Election Gift: ರಾಮನಗರದ ಮತದಾರರಿಗೆ ಶಾಕ್ ಕೊಟ್ಟ ಕಾಂಗ್ರೆಸ್ ಶಾಸಕ- ಗೆಲ್ಲುವ ಮುನ್ನ ಕೊಟ್ಟಿದ್ದ ಗಿಫ್ಟ್ ಕಾರ್ಡ್ ಕತೆ ಏನಾಗಿದೆ ಗೊತ್ತೇ?
Election Gift: ಎಲೆಕ್ಷನ್ ಎಂದರೆ ಅದರಲ್ಲಿ ಸ್ಪರ್ಧಿಸುವ ಒಬ್ಬೊಬ್ಬರು ಸಹ ತಮ್ಮದೇ ರೀತಿಯಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಅದೇ ರೀತಿ ರಾಮನಗರದ ಶಾಸಕ ಕಾಂಗ್ರೆಸ್ ಪಕ್ಷದ ಇಕ್ಬಾಲ್ ಹುಸೇನ್, ತಮ್ಮ ಕ್ಷೇತ್ರದ ಜನತೆಗೆ ಗಿಫ್ಟ್ ಕಾರ್ಡ್ ಹಂಚಿದ್ದರು. ಇದನ್ನು ಹುಷಾರಾಗಿ ಇಟ್ಟುಕೊಂಡು ನಮಗೆ ವೋಟ್ ಹಾಕಿ, ಎಲೆಕ್ಷನ್ ಮುಗಿದ ನಂತರ ಸೂಕ್ತವಾದ ಗಿಫ್ಟ್ ಕೊಡುತ್ತೇವೆ ಎಂದು ಜನರಿಗೆ ಹೇಳಿದ್ದು, ಆದರೆ ಎಲೆಕ್ಷನ್ ಮುಗಿದ ನಂತರ ಅದರ ಸುದ್ದಿಯೇ ಇಲ್ಲ ಎಂದು ಜನರು ಆಕ್ರೋಶಗೊಂಡಿದ್ದಾರೆ.
ಇತ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಆ ಇಕ್ಬಾಲ್ ಹುಸೇನ್ ವಿರುದ್ಧ ಗಿಫ್ಟ್ ಕಾರ್ಡ್ ಹಂಚಲಾಗಿದೆ ಎಂದು ಆರೋಪ ಮಾಡಿದ್ದರು. ಸುಮಾರು 40,000 ಗಿಫ್ಟ್ ಕಾರ್ಡ್ ಗಳನ್ನು ಹಂಚಲಾಗಿದೆ ಎಂದು ಹೇಳಲಾಗುತ್ತಿದೆ. ಜನರು ಈಗ ಇಕ್ಬಾಲ್ ಹುಸೇನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಗಿಫ್ಟ್ ಕಾರ್ಡ್ ಗಳನ್ನು ಕೊಡುವಾಗ ಅದನ್ನು ಹುಷಾರಾಗಿ ಇಟ್ಟುಕೊಳ್ಳಿ, ಹಾಳು ಮಾಡಬೇಡಿ ಎಂದಿದ್ದರು.. ಇದನ್ನು ಓದಿ..Pratap Simha: ಖಡಕ್ ಆಗಿ ಮಾತನಾಡುತ್ತಿದ್ದ ಪ್ರತಾಪ್ ಸಿಂಹ ಗೆ ಖಡಕ್ ಎಚ್ಚರಿಕೆ- ಸೈಲೆಂಟ್ ಆದ ಪ್ರತಾಪ್ ಸಿಂಹ- ಕೊಟ್ಟದ್ದು ಯಾರು ಗೊತ್ತೇ??
ಇದನ್ನು ಇಟ್ಟುಕೊಂಡು ನಮಗೆ ವೋಟ್ ಹಾಕಿ, ನಿಮಗೆಲ್ಲ ಗಿಫ್ಟ್ ಕೊಡುತ್ತೇವೆ ಎಂದು ಹೇಳಿ, ಜನರಲ್ಲಿ ನಂಬಿಕೆ ಬರುವ ಹಾಗೆ ಮಾಡಿದ್ದರು. ಆದರೆ ಎಲೆಕ್ಷನ್ ಮುಗಿದು ಒಂದು ತಿಂಗಳಿಗಿಂತ ಹೆಚ್ಚಿನ ಸಮಯ ಆಗಿದ್ದರು ಸಹ, ಇನ್ನು ಈ ಕಡೆ ಬಂದೇ ಇಲ್ಲ, ನಮಗೆ ಕೊಟ್ಟಿರುವ ಗಿಫ್ಟ್ ಕಾರ್ಡ್ ಗಳ ಕಥೆ ಏನು ಎಂದು ಜನರು ಈಗ ತಲೆ ಕೆಡಿಸಿಕೊಂಡಿದ್ದಾರೆ.
ಜೆಡಿಎಸ್ ಪಕ್ಷದಿಂದಲು ಆರೋಪ ಬಂದ ನಂತರ ಇಕ್ಬಾಲ್ ಹುಸೇನ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಕ್ಬಾಲ್ ಹುಸೇನ್ ಹೇಳಿರುವುದು, ಇದೆಲ್ಲಾ ಎಲೆಕ್ಷನ್ ನ ತಂತ್ರಗಾರಿಕೆ ಮಾತ್ರ, ಗಿಫ್ಟ್ ಕಾರ್ಡ್ ಕೊಟ್ಟು ಹುಷಾರಾಗಿ ಇಟ್ಟುಕೊಳ್ಳಿ ಗಿಫ್ಟ್ ಕೊಡ್ತೀವಿ ಅಂತ ಹೇಳಿದ್ದೀವಿ, ಅದೇ ಥರ ಗಿಫ್ಟ್ ಕೊಡ್ತೀವಿ.. ಜನರು ಸ್ವಲ್ಪ ಕಾಯಬೇಕು..ಎಂದು ಹೇಳಿದ್ದಾರೆ. ಇದನ್ನು ಓದಿ..Free Rice: ಅಕ್ಕಿ ಮಾತ್ರ ಬೇಕೇ?? ಅಕ್ಕಿ ಸಿಗಲಿಲ್ಲ ಎಂದರೆ ಈ ರೀತಿ ಮಾಡಬಹುದು ಅಲ್ಲವೇ?? ಕೃಷಿ ಅರ್ಥ ಶಾಸ್ತ್ರಜ್ಞ ಹೇಳಿದ್ದೇನು ಗೊತ್ತೇ?
Comments are closed.