ಡ್ ಮಾಡಿಸಲು ಪೋರ್ಟಲ್ ಓಪನ್ ಆಗುತ್ತದೆ ಎಂದು ಹೇಳಲಾಗಿತ್ತು, ಆದರೆ ಈಗ ಜೂನ್ 3ನೇ ವಾರ ತಲುಪಿದ್ದರು ಸಹ ರೇಷನ್ ಕಾರ್ಡ್ ಮಾಡಿಸಲು ಪೋರ್ಟಲ್ ಓಪನ್ ಆಗಿಲ್ಲ. ಸರ್ಕಾರದಿಂದ ಪೋರ್ಟಲ್ ಓಪನ್ ಮಾಡಲು ಇನ್ನು ಆದೇಶ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವುದು ಮತ್ತು ವಿತರಣೆ ಮಾಡುವುದನ್ನು ನಿಲ್ಲಿಸಲಾಗಿತ್ತು. ಇದನ್ನು ಓದಿ..Investment Ideas: ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??
ಅರ್ಜಿ ಸಲ್ಲಿಸುವ ವೆಬ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆ ಮಾಡುವ ಆಪ್ಶನ್ ಅನ್ನು ಲಾಕ್ ಮಾಡಲಾಗಿತ್ತು. ಆದರೆ ಎಲೆಕ್ಷನ್ ಮುಗಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರು ಕೂಡ ಇನ್ನು ಪೋರ್ಟಲ್ ಓಪನ್ ಆಗಿಲ್ಲ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯುವುದಕ್ಕಾಗಿ ಜನರು ಹೆಚ್ಚಾಗಿ ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯಲು ಮುಂದಾಗಿದ್ದಾರೆ. ಆದರೆ ಈಗ http://ahara.kar.nic ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಆಯ್ಕೆ ಇನ್ನು ಲಾಕ್ ಆಗಿಯೇ ಇದೆ.
ಸರ್ಕಾರದ ಸೌಲಭ್ಯ ಪಡೆಯಲು ಜನರು ರೇಷನ್ ಕಾರ್ಡ್ ಮಾಡಿಸುವುದಕ್ಕೆ ಅರ್ಜಿ ಸಲ್ಲಿಸುತ್ತಾರೆ ಎನ್ನುವ ಕಾರಣದಿಂದಲೇ ಪೋರ್ಟಲ್ ಓಪನ್ ಆಗುವುದನ್ನು ತಡ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬಿಪಿಎಲ್ ಕಾರ್ಡ್ ಮಾಡಿಸುವುದಕ್ಕೆ ಮನೆಯವರ ವಾರ್ಷಿಕ ಆದಾಯ 1.20ಲಕ್ಷಕ್ಕಿಂತ ಕಡಿಮೆ ಇರಬೇಕು, ಆದರೆ ಎಪಿಎಲ್ ಕಾರ್ಡ್ ಗೆ ಇಂಥ ನಿರ್ಬಂಧನೆ ಇಲ್ಲ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯುವುದಕ್ಕೆ ಜನರು ಕಾದಿರುವಾಗ ಈ ಥರ ಆಗುತ್ತಿರುವುದು ಜನರಿಗೆ ನಿರಾಸೆ ತಂದಿದೆ. ಇದನ್ನು ಓದಿ..Mysore Expressway: ಬೆಂಗಳೂರು-ಮೈಸೂರ್ ಟೋಲ್ ದರ ಹೆಚ್ಚಳದ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು ಗೊತ್ತೇ?? ಭೇಷ್ ಎಂದ ನೆಟ್ಟಿಗರು
Comments are closed.