Neer Dose Karnataka
Take a fresh look at your lifestyle.

Shivaraj Kumar: ದೊಡ್ಮನೆ ಶಿವಣ್ಣ ರವರನ್ನು ಪದೇ ಪದೇ ಡಿಕೇಶಿ ರವರನ್ನು ಭೇಟಿಯಾಗುತ್ತಿರುವುದು ಯಾಕೆ ಗೊತ್ತೇ?? ಶಿವಣ್ಣ ಹೇಳಿದ್ದೇನು ಗೊತ್ತೇ??

11,009

Shivaraj Kumar: ದೊಡ್ಮನೆಯ ಮಕ್ಕಳು ಯಾವಾಗಲೂ ಸಹ ರಾಜಕೀಯದಿಂದ ದೂರವೇ ಇದ್ದಾರೆ. ಡಾ.ರಾಜ್ ಕುಮಾರ್ ಅವರು, ಪುನೀತ್ ರಾಜ್ ಕುಮಾರ್ ಅವರು ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಮೂವರು ಸಹ ರಾಜಕೀಯದಿಂದ ಅತ್ಯಂತ ದೂರವೇ ಉಳಿದಿದ್ದಾರೆ. ಆದರೆ ಇವರಿಗೆ ರಾಜಕೀಯದ ಸಾಕಷ್ಟು ಗಣ್ಯರು ಆಪ್ತರಾಗಿದ್ದಾರೆ. ಶಿವ ರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್ ಕುಮಾರ್ ಅವರು ರಾಜಕೀಯ ಕುಟುಂಬಕ್ಕೆ ಸೇರಿದವರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳಾದ ಗೀತಾ ಶಿವ ರಾಜ್ ಕುಮಾರ್ ಅವರು ಕೆಲ ವರ್ಷಗಳ ಹಿಂದೆ ಎಲೆಕ್ಷನ್ ಗೆ ನಿಂತಿದ್ದರು, ಆದರೆ ಸಹೋದರರು ಕೂಡ ರಾಜಕೀಯದಲ್ಲಿ ಸಕ್ರಿಯರಾಗಿರುವವರಾಗಿದ್ದಾರೆ. ಹಾಗಾಗಿ ಎಲೆಕ್ಷನ್ ನಡೆದಾಗಲೆಲ್ಲಾ ಗೀತ ಶಿವ ರಾಜ್ ಕುಮಾರ್ ಅವರು ಪ್ರಚಾರಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷ ಶಿವ ರಾಜ್ ಕುಮಾರ್ ಅವರು ಸಹ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಿದರು. ಇದನ್ನು ಓದಿ..Election Gift: ರಾಮನಗರದ ಮತದಾರರಿಗೆ ಶಾಕ್ ಕೊಟ್ಟ ಕಾಂಗ್ರೆಸ್ ಶಾಸಕ- ಗೆಲ್ಲುವ ಮುನ್ನ ಕೊಟ್ಟಿದ್ದ ಗಿಫ್ಟ್ ಕಾರ್ಡ್ ಕತೆ ಏನಾಗಿದೆ ಗೊತ್ತೇ?

ಶಿವಣ್ಣ ಅವರು ಪಕ್ಷದ ಪರವಾಗಿ ಪ್ರಚಾರ ಮಾಡಿದ್ದು ಮಾತ್ರವಲ್ಲದೆ, ಇದೀಗ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಇದು ಮೊದಲ ಸಾರಿ ಮಾತ್ರವಲ್ಲ, ಕೆಲ ಸಮಯದಿಂದ ಆಗಾಗ ಇವರಿಬ್ಬರು ಭೇಟಿ ಆಗುತ್ತಿರುವುದು ಜನರಲ್ಲಿ ಕುತೂಹಲ ಮೂಡಿಸಿತ್ತು, ಶಿವಣ್ಣ ಏನಾದರೂ ರಾಜಕೀಯಕ್ಕೆ ಬರುತ್ತಾರಾ ಎನ್ನುವ ಅನುಮಾನವನ್ನು ಸಹ ಹುಟ್ಟುಹಾಕಿದೆ. ಈ ವಿಚಾರದ ಬಗ್ಗೆ ಖುದ್ದು ಶಿವಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ..

“ಡಿಕೆ ಶಿವಕುಮಾರ್ ಅವರು ಬಹಳ ಹಳೆಯ ಪರಿಚಯ, ಅವರನ್ನು ಈಗಾಗಲೇ ಭೇಟಿ ಆಗಬೇಕಿತ್ತು..ಆದರೆ ನಾನು ತಮಿಳು ಸಿನಿಮಾ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಗೆ ಹೋಗಿದ್ದೆ, ಅಲ್ಲಿ ಬ್ಯುಸಿ ಇದ್ದು ಶೂಟಿಂಗ್ ಮುಗಿಯೋದು ಲೇಟ್ ಆಗಿತ್ತು, ಹಾಗಾಗಿ ಭೇಟಿ ಮಾಡೋಕೆ ಆಗಿರಲಿಲ್ಲ. ಈಗ ಭೇಟಿ ಮಾಡಿದ್ದೀವಿ, ಇದು ಕ್ಯಾಶುವಲ್ ಮೀಟಿಂಗ್ ಅಷ್ಟೇ..” ಎಂದು ಹೇಳಿದ್ದಾರೆ ಶಿವಣ್ಣ. ಇದನ್ನು ಓದಿ..News: ಬಿಟ್ಟಿ ಯೋಜನೆಗಳ ನಡುವೆ ರಾಜ್ಯದ ಜನತೆಗೆ ಮತ್ತೊಂದು ಶಾಕ್- ವಿದ್ಯುತ್ ಆಯಿತು, ಅದರ ಪರಿಣಾಮ ಏನಾಗಿದೆ ಗೊತ್ತೆ?

Leave A Reply

Your email address will not be published.