Anna Bhagya Money: ಅಕ್ಕಿ ನಂಬಿಕೊಂಡಿದ್ದವರಿಗೆ ದುಡ್ಡು- ಆದರೆ ಅವರ ಎಲ್ಲವೂ ಕಟ್ ಆಗಿ, ಜನರ ಕೈ ಸೇರುವುದು ಎಷ್ಟು ಗೊತ್ತೇ? ಇಷ್ಟೇನಾ?
Anna Bhagya Money: ಕಾಂಗ್ರೆಸ್ (Congress) ಸರ್ಕಾರವು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬಿಪಿಎಲ್ (BPL) ಹಾಗೂ ಎಪಿಎಲ್ (APL) ಕಾರ್ಡ್ ಹೊಂದಿರುವ ಎಲ್ಲರಿಗೂ ಕೂಡ ಅನ್ನಭಾಗ್ಯ ಯೋಜನೆಯ (Anna Bhagya Money) ಅಡಿಯಲ್ಲಿ ರೇಶನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗು ಕೂಡ ತಿಂಗಳಿಗೆ 10 ಕೆಜಿ ಕೊಡುವ ಭರವಸೆ ನೀಡಿತ್ತು. ಆದರೆ ಈ ಯೋಜನೆಗೆ ಕೇಂದ್ರ ಸರ್ಕಾರದ ಕಡೆಯಿಂದ ಸಾಥ್ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಅಕ್ಕಿ (Anna Bhagya Money) ಪೂರೈಕೆ ಮಾಡುವುದಿಲ್ಲ ಎಂದು ಹೇಳಿದೆ..
ರಾಜ್ಯದ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹಾಗೂ ಆಹಾರ ಸಚಿವ ಕೆಎಂ ಮುನಿಯಪ್ಪ (KM Muniappa) ಅವರು ಕೇಂದ್ರ ಸರ್ಕಾರದ ನಾಯಕರನ್ನು ಭೇಟಿ ಮಾಡಿ, ಈ ಬಗ್ಗೆ ಮಾತುಕತೆ ನಡೆಸಿದ್ದು, ಕೇಂದ್ರ ಸರ್ಕಾರ ಖಡಾಖಂಡಿತವಾಗಿ ಅಕ್ಕಿ (Anna Bhagya Money) ಕೊಡುವುದಿಲ್ಲ ಎಂದು ನಿರ್ಧಾರ ಮಾಡಿದ್ದಕ್ಕೆ, ಸಿದ್ದರಾಮಯ್ಯ ಅವರು ಅಕ್ಕಿಯ ಬದಲಾಗಿ ಜನರ ಬ್ಯಾಂಕ್ ಅಕೌಂಟ್ ಗೆ ದುಡ್ಡು ಹಾಕುವ ನಿರ್ಧಾರ ಮಾಡಿದ್ದಾರೆ. ಜನರಿಗೆ ಎಷ್ಟು ಹಣ ಸಿಗುತ್ತದೆ? ಈ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿದ್ದೇನು ? ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Indian Law: ಪೊಲೀಸರು ಇನ್ನು ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡುವಂತೆ ಇಲ್ಲ. ಕಾನೂನಿನ ಹೊಸ ರೂಲ್ಸ್- ಪೊಲೀಸರಿಗೆ ಕಡಿವಾಣ.
ಮಾಧ್ಯಮದ ಎದುರು ಮಾತನಾಡಿದ ಸಿದ್ದರಾಮಯ್ಯ ಅವರು, “ಅಕ್ಕಿ ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು, ಆದರೆ 14ರಂದು ಅಕ್ಕಿ ಇಲ್ಲ ಎಂದು ತಿಳಿಸಿ ಪತ್ರ ಕಳಿಸಿದ್ದಾರೆ. ನಾವು ದುಡ್ಡು ಕೊಡ್ತೀವಿ ಅಂದ್ರು ಕೂಡ ಕೇಂದ್ರ ಸರ್ಕಾರ ಅಕ್ಕಿ ಕೊಡ್ತಿಲ್ಲ, ಬಡವರಿಗೆ ಕೇಂದ್ರದಿಂದ ಅನ್ಯಾಯ ಆಗ್ತಿದೆ. ಪ್ರೈವೇಟ್ ನವರಿಗೆ ಅಕ್ಕಿ ಕೊಡ್ತಿದ್ದಾರೆ. ಇದು ಬಡವರಿಗಾಗಿ ಮಾಡಿರುವ ಯೋಜನೆ, ಕೇಂದ್ರದಿಂದ ದ್ರೋಹ ಆಗ್ತಿದೆ. ಯಡಿಯೂರಪ್ಪ (Yediyurappa) ಹಾಗೂ ಬಸವರಾಜ್ ಬೊಮ್ಮಾಯಿ (Basavaraj Bommai) ಹೋಗಿ ಕೇಂದ್ರ ಸರ್ಕಾರದ ಜೊತೆಗೆ ಮಾತನಾಡಲಿ, ಅಕ್ಕಿ ಕೊಡಿ ಎಂದು ಕೇಳಲಿ..” ಎಂದಿದ್ದಾರೆ..
