Home Loan: ನೀವು EMI ನಲ್ಲಿ ಮನೆ ಖರೀದಿ ಮಾಡಲು, ನಿಮಗೆ ಕನಿಷ್ಠ ಆದಾಯ ಎಷ್ಟು ಇರಬೇಕು ಗೊತ್ತೇ? ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?
Home Loan: ಎಲ್ಲರಿಗೂ ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಇರುತ್ತದೆ. ಭಾರತದಲ್ಲಿ ಮನೆ ಎನ್ನುವುದು ಒಂದು ಎಮೋಷನ್ ಇದ್ದ ಹಾಗೆ, ಈ ಕಾರಣಕ್ಕೆ ಬಹುತೇಕ ಎಲ್ಲರೂ ಕೆಲಸ ಸಿಕ್ಕ ತಕ್ಷಣ ಮನೆ ಅಥವಾ ಫ್ಲ್ಯಾಟ್ ಖರೀದಿ ಮಾಡಬೇಕು ಎಂದು ಪ್ಲಾನ್ ಮಾಡುತ್ತಾರೆ. ಸಿಟಿಗಳಲ್ಲಿ ಈ ಟ್ರೆಂಡ್ ಹೆಚ್ಚಾಗಿದೆ. ಈಗ ಜನರು ಕೂಡ ಸುಲಭವಾಗಿ ಹೋಮ್ ಲೋನ್ (Home Loan) ಪಡೆಯಬಹುದು. ಸೇವಿಂಗ್ಸ್ ಮಾಡಿರುವುದರಲ್ಲಿ ಡೌನ್ ಪೇಮೆಂಟ್ ಮಾಡಬಹುದು. ಅಥವಾ ಮನೆಯವರ ಸಹಾಯ ಪಡೆದುಕೊಳ್ಳಬಹುದು.
ಈಗ ಮನೆ ಖರೀದಿ ಮಾಡಬೇಕೋ ಬೇಡವೋ ಎನ್ನುವ ಚರ್ಚೆ ಕೂಡ ನಡೆಯುತ್ತದೆ. ಬಾಡಿಗೆ ಮನೆಯಲ್ಲಿ ಇರುವುದರಿಂದ ಆಗುವ ಒಳ್ಳೆಯದಾದರು ಏನು? ಮನೆ ಖರೀದಿ ಮಾಡುವುದು ಅಥವಾ ಬಾಡಿಗೆ ಮನೆಯಲ್ಲಿ ಇರುವುದು? ಈ ಎರಡು ನಿರ್ಧಾರ ನಿಮ್ಮ ಸಂಬಳದ ಮೇಲೆ ಅವಲಂಬಿಸಿರುತ್ತದೆ. ನಿಮ್ಮ ಆದಾಯ ಹಾಗೂ ಬದುಕಿನ ಅಗತ್ಯತೆ ಹೇಗಿದೆ ಎನ್ನುವುದರ ಮೇಲೆ ನೀವು ನಿರ್ಧಾರ ತೆಗೆದುಕೊಳ್ಳಬೇಕು. ಆಗ ಆರ್ಥಿಕ ಸಮಸ್ಯೆ ಬಗ್ಗೆ ಯೋಚನೆ ಮಾಡಬೇಕಿಲ್ಲ. ಇದನ್ನು ಓದಿ..Indian Law: ಪೊಲೀಸರು ಇನ್ನು ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡುವಂತೆ ಇಲ್ಲ. ಕಾನೂನಿನ ಹೊಸ ರೂಲ್ಸ್- ಪೊಲೀಸರಿಗೆ ಕಡಿವಾಣ.
ಮನೆಯನ್ನು ಯಾವಾಗ ಖರೀದಿ ಮಾಡಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವ ಮೊದಲ ಪ್ರಶ್ನೆ. ಇದಕ್ಕೆ ಉತ್ತರ ನಿಮ್ಮ ಸಂಬಳ ಎಷ್ಟಿದೆ ಎನ್ನುವುದೇ ಆಗಿದೆ. ನಿಮ್ಮ ಸಂಬಳಕ್ಕೆ ತಕ್ಕ ಹಾಗೆ, EMI (Home Loan) ಪ್ಲಾನ್ ಮಾಡಿಕೊಳ್ಳಬೇಕು. ಇದಕ್ಕಾಗಿ ಒಂದು ಸರಳ ಸೂತ್ರವನ್ನು ನೀವು ಪಾಲಿಸಬೇಕು. ನಿಮ್ಮ ಸಂಬಳದ 20 ಅಥವಾ 25% ಅಷ್ಟು ಹಣವನ್ನು EMI (Home Loan) ಕಟ್ಟುವ ಹಾಗೆ ಇರಬೇಕು. ಒಂದು ವೇಳೆ ನಿಮ್ಮ ತಿಂಗಳ ಸಂಬಳ ₹1,00,000 ರೂಪಾಯಿ ಆಗಿದ್ದರೆ, ₹25,000ವರೆಗು EMI ಸುಲಭವಾಗಿ ಪಾವತಿ ಮಾಡಬಹುದು.
