Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?
Car Insurance: ಒಂದು ಕಾರ್ ಕೊಂಡುಕೊಳ್ಳಬೇಕು ಎನ್ನುವುದು ಎಲ್ಲಾ ಮಧ್ಯಮವರ್ಗದ ಜನರ ಕನಸು. ಈ ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ವರ್ಷ ಕಷ್ಟಪಡುತ್ತಾರೆ. ಕಾರ್ ಕೊಂಡುಕೊಳ್ಳುವ ದಿವಸ ನಿಮಗೆ ಕಾರ್ ಶೋರೂಮ್ ನಲ್ಲಿ ಕಾರ್ ಗೆ ಇನ್ಷುರನ್ಸ್ (Car Insurance) ಮಾಡಿಸಿ ಎಂದು ಶೋರೂಮ್ ಮಾಲೀಕರು ಹೇಳುತ್ತಾರೆ. ಆದರೆ ಶೋರೂಮ್ ನಲ್ಲಿ ಇನ್ಷುರೆನ್ಸ್ (Car Insurance) ಮಾಡಿಸುವುದು ಉತ್ತಮವಲ್ಲ, ಹೆಚ್ಚು ಹಣ ಕಳೆದುಕೊಳ್ಳುತ್ತೀರಿ, ಶೋರೂಮ್ ಮಾಲೀಕರು ಹೇಳುವ ಮಾತನ್ನು ನಂಬಿ ದುಬಾರಿ ಹಣ ತೆತ್ತು ಕಾರ್ ಇನ್ಷುರೆನ್ಸ್ (Car Insurance) ಮಾಡಿಸಿಕೊಳ್ಳಬೇಡಿ. ಕಾರ್ ಕೊಂಡುಕೊಳ್ಳುವಾಗ ಕೆಲವು ಅಂಶಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಂಡರೆ, ದುಡ್ಡು ವೇಸ್ಟ್ ಆಗುವುದನ್ನಿ ತಪ್ಪಿಸಬಹುದು.
ಶೋರೂಮ್ ನವರು ಹೇಳುವ ಮಾತುಗಳು :- ಶೋರೂಮ್ ಮಾಲೀಕರು ಕಾರ್ ಖರೀದಿ ಮಾಡುವ ಗ್ರಾಹಕರಿಗೆ 10 ರಿಂದ 40 ಸಾವಿರ ಅಥವಾ ಆದಕ್ಕಿಂತ ಹೆಚ್ಚಿನ ವಿಮೆ ಮಾಡಿಸಿ 2ತಂದು ಹೇಳಬಹುದು. ಇನ್ಷುರೆನ್ಸ್ (Car Insurance) ಮಾಡಿಸದೆ ಹೋದರೆ, ಕ್ಯಾಶ್ ಲೆಸ್ ಗ್ಯಾರೇಜ್ ಸೌಲಭ್ಯ ಸಿಗುವುದಿಲ್ಲ ಎಂದು ಅವರು ಹೇಳುತ್ತಾರೆ. ಕೆಲವು ಸಾರಿ ಕಾರ್ ಮೊತ್ತದ ಜೊತೆಗೆ ಇನ್ಷುರೆನ್ಸ್ ಹಣವನ್ನು ಕೂಡ ಸೇರಿಸಿರುತ್ತಾರೆ. ಆದರೆ ಈ ಎರಡು ಕೂಡ ತಪ್ಪೇ ಆಗಿದೆ, ಯಾವುದೇ ಗ್ಯಾರೇಜ್ ಕ್ಯಾಶ್ ಲೆಸ್ ಸೌಲಭ್ಯವನ್ನು ನಿರಾಕರಿಸುವುದಿಲ್ಲ. ಹಾಗೂ ಇನ್ಷುರೆನ್ಸ್ (Car Insurance) ಮೊತ್ತವನ್ನು ಕಾರ್ ನ ಮೊತ್ತದ ಜೊತೆಗೆ ಸೇರಿಸುವ ಹಾಗಿಲ್ಲ. ಇದನ್ನು ಓದಿ..BMW I7 M70: ಮಿನಿ ಥಿಯೇಟರ್, ಮಸಾಜ್ ಮಾಡುವ ಎಲೆಕ್ಟ್ರಿಕ್ ಕಾರು – ಮಸ್ತ್ ಆಯ್ಕೆಗಳು ಇರುವ ಮಸ್ತ್ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
ವಾರಂಟಿ ಕೊಡುವುದು ಶೋರೂಮ್ ಅಲ್ಲ ಇನ್ಷುರೆನ್ಸ್ ಕಂಪನಿ :- ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ಕಾರ್ ಇನ್ಷುರೆನ್ಸ್ (Car Insurance) ಗಾಗಿ ಕೆಲವು ನಿಯಮಗಳನ್ನು ಮಾಡಿದೆ. ಕ್ಯಾಶ್ ಲೆಸ್ ಗ್ಯಾರೇಜ್ ಸೌಲಬ್ಯವನ್ನು ಯಾವ ಶೋರೂಮ್ ಸಹ ನಿರಾಕರಿಸುವ ಹಾಗಿಲ್ಲ ಎಂದು ತಿಳಿಸಿದೆ. ಹಾಗಾಗಿ ಶೋರೂಮ್ ಮಾಲೀಕರ ಮತ್ತು ವಾರಂಟಿಗೆ ಯಾವುದೇ ಸಂಬಂಧ ಇಲ್ಲ. ವಾರಂಟಿ ಕೊಡುವುದು ಇನ್ಷುರೆನ್ಸ್ ಕಂಪನಿ.
