Fast Tag: ಗೂಗಲ್ ಪೇ ಅಥವಾ ಫೋನ್ ಪೇ ಗಳನ್ನೂ ಬಳಸಿ, ನಿಮ್ಮ ಫಾಸ್ಟ್ ಟ್ಯಾಗ್ ನಲ್ಲಿರುವ ಹಣವನ್ನು ಚೆಕ್ ಮಾಡಿ.
Fast Tag: ಟೋಲ್ ಗಳಲ್ಲಿ ವಾಹನಗಳು ಟೋಲ್ ಹಣ ಪಾವತಿ ಮಾಡಲು ಕಾಯಬೇಕಾಗುತ್ತದೆ ಎನ್ನುವ ಕಾರಣಕ್ಕೆ ಫಾಸ್ಟ್ಯಾಗ್ ಸೇವೆಯನ್ನು ಸರ್ಕಾರ ಜಾರಿಗೆ ತಂದಿತು. ಈ ಸೇವೆ 2016ರಿಂದ ಲಭ್ಯವಿದೆ, ವಾಹನ ಸವಾರರು ಸಹ ಹೆಚ್ಚಾಗಿ ಬಳಸುತ್ತಿದ್ದಾರೆ. ಫಾಸ್ಟ್ಯಾಗ್ ಸೇವೆಯ ಮೂಲಕ ನೀವು ಟೋಲ್ ಗಳಲ್ಲಿ ನಿಂತು ಹಣ ಪಾವತಿ ಮಾಡುವ ಅವಶ್ಯಕತೆ ಇಲ್ಲ, ನಿಮ್ಮ ಅಕೌಂಟ್ ಇಂದ ನೇರವಾಗಿಯೇ ಹಣ ಡಿಡಕ್ಟ್ ಆಗುತ್ತದೆ. ಇದೊಂದು ಆಟೊಮ್ಯಾಟಿಕ್ ವ್ಯವಸ್ಥೆ ಆಗಿದೆ..
ಈ ಸೇವೆಯಿಂದ ನಿಮ್ಮ ಅಕೌಂಟ್ ಇಂದ ಹಣವು ಡೈರೆಕ್ಟ್ ಆಗಿ ಡೆಬಿಟ್ ಆಗುವುದರಿಂದ, ನೀವು ಟೋಲ್ ಗಳಲ್ಲಿ ಹಣ ಕಟ್ಟುವುದಕ್ಕೆ ಕಾಯಬೇಕಿಲ್ಲ. ಈ ಫಾಸ್ಟ್ಯಾಗ್ ಸೇವೆ ಕೆಲಸ ಮಾಡುವುