Neer Dose Karnataka
Take a fresh look at your lifestyle.

Ankita Amar: ಭಾಗ್ಯಲಕ್ಷಿ ಧಾರಾವಾಹಿಗೆ ದಿಡೀರ್ ಎಂದು ಬಂದಿರುವ ಅಂಕಿತ ರವರು ಪಡೆಯುತ್ತಿರುವ ದಾಖಲೆ ಸಂಭಾವನೆ ಎಷ್ಟು ಗೊತ್ತೇ?

Ankita Amar: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿ ಭಾಗ್ಯಲಕ್ಷ್ಮಿಯಲ್ಲಿ (Bhagyalakshmi) ಈಗ ಸಾಕಷ್ಟು ತಿರುವುಗಳು ಮೂಡಿಬರುತ್ತಿದೆ. ಭಾಗ್ಯಳಿಗೆ ತೊಂದರೆ ಕೊಡುತ್ತಿದ್ದ, ಜಗಳ ಆಡುತ್ತಿದ್ದ ತಾಂಡವ ಈಗ ವರಸೆ ಬದಲಾಯಿಸಿದ್ದು, ಪ್ರೀತಿ ತೋರಿಸಿಯೇ ತನ್ನ ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕುವ ಪ್ಲಾನ್ ಮಾಡಿದ್ದಾನೆ. ತಾಯಿಯೇ ಭಾಗ್ಯಳನ್ನು ಮನೆಯಿಂದ ಹೊರಹಾಕಬೇಕು ಎನ್ನುವ ಪ್ಲಾನ್ ತಾಂಡವ್ ದಾಗಿದೆ. ಇದರಿಂದ ಅತ್ತೆ ಸೊಸೆ ನಡುವೆ ಜಗಳ ಶುರುವಾಗುತ್ತಾ ಎಂದು ವೀಕ್ಷಕರು ಯೋಚಿಸುತ್ತಿದ್ದಾರೆ..

ಆದರೆ ಈ ವೇಳೆ ಧಾರಾವಹಿಗೆ ಹೊಸ ಪಾತ್ರ ಎಂಟ್ರಿ ಆಗಿದೆ. ಈ ಪಾತ್ರ ಭಾಗ್ಯಳ ಜೀವನಕ್ಕೆ ಹತ್ತಿರ ಆಗುವುದು ಖಂಡಿತ, ಕಲರ್ಸ್ ಕನ್ನಡ (Colors Kannada) ವಾಹಿನಿ ಪ್ರೊಮೋ ಶೇರ್ ಮಾಡಿದ್ದು, ಸರ್ಪ್ರೈಸ್ ಗೆಸ್ಟ್ ಎಂದು ತಿಳಿಸಿದೆ. ಆ ಗೆಸ್ಟ್ ಮತ್ಯಾರು ಅಲ್ಲ, ನಮ್ಮನೆ ಯುವರಾಣಿ ಧಾರವಾಹಿಯ ಮೀರಾ, ನಟಿ ಅಂಕಿತಾ ಅಮರ್ (Ankita Amar). ನಮ್ಮನೆ ಯುವರಾಣಿ ಧಾರವಾಹಿ ಮುಗಿದ ನಂತರ ಅಂಕಿತಾ (Ankita Amar) ಅವರು ಕನ್ನಡ ಧಾರವಾಹಿಯಲ್ಲಿ ನಟಿಸಿರಲಿಲ್ಲ.. ಇದನ್ನು ಓದಿ..Malavika: ಗಣೇಶ್ ಸಿನೆಮಾಗೆ ಬೆಣ್ಣೆಯಂತಹ ಮಲಯಾಳಿ ನಾಯಕಿ- ನೋಡಲು ಎರಡು ಕಣ್ಣು ಸಾಲದು. ಎಲ್ಲಿಂದ ಬರ್ತಾರೋ ಇವೆಲ್ಲ.

ಈಗ ಭಾಗ್ಯಲಕ್ಷ್ಮಿ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಅಂಕಿತಾ ಅಮರ್ (Ankita Amar) ಅವರು ನಮ್ಮನೆ ಯುವರಾಣಿ ಧಾರವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು, ಜನ ಇವರನ್ನು ಕೋಳಿಮರಿ ಎಂದೇ ಕರೆಯುತ್ತಿದ್ದರು. ಮೀರಾ ಅನಿಕೇತ್ ಜೋಡಿ ಎಲ್ಲರ ಫೇವರೆಟ್ ಆಗಿತ್ತು ಎಂದರೆ ತಪ್ಪಲ್ಲ. ಈಗ ಅಂಕಿತಾ (Ankita Amar) ಅವರು ಭಾಗ್ಯಲಕ್ಷ್ಮಿ ಧಾರವಾಹಿ ಮೂಲಕ ಕಿರುತೆರೆಗೆ ರೀಎಂಟ್ರಿ ಕೊಡುತ್ತಿದ್ದು, ಅಭಿಮಾನಿಗಳು ಉತ್ಸುಕರಾಗಿ ಕಾಯುತ್ತಿದ್ದಾರೆ..

ನಟಿ ಅಂಕಿತಾ ಅಮರ್ (Ankita Amar) ಅವರು ಬಾಲನಟಿಯಾಗಿಯೇ ಶಂಕರ್ ನಾಗ್ (Shankar Nag) ಅವರೊಡನೆ ನಟಿಸಿದ್ದರು, ತುಂಟ ಸಿನಿಮಾದಲ್ಲು ನಟಿಸಿದ್ದರು. ಅಂಕಿತಾ (Ankita Amar) ಅವರು ಕನ್ನಡ ಮಾತ್ರವಲ್ಲದೆ, ತೆಲುಗು ಕಿರುತೆರೆಯಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ನಟನೆ ಮಾತ್ರವಲ್ಲದೆ ಎದೆ ತುಂಬಿ ಹಾಡುವೆನು ಕಾರ್ಯಾಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿ, ಜನರಿಗೆ ಬಹಳ ಇಷ್ಟವಾಗಿದ್ದರು. ಕನ್ನಡದಲ್ಲಿ ಬ್ರೇಕ್ ಪಡೆದಿದ್ದ ಇವರು ಈಗ ಭಾಗ್ಯಲಕ್ಷ್ಮಿ ಮೂಲಕ ಮತ್ತೆ ಬರುತ್ತಿದ್ದಾರೆ.. ಇದನ್ನು ಓದಿ..Money Savings: ಸರ್ಕಾರದಿಂದ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬದಲಾವಣೆ- ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಸೇಫ್ ಮತ್ತು ಬೆಸ್ಟ್.

ಅಂಕಿತಾ ಅಮರ್ (Ankita Amar) ಅವರು ಬೆಳ್ಳಿತೆರೆಯಲ್ಲಿ ಕೂಡ ಸದ್ದು ಮಾಡೋದಕ್ಕೆ ತಯಾರಾಗಿದ್ದಾರೆ. ಈಗಾಗಲೇ ಇವರು ಅಬಜಬದಬ ಸಿನಿಮಾದಲ್ಲಿ ನಟಿಸಿದ್ದು, ರಕ್ಷಿತ್ ಶೆಟ್ಟಿ (Rakshit Shetty) ಅವರ ಪ್ರೊಡಕ್ಷನ್ ನ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದಲ್ಲೂ ನಟಿಸಿದ್ದಾರೆ. ಅಂಕಿತಾ ಅವರು ಇದೀಗ ಕಿರುತೆರೆಗೆ ಮರಳಿ ಬಂದಿದ್ದು, ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಟಿಸುವುದಕ್ಕೆ, ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಮಾಹಿತಿಯ ಪ್ರಕಾರ ಅಂಕಿತಾ ಅವರಿಗೆ ಒಂದು ಎಪಿಸೋಡ್ ಗೆ 40 ಸಾವಿರ ಸಂಭಾವನೆ ಕೊಡಲಾಗುತ್ತಿದೆಯಂತೆ. ಇದನ್ನು ಓದಿ..Business Idea: ಸರ್ಕಾರವೇ ನಿಂತು ಸಹಾಯ ಮಾಡುವ ಈ ಬಿಸಿನೆಸ್ ಆರಂಭಿಸಿ- ಡಬಲ್ ಹಣ ಗಳಿಸಿ.

Comments are closed.