ಇನ್ಷುರೆನ್ಸ್ ಯಾಕೆ ದುಬಾರಿ ಆಗುತ್ತದೆ? :- ಶೋರೂಮ್ ನಲ್ಲಿ ಮಾರಾಟ ಆಗುವ ವಿಮೆಗಳ ಮೇಲೆ ಕಮಿಷನ್ ಆಧಾರವಿರುತ್ತದೆ. ಕಮಿಷನ್ ಇರುವುದರಿಂದ ಶೋರೂಮ್ ಗಳಲ್ಲಿ ಇನ್ಷುರೆನ್ಸ್ (Car Insurance) ಬೆಲೆ ಹೆಚ್ಚು. ಹಾಗೆಯೇ ಇನ್ಷುರೆನ್ಸ್ ಜೊತೆಗೆ ಶೋರೂಮ್ ನಲ್ಲಿ ಹಲವು ಆದ್ ಆನ್ ಫೀಚರ್ ಗಳನ್ನು ಸಹ ಕೊಡಲಾಗುತ್ತದೆ. ಅದು ಬೇಕಾಗುವುದಿಲ್ಲ. ಹಾಗಾಗಿ ನೀವು ಶೋರೂಮ್ ನಲ್ಲಿ ವಿಮೆ ಖರೀದಿ ಮಾಡುಗ ಅಗತ್ಯವಿಲ್ಲ. ಇದನ್ನು ಓದಿ..New Bike: ರಾಯಲ್ ಎನ್ ಫೀಲ್ಡ್ ಗೆ ಬೆವರಿಳಿಸುತ್ತಿರುವ ಹೊಸ ಬೈಕ್ – ಈ ಬೈಕ್ ವಿಶೇಷತೆ ನೋಡಿದರೆ ಇಂದೇ ಖರೀದಿ ಮಾಡುತ್ತೀರಿ.
ಇನ್ಷುರೆನ್ಸ್ ಗೆ ಎಷ್ಟು ವೆಚ್ಚ ಆಗುತ್ತದೆ ಎಂದರೆ :- ಅಂದಾಜು ಮಾಡುವುದಾದರೆ, 1.6 ಲೀಟರ್ ಇಂಜಿನ್ ಸೆಡಾನ್ ಕಾರ್ ಗೆ ಶೋರೂಮ್ ವಿಮೆ ₹35,000 ಇರುತ್ತದೆ, ಇದೇ ಇನ್ಷುರೆನ್ಸ್ ಆನ್ಲೈನ್ ನಲ್ಲಿ ₹26,000 ಇರುತ್ತದೆ. 2.2ಲೀಟರ್ ಇಂಜಿನ್ ಇರುವ SUV ಗೆ ಶೂರೂಮ್ ಇನ್ಷುರೆನ್ಸ್ (Car Insurance) ₹60 ರಿಂದ ₹70,000 ಇರುತ್ತದೆ. ಇದೇ ಆನ್ಲೈನ್ ನಲ್ಲಿ ₹40 ಇಂದ ₹45,000 ಇರುತ್ತದೆ.
ಕಡಿಮೆ ಬೆಲೆಯ ಪಾಲಿಸಿ ಹೇಗೆ ಖರೀದಿ ಮಾಡುವುದು? :- ಈಗ ಅನೇಕ ಇನ್ಷುರೆನ್ಸ್ (Car Insurance) ಕಂಪನಿಗಳು ಕಾರ್ ಇನ್ಷುರೆನ್ಸ್ ಅನ್ನು ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದೆ. ಸಾಕಷ್ಟು ಕಂಪೆನಿಗಳ ವೆಬ್ಸೈಟ್, ಅಪ್ಲಿಕೇಶನ್ ಸಹ ಇದೆ. ನಿಮ್ಮ ಕಾರ್ ಡೀಟೇಲ್ಸ್ ಹಾಕಿ ನೀವು ಯಾವ್ಯಾವ ಕಂಪನಿಯಲ್ಲಿ ವಿಮೆ ಹೇಗಿದೆ ಎಂದು ಚೆಕ್ ಮಾಡಿ ಹೋಲಿಸಿ ನೋಡಿ.. ಅವುಗಳ ಪೈಕಿ ಕಡಿಮೆ ಮೊತ್ತದ ಪಾಲಿಸಿ ಆಯ್ಕೆ ಮಾಡಿ ಕೊಳ್ಳಬಹುದು. ಹಾಗೆಯೇ ನಿಮಗೆ ಬೇಕಾದ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ಓದಿ..Google Pay: ಗೂಗಲ್ ಪೇ ಬಳಕೆದಾರರಿಗೆ ಬಂಪರ್ ಆಫರ್ – ಹೀಗೆ ಮಾಡಿದರೆ ಅಕೌಂಟ್ ಗೆ 25000 ಬೀಳುತ್ತದೆ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ.
Comments are closed.