ಒಂದು ವೇಳೆ ನಿಮ್ಮ ಸಂಬಳ 50 ರಿಂದ 70 ಸಾವಿರ ಆಗಿದ್ದರೆ ಆಗ 25 ಸಾವಿರ EMI ಕಟ್ಟುವುದು ತಪ್ಪು ನಿರ್ಧಾರ ಆಗುತ್ತದೆ. ಯಾಕೆಂದರೆ ಹೋಮ್ ಲೋನ್ (Home Loan) ಪೂರ್ತಿಯಾಗಲು ಸುಮಾರು 20 ವರ್ಷಗಳ ಸಮಯ ಆಗಬಹುದು, ಹಾಗಾಗಿ ನೀವು ಮನೆ ಖರೀದಿ ಮಾಡುವ ವೇಳೆಗೆ ಯೋಚಿಸಿ ನಿರ್ಧಾರ ಮಾಡಿ. ನಿಮ್ಮ ಸಂಬಳ 50 ರಿಂದ 70 ಸಾವಿರವಿದ್ದರೆ, 20 ಸಾವಿರದವರೆಗು EMI ಕಟ್ಟಬಹುದು. ಹೀಗೆ ನೀವು ಪ್ಲಾನ್ ಮಾಡಿಕೊಂಡು, 25 ಲಕ್ಷ ರೂಪಾಯಿಯವರೆಗು ಇರುವ ಮನೆ ಖರೀದಿ ಮಾಡಬಹುದು. ಇದನ್ನು ಓದಿ..ITR Filing: ನೀವು ಒಂದು ರೂಪಾಯಿ ತೆರಿಗೆ ಕಟ್ಟದೆ ಇದ್ದರೂ ITR ಫೈಲ್ ಮಾಡುವುದು ಮುಖ್ಯ – ಕಡಿಮೆ ಆದಾಯ ಆದ್ರೂ ಸರಿ ITR ಫೈಲ್ ಮಾಡಿದರೆ ಏನು ಲಾಭ ಗೊತ್ತೇ?
ಒಂದು ವೇಳೆ ನಿಮ್ಮ ಆದಾಯ 50 ರಿಂದ 70 ಸಾವಿರ ಇದ್ದು, ಮನೆ 30 ಲಕ್ಷಕ್ಕಿಂತ ಜಾಸ್ತಿ ಇದ್ದರೆ, ನೀವು ಬಾಡಿಗೆ ಮನೆಯಲ್ಲಿ ಇರುವುದು ಒಳ್ಳೆಯ ಆಯ್ಕೆ. ಆಗ ನೀವು ಪ್ರತಿ ತಿಂಗಳು ಹಣ ಉಳಿಸುವ ಬಗ್ಗೆ ಗಮನ ಹರಿಸಿ. ನಿಮ್ಮ ಸಂಬಳ ಒಂದು ಲಕ್ಷ ತಲುಪಿದಾಗ, ಡೌನ್ ಪೇಮೆಂಟ್ ಮಾಡಿ ಮನೆ ಖರೀದಿ ಮಾಡಬಹುದು. ಡೌನ್ ಪೇಮೆಂಟ್ ಹೆಚ್ಚು ಮಾಡಿದಷ್ಟು EMI ಕಡಿಮೆ ಆಗುತ್ತದೆ. ಇಷ್ಟು ಸಂಬಳದಲ್ಲಿ ನೀವು 25 ರಿಂದ 30 ಲಕ್ಷದವರೆಗು ಮನೆ ಖರೀದಿ ಮಾಡಬಹುದು. ಒಂದು ವೇಳೆ 1.5ಲಕ್ಷ ಸಂಬಳ ಇದ್ದರೆ, 50 ಲಕ್ಷದವರೆಗು ಮನೆ ಖರೀದಿ ಮಾಡಬಹುದು. ಇದನ್ನು ಓದಿ..Xtreme 160R 4V: ಹೆಚ್ಚು ಬೇಡ- ಕೇವಲ 14 ಸಾವಿರ ಖರ್ಚು ಮಾಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ- ಅದು ಹೀರೋ Xtreme 160R 4V ಬೈಕ್.
Comments are closed.