Nandini: ಪಕ್ಕದ ರಾಜ್ಯ ಕೇರಳದಿಂದ ಹೊರ ಬಂದ ಬೆನ್ನಲ್ಲೇ, ಸೆಡ್ಡು ಹೊಡೆದ ನಂದಿನಿ- ಖಡಕ್ ಹೆಜ್ಜೆ ಇಟ್ಟು ಮಾಡಿದ್ದೇನು ಗೊತ್ತೇ?
Nandini: ನಮ್ಮ ರಾಜ್ಯದ ಖ್ಯಾತ ಹಾಲಿನ ಬ್ರ್ಯಾಂಡ್ ನಂದಿನಿ (Nandini) ವಿಚಾರದಲ್ಲಿ, ಕೇರಳ (Kerala) ರಾಜ್ಯದಲ್ಲಿ ನಡೆದ ಘಟನೆಗಳ ಬಗ್ಗೆ ನಮಗೆ ಗೊತ್ತೇ ಇದೆ. ಕೇರಳ ರಾಜ್ಯದ ಘಟನೆ ನಡೆದು ಹೆಚ್ಚಿನ ಸಮಯ ಆಗಿಲ್ಲ, ಅದರ ಬೆನ್ನಲ್ಲೇ ನಂದಿನಿ (Nandini) ಈಗ ಹೊಸ ಹೆಜ್ಜೆ ಇಟ್ಟಿದೆ. ಈ ಖಡಕ್ ಹೆಜ್ಜೆ ಕನ್ನಡಿಗರಿಗೆ ಬಹಳ ಸಂತೋಷ ನೀಡಿದೆ ಎಂದರೆ ತಪ್ಪಲ್ಲ.
ನಂದಿನಿ ಸಂಸ್ಥೆ ಈಗ ತಮ್ಮ ಬ್ರ್ಯಾಂಡ್ ಹೊಸ ಕೆಫೆ ಶುರು ಮಾಡಿದ್ದು, ಇದಕ್ಕೆ ಕೆಫೆ ಮೂ (Cafe Moo) ಎಂದು ಹೆಸರು ಇಡಲಾಗಿದೆ. ಈ ಕೆಫೆಯನ್ನು ಈಗ ನಂದಿನಿ (Nandini) ಸಂಸ್ಥೆಯು ದುಬೈ (Dubai) ನಲ್ಲಿ ಶುರು ಮಾಡುತ್ತಿದ್ದು, ರಾಜ್ಯದಿಂದ ದುಬೈಗೆ ಉತ್ಪನ್ನಗಳ ಸರಬರಾಜು ಈಗಾಗಲೇ ಆಗಿದೆ. ಉತ್ಪನ್ನಗಳು ದುಬೈಗೆ ಸಾಗಿಸುವ ಕೆಲಸಕ್ಕೆ ಕೆಎಂಎಫ್ (KMF) ಅಧ್ಯಕ್ಷ ಭೀಮಾ ನಾಯಕ್ (Bheema Nayak) ಅವರು ಚಾಲನೆ ನೀಡಿ, ಇದರ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Maruti Suzuki Invicto: ಭರ್ಜರಿ ಮೈಲೇಜ್ ನೊಂದಿಗೆ ಬಿಡುಗಡೆಯಾದ ಹೊಸ ಕಾರು- ವಿಶೇಷತೆ, ಸ್ಪೆಷಲ್ ಆಯ್ಕೆ, ಮೈಲೇಜ್ ನ ಸಂಪೂರ್ಣ ಡೀಟೇಲ್ಸ್.
“ಮುಂದಿನ ತಿಂಗಳು ಆಗಸ್ಟ್ ಇಂದ ದುಬೈನಲ್ಲಿ ಕೆಫೆ ಮೂ ಶುರುವಾಗಲಿದೆ, ನಂದಿನಿ (Nandini) ಉತ್ಪನ್ನಗಳಾದ ಹಾಲು, ತಪ್ಪು ಹಾಗೂ ಇನ್ನಿತರ ಎಲ್ಲಾ ವಸ್ತುಗಳು ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.. “ಕೆಫೆ ಮೂ ಈಗ ಒಂದು ತಿಂಗಳಿಗೆ 1.50 ಕೋಟಿ ಸಂಪಾದನೆ ಮಾಡುತ್ತಿದೆ, ಇದನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ನಿರ್ಧಾರ ಮಾಡಿದ್ದೇವೆ.. ಇಲ್ಲಿ ಆಹಾರ ಪದಾರ್ಥಗಳ ಬೆಲೆ ದುಬಾರಿ ಇರುವುದಿಲ್ಲ, ಇದರಿಂದ ಹೆಚ್ಚು ಗ್ರಾಹಕರನ್ನು ಸೆಳೆಯಬಹುದು.
