Neer Dose Karnataka
Take a fresh look at your lifestyle.

Nikhil Kumaraswamy: ಭದ್ರಕೋಟೆ ರಾಮನಗರದಲ್ಲಿ ಸೋತ ಬಳಿಕ- ಬೇರೆ ವಿಧಿಯಿಲ್ಲದೆ ಚಿತ್ರಕ್ಕೆ ವಾಪಸ್ಸು ಬಂದ ನಿಖಿಲ್.

Nikhil Kumaraswamy: ನಟ ಹಾಗೂ ರಾಜಕಾರಣಿ ಆಗಿ ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಸ್ಯಾಂಡಲ್ ವುಡ್ ಗೆ ಕಾಲಿಟ್ಟು, ಹಲವು ವರ್ಷಗಳಾಗಿದೆ. ಇವರು ಕೊನೆಯದಾಗಿ ಕಾಣಿಸಿಕೊಂಡಿದ್ದು ರೈಡರ್ ಸಿನಿಮಾದಲ್ಲಿ. ರೈಡರ್ ನಂತರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಲೋಕಸಭಾ ಎಲೆಕ್ಷನ್ ಹಾಗೂ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿದ್ದರು. ಈಗ ಎಲೆಕ್ಷನ್ ಎಲ್ಲವೂ ಮುಗಿದಿರುವುದರಿಂದ ನಿಖಿಲ್ ಅವರು ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ನಟನಾಗಿ ಉತ್ತಮ ಭರವಸೆ ಮೂಡಿಸಿದ್ದಾರೆ. ಆದರೆ ಅವರ ಕಳೆದ ಸಿನಿಮಾ ಹೇಳಿಕೊಳ್ಳುವ ಹಾಗೆ ಹಿಟ್ ಆಗಲಿಲ್ಲ. ಹಾಗಾಗಿ ನಿಖಿಲ್ ಅವರು ಈಗ ಒಳ್ಳೆಯ ಸಿನಿಮಾ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದು, ಶೀಘ್ರದಲ್ಲೇ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಕೆಲ ಸಮಯದ ಹಿಂದೆ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಂದುವರೆಸಲಿದ್ದು, ಜೊತೆಗೆ ಹೊಸ ನಿರ್ದೇಶಕರ ಕಥೆಗಳನ್ನು ಕೇಳುತ್ತಿದ್ದಾರಂತೆ. ಇದನ್ನು ಓದಿ..Sharanya Shetty: ಗಣೇಶ್ ಸಿನೆಮಾಗೆ ಪ್ರಮುಖ ರೋಲ್ ಗೆ ಆಯ್ಕೆಯಾದ ಕಿರುತೆರೆ ನಟಿ ಶರಣ್ಯ ಶೆಟ್ಟಿ- ಇವರ ಹಿನ್ನೆಲೆ, ನಿಜಕ್ಕೂ ಈ ನಟಿ ಯಾರು ಗೊತ್ತೆ?

ರೈಡರ್ ಬಳಿಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಧನುಷ್ ಹಾಗೂ ಯದುವೀರ್ ಹೆಸರಿನ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಈ ಎರಡು ಸಿನಿಮಾಗಳ ಚಿತ್ರೀಕರಣ ಆದಷ್ಟು ಬೇಗ ಶುರುವಾಗಲಿದ್ದು, ಜೊತೆಗೆ ಸೌತ್ ಇಂಡಿಯಾದ ಖ್ಯಾತ ನಿರ್ಮಾಣ ಸಂಸ್ಥೆಯ ಜೊತೆಗೆ ನಿಖಿಲ್ (Nikhil Kumaraswamy) ಅವರು ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಬಾರಿ ನಿಖಿಲ್ ಅವರು ವಿಭಿನ್ನವಾದ ಕಥೆ ಇರುವ ಸಿನಿಮಾಗಳನ್ನೇ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಮೂಲಗಳ ಪ್ರಕಾರ ನಿಖಿಲ್ ಅವರ ಮುಂದಿನ ಸಿನಿಮಾ ಸ್ಪೋರ್ಟ್ಸ್ ಬಗ್ಗೆ ಆಗಿರಲಿದೆ..

ನಿಖಿಲ್ ಅವರೊಡನೆ ಸಿನಿಮಾ ಮಾಡುವುದಕ್ಕೆ ದಕ್ಷಿಣದ ಖ್ಯಾತ ನಿರ್ಮಾಪಕರು ಲೈಕಾ ಸಂಸ್ಥೆ, ವೆಂಕಟ್ ನಾರಾಯಣ್, ಮುನಿರತ್ನ ಇವರೆಲ್ಲರು ನಿಖಿಲ್ (Nikhil Kumaraswamy) ಅವರೊಡನೆ ಸಿನಿಮಾ ಮಾಡೋದಕ್ಕೆ ತಯಾರಾಗಿದ್ದಾರೆ. ನಿಖಿಲ್ ಅವರ ಸ್ಪೋರ್ಟ್ಸ್ ಸಿನಿಮಾವನ್ನು ಮನು ನಾಗ್ ಎನ್ನುವ ಹೊಸ ನಿರ್ದೇಶಕ ನಿರ್ದೇಶನ ಮಾಡುತ್ತಿದ್ದಾರೆ.. ಇನ್ನು ಕೆಪಿ ಶ್ರೀಕಾಂತ್ ಹಾಗೂ ಮನೋಹರ್ ನಾಯ್ಡು ಜೊತೆಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಿಖಿಲ್ ಅವರು ಕುತೂಹಲ ಹೊಂದಿದ್ದರು. ಇದನ್ನು ಓದಿ..UPI Safety Tips: ನೀವು UPI ಬಳಸಿ ಪೇ ಮಾಡುವಾಗ ಇವುಗಳನ್ನು ತಪ್ಪಿಸಿ- ಇಲ್ಲದಿದ್ದರೆ ಬಾರಿ ನಷ್ಟ. ಉಷಾರಾಗಿ ಇರಲು ಈ ಟಿಪ್ಸ್ ನೆನಪಿಡಿ.

ನಿರ್ಮಾಪಕರು ಹಾಗೂ ನಿರ್ದೇಶಕರಿಗೂ ಇಷ್ಟವಾದ ಕಾರಣ, ಈ ಸಿನಿಮಾ ಮೊದಲು ಶುರುವಾಗಬಹುದು ಎನ್ನಲಾಗುತ್ತಿದೆ. ಇದನ್ನು ಬಿಟ್ಟು ಮಾಯಾಬಜಾರ್ 2016 ಸಿನಿಮಾ ನಿರ್ದೇಶನ ಮಾಡಿದ್ದ ರಾಧಾಕೃಷ್ಣ ರೆಡ್ಡಿ ಅವರು ಕೂಡ ನಿಖಿಲ್ ಕುಮಾರಸ್ವಾಮಿ ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡಲಿದ್ದಾರಂತೆ. ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ತಮ್ಮದೇ ಆಡ್ಸ್ ಪ್ರೊಡಕ್ಷನ್ ಕಂಪನಿ ಶುರು ಮಾಡಿದ್ದು, ಹೊಸಬರಿಗೆ ಅವಕಾಶ ಕೊಡಬೇಕು ಎಂದುಕೊಂಡಿದ್ದಾರೆ. ಇದನ್ನು ಓದಿ..Nandini: ಪಕ್ಕದ ರಾಜ್ಯ ಕೇರಳದಿಂದ ಹೊರ ಬಂದ ಬೆನ್ನಲ್ಲೇ, ಸೆಡ್ಡು ಹೊಡೆದ ನಂದಿನಿ- ಖಡಕ್ ಹೆಜ್ಜೆ ಇಟ್ಟು ಮಾಡಿದ್ದೇನು ಗೊತ್ತೇ?

Comments are closed.