“ಜುಲೈ ತಿಂಗಳಿನಿಂದ 10ಕೆಜಿ ಅಕ್ಕಿ ಕೊಡ್ತೀವಿ ಅಂತ ಹೇಳಿದ್ವಿ.. ಕೇಂದ್ರ ಸರ್ಕಾರದಿಂದ 5ಕೆಜಿ ಅಕ್ಕಿ ಸಿಗುತ್ತದೆ, ಇನ್ನು 5 ಕೆಜಿ ನಾವು ಕೊಡಬೇಕು. ಆದರೆ ಈಗ ಅಕ್ಕಿ ಇಲ್ಲ, ಈಗ ನಮಗೆ 2.29 ಟನ್ ಅಕ್ಕಿ ಪೂರೈಕೆ ಆಗಬೇಕು..ಫುಡ್ ಸೆಕ್ಯೂರಿಟಿ ಆಕ್ಟ್ ನಲ್ಲಿ ಅಕ್ಕಿ ಕೊಡ್ತೀವಿ ಎಂದು ಹೇಳಿತ್ತು. ಆದರೆ ಈಗ ಅಕ್ಕಿ ಇಲ್ಲ..ಈ ಕಾರಣಗಳಿಂದ ಅಕ್ಕಿ (Anna Bhagya Money) ಸಿಗುವವರೆಗೂ, ಜನರ ಅಕೌಂಟ್ ಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ 170 ರೂಪಾಯಿ ನೀಡುತ್ತೇವೆ..ಎಲ್ಲರಿಗೂ 5 ಕೆಜಿ ಅಕ್ಕಿ (Anna Bhagya Money) ಜೊತೆಗೆ 170 ರೂಪಾಯಿ ನೀಡುತ್ತೇವೆ..” ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಇದನ್ನು ಓದಿ..Car Theft: ಕೆಲವೇ ನಿಮಿಷಗಳಲ್ಲಿ, ಲಕ್ಷ ಲಕ್ಷ ಬೆಲೆ ಬಾಳುವ ಫಾರ್ಚುನರ್ ಕಾರ್ ಕದ್ದ ಕಳ್ಳ- ಅದೆಷ್ಟು ಸುಲಭವಾಗಿ ಗೊತ್ತೇ?
ಈ ಮಾತುಗಳನ್ನು ಕೇಳಿ ಜನರಿಗೆ ನಿರಾಸೆಯಾಗಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಕೂಡ ಮಾತನಾಡಿ, ನಾವು ದುಡ್ಡು ಕೊಡ್ತೀವಿ ಅಂದ್ರು ಕೂಡ ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡಲಿಲ್ಲ.. ಜುಲೈ 1ರಿಂದ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ವಿ, ಈಗ ಅಕ್ಕಿ ಸಿಗದೆ ಕೊಡೋದಕ್ಕೆ ಆಗ್ತಿಲ್ಲ. ಅದರ ಬದಲಾಗಿ ಹಣ ಕೊಡ್ತೀವಿ..ನಮ್ಮ ಗ್ಯಾರಂಟಿ ಯೋಜನೆಗಳನ್ನು ಖಂಡಿತವಾಗಿ ಜಾರಿಗೆ ತರುತ್ತೇವೆ.. ಎಂದು ಹೇಳಿದ್ದಾರೆ. ಸರ್ಕಾರವನ್ನೇ ನಂಬಿಕೊಂಡಿದ್ದ ಜನರಿಗೆ ಈಗ ಬಹಳ ನಿರಾಸೆಯಾಗಿದೆ. ಇದನ್ನು ಓದಿ..Law: ಹೆಂಡತಿ ತಪ್ಪು ಮಾಡಿ ವಿಚ್ಚೇದನ ಪಡೆದಾಗ ಗಂಡನಾದವನು ಎಷ್ಟು ಹಣ ಕೊಡಬೇಕು? ಕಾನೂನು ಹೇಳುವುದೇನು ಗೊತ್ತೇ?
Comments are closed.