Nokia 4G: 4G ಆಯ್ಕೆಯೊಂದಿಗೆ ಕೀ ಪ್ಯಾಡ್ ಮೊಬೈಲ್ ಬಿಡುಗಡೆ ಮಾಡಿದ ನೋಕಿಯಾ- ಹಳ್ಳಿಯ ಜನರಿಗೆ ಇನ್ನು ಮುಂದೆ ಹಬ್ಬ
Nokia 4G: ನಮ್ಮ ದೇಶದಲ್ಲಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದು, ಗ್ರಾಹಕರ ನಂಬಿಕೆ ಗಳಿಸಿರುವ ಫೋನ್ ನೋಕಿಯಾ ಫೋನ್ ಆಗಿದೆ. ಇತ್ತೀಚೆಗೆ ಜಿಯೋ ಸಂಸ್ಥೆ ಜಿಯೋ ಭಾರತ್ 4G ಫೋನ್ ಅನ್ನು ಭಾರತಕ್ಕೆ ಸಂಪರ್ಕಿಸಿದ ನಂತರ, ನೋಕಿಯಾ ಸಂಸ್ಥೆಯಿಂದ 2 ಹೊಸ ಫೋನ್ ಗಳನ್ನು ಬಿಡುಗಡೆ ಮಾಡಲಾಗಿದೆ. HMD ಮಾಲೀಕತ್ವದ ನೋಕಿಯಾ ಹಾಗೂ ಯೂನಿಫೈಡ್ ಪೇಮೆಂಟ್ಸ್ ಇಂಟಫ್ರೇಸ್ (UPI) ಸಂಯೋಗದಲ್ಲಿ ನೋಕಿಯಾ 110 4G (Nokia 4G) ಹಾಗೂ ನೋಕಿಯಾ 110 2G ಎರಡು ಫೋನ್ ಗಳನ್ನು ಪರಿಚಯಿಸಿದ್ದು ಅವುಗಳ ವಿಶೇಷತೆ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ..
ಈ ನೋಕಿಯಾ 4G (Nokia 4G) ಕೀಪ್ಯಾಡ್ ಫೋನ್ ಗಳಲ್ಲಿ UPI ಆಯ್ಕೆ ಇರುತ್ತದೆ, ಹಾಗೆಯೇ ಇವು ವಾಟರ್ ಪ್ರೂಫ್ ಆಗಿದೆ, ಪಾಲಿಕಾರ್ಬೋನೇಟ್ ನ್ಯಾನೋ ಇಂದ ಮಾಡಲ್ಪಟ್ಟಿದೆ. ಈ ಎರಡು ಫೋನ್ ಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗಲಿದ್ದು, ನೋಕಿಯಾ ಇಂಡಿಯಾದ ಅಧಿಕೃತ ವೆಬ್ಸ್ಸೈಟ್ ಅಥವಾ ಇಕಾಮರ್ಸ್ ವೆಬ್ಸ್ಸೈಟ್ ನಲ್ಲಿ ಆರ್ಡರ್ ಮಾಡಬಹುದು. ಅಥವಾ ಆಫ್ಲೈನ್ ಮೂಲಕ ಅಂಗಡಿಗಳಲ್ಲಿ ಖರೀದಿ ಮಾಡಬಹುದು. ನೋಕಿಯಾ 110 4G (Nokia 4G) ಫೋನ್ ಬೆಲೆ ₹2499 ರೂಪಾಯಿ ಆಗಿದೆ. ಪರ್ಪಲ್ ಹಾಗೂ ಮಿಡ್ಲೈಟ್ ಬ್ಲೂ ಎರಡು ಕಲರ್ ಗಳಲ್ಲಿ ಸಿಗುತ್ತದೆ. ನೋಕಿಯಾ 110 2G ₹1,699 ರೂಪಾಯಿಗೆ ಸಿಗುತ್ತದೆ. ಇದು ಚಾರ್ಕೋಲ್ ಹಾಗೂ ಕ್ಲೌಡಿ ಬ್ಲೂ ಕಲರ್ ನಲ್ಲಿ ಲಭ್ಯವಿದೆ. ಇದನ್ನು ಓದಿ..Maruti Suzuki Invicto: ಭರ್ಜರಿ ಮೈಲೇಜ್ ನೊಂದಿಗೆ ಬಿಡುಗಡೆಯಾದ ಹೊಸ ಕಾರು- ವಿಶೇಷತೆ, ಸ್ಪೆಷಲ್ ಆಯ್ಕೆ, ಮೈಲೇಜ್ ನ ಸಂಪೂರ್ಣ ಡೀಟೇಲ್ಸ್.