ನಂದಿನಿ (Nandini) ಉತ್ಪನ್ನಗಳ ಮಾರಾಟಕ್ಕೆ ಕೆಫೆ ಮೂ ಸಹಾಯ ಮಾಡುತ್ತದೆ. ಆದರೆ ನಮ್ಮ ದೇಶದಿಂದ ಹೊರಗೆ ಇದೇ ಮೊದಲ ಸಾರಿ ನಂದಿನಿ (Nandini) ಕೆಫೆ ಮೂ ಶುರುವಾಗುತ್ತಿದ್ದು, ಇದರಿಂದ ಗ್ಲೋಬಲ್ ಲೆವೆಲ್ ನಲ್ಲಿ ನಂದಿನಿಗೆ ಮನ್ನಣೆ ಸಿಗುತ್ತದೆ” ಎಂದು ಹೇಳಿದ್ದಾರೆ. ಈಗ ನಮ್ಮ ರಾಜ್ಯದಲ್ಲಿ 13 ಕೆಫೆ ಮೂ ಹಾಗೂ ಹೊರ ರಾಜ್ಯದಲ್ಲಿ 8 ಕೆಫೆ ಮೂ ಅನ್ನು ತೆರೆಯಲಾಗಿದೆ. ಇದನ್ನು ಓದಿ..Business Idea: ವರ್ಷ ಪೂರ್ತಿ ಡಿಮ್ಯಾಂಡ್ ಇರುವ ಈ ಉದ್ಯಮವನ್ನು ಐದು ಸಾವಿರ ಖರ್ಚು ಮಾಡಿ ಆರಂಭ ಮಾಡಿ. ಹಳ್ಳಿ ಹಳ್ಳಿಯು ಡಿಮ್ಯಾಂಡ್, ಯಶಸ್ಸು ಖಚಿತ.
ನಂದಿನಿ (Nandini) ಮೂ ಕೆಫೆ, ಸ್ಟಾರ್ ಬಕ್ಸ್, ಕೆಫೆ ಕಾಫಿ ಡೇ, ಮೆ ಡೋನಾಲ್ಡ್ಸ್ ಇವುಗಳ ರೀತಿಯಲ್ಲೇ ಕೆಲಸ ಮಾಡಲಿದೆ. ಈ ಕೆಫೆಯಲ್ಲಿ ಏನೆಲ್ಲಾ ಸಿಗುತ್ತದೆ ಎಂದು ನೋಡುವುದಾದರೆ.. ಫಿಲ್ಟರ್ ಕಾಫಿ, ಟೀ, ಮಿಲ್ಕ್ ಶೇಕ್, ಪಿಜ್ಜಾ, ಐಸ್‌ಕ್ರೀಂ, ಸಲಾಡ್, ಪನ್ನೀರ್ ಪಾಪ್‌ಕಾರ್ನ್, ಫ್ರೆಂಚ್ ಫ್ರೈಸ್, ಡೆಸರ್ಟ್ಸ್, ಬರ್ಗರ್, ಸ್ಕೂಪ್ಸ್, ಕೇಕ್, ದೋಸೆ.. ಇದೆಲ್ಲವೂ ಕೆಫೆ ಮೂ ನಲ್ಲಿ ಸಿಗಲಿದೆ. ಇದನ್ನು ಓದಿ..Nokia 4G: 4G ಆಯ್ಕೆಯೊಂದಿಗೆ ಕೀ ಪ್ಯಾಡ್ ಮೊಬೈಲ್ ಬಿಡುಗಡೆ ಮಾಡಿದ ನೋಕಿಯಾ- ಹಳ್ಳಿಯ ಜನರಿಗೆ ಇನ್ನು ಮುಂದೆ ಹಬ್ಬ
Comments are closed.