ನೋಕಿಯಾ 110 4G (Nokia 4G) ಹಾಗೂ ನೋಕಿಯಾ 110 2G ಈ ಎರಡು ಕೂಡ ಫೀಚರ್ ಫೋನ್ ಗಳಾಗಿದೆ. 1.8ಇಂಚ್ QQVGA ಡಿಸ್ಪ್ಲೇ ಹೊಂದಿದೆ. 30+ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕೆಲಸ ಮಾಡುತ್ತದೆ. ಇದರಲ್ಲಿ ನೀವು ವೈರ್ ಹಾಗೂ ವೈರ್ಲೆಸ್ ಮೋಡ್ ಗಳ ಜೊತೆಗೆ ರೇಡಿಯೋ ಕೇಳಬಹುದು. ಇದರಲ್ಲಿ ನಿಮಗೆ ಇನ್ ಬಿಲ್ಟ್ UPI ಅಪ್ಲಿಕೇಶನ್ ಇರಲಿದ್ದು, ಇದರಿಂದ ನೀವು ಸುಲಭವಾಗಿ ಹಣದ ವಹಿವಾಟು ನಡೆಸಬಹುದು. ನೋಕಿಯಾ 110 4G (Nokia 4G) ಫೋನ್ ನಲ್ಲಿ Mp3 ಪ್ಲೇಯರ್ ಕೂಡ ಇದೆ. ಈ ಫೋನ್ ಗಳಲ್ಲಿ HD ಕಾಲ್ ಕ್ವಾಲಿಟಿ ಇರಲಿದೆ.
ನ್ಯಾನೋ ಸಿಮ್ ಸಪೋರ್ಟ್ ಇರಲಿದ್ದು, 12 ದಿನಗಳ ಬ್ಯಾಟರಿ ಸ್ಟ್ಯಾಂಡ್ ಬೈ ಇರಲಿದೆ.. ನೋಕಿಯಾ 110 2G ಮಿನಿ ಸಿಮ್ ಕಾರ್ಡ್ ಬಳಸುತ್ತದೆ. ನೋಕಿಯಾ 110 4G (Nokia 4G) ಫೋನ್ ನಲ್ಲಿ 3.5mm ಹೆಡ್ ಫೋನ್ ಜ್ಯಾಕ್ ಹಾಗೂ ಬ್ಲೂಟೂತ್ 5 ಕನೆಕ್ಷನ್ ಹೊಂದಿದೆ..ಈ ಎರಡು ಫೋನ್ ಗಳಲ್ಲಿ 32GB ವರೆಗು ಮೆಮೊರಿ ಎಕ್ಸ್ಟನ್ಡ್ ಮಾಡಬಹುದು. ಎರಡು ಫೋನ್ ಗಳ ಹಿಂದೆ QVGA ಕ್ಯಾಮೆರಾ ಸೆಟಪ್ ಇದೆ. ಈ ಎರಡು ಫೋನ್ ಗಳು ಧೂಳು ಹಾಗೂ ವಾಟರ್ ಪ್ರೂಫ್ ಆಗಿದ್ದು, IP52 ರೇಟಿಂಗ್ ಜೊತೆಗೆ ಬಂದಿದೆ. ಇದನ್ನು ಓದಿ..Gold Rate: ಶ್ರಾವಣ ಬರುವ ಮುನ್ನ ಖರೀದಿ ಮಾಡಿ- ಆಷಾಢದಲ್ಲಿ ಮತ್ತಷ್ಟು ಕುಸಿದ ಚಿನ್ನದ ಬೆಲೆ. ಅಂಗಡಿಗೆ ಮುಗಿಬಿದ್ದ ಜನರು.
ಒಂದೇ ಸ್ಪೀಕರ್, ಮೈಕ್ರೊಫೋನ್ ಹಾಗೂ USB ಸಪೋರ್ಟ್ ಸಹ ಇರುತ್ತದೆ. ನೋಕಿಯಾ 110 4G (Nokia 4G) 1450mAh ಬ್ಯಾಟರಿ ಹೊಂದಿದ್ದು, 8 ಗಂಟೆಗಳ ಟಾಕ್ ಟೈಮ್, 12 ದಿನಗಳ ಸ್ಟ್ಯಾಂಡ್ ಬೈ ಸಮಯ ನೀಡುತ್ತದೆ. ನೋಕಿಯಾ 110 2G ಫೋನ್ ನಲ್ಲಿ 1000mAh ಬ್ಯಾಟರಿ ಹೊಂದಿದೆ ಎಂದು ಕಂಪನಿ ತಿಳಿಸಿದೆ. ನೋಕಿಯಾ 110 4G (Nokia 4G) ಫೋನ್ ನ ಅಳತೆ 121.5×40×14.4mm ಇರುತ್ತದೆ, ತೂಕ 94.5 ಗ್ರಾಮ್ ಇರುತ್ತದೆ. ನೋಕಿಯಾ 110 2G 79.6 ಗ್ರಾಮ್ ಇರಲಿದ್ದು, 115.07×49.4×14.4mm ಅಳತೆ ಇದೆ. ಇದನ್ನು ಓದಿ..Tata Tiago: ನೋಡಲು ಬೆಂಕಿ ಪೊಟ್ಟಣದಂತೆ ಇರುವ ಟಾಟಾ ಟಿಯಾಗೋ ಕಾರು ಆಯಿತು ಪಲ್ಟಿ ಪಲ್ಟಿ- ಒಳಗಿರುವ ಜನರ ಕಥೆ ಏನಾಗಿದೆ ಗೊತ್ತೆ?
Comments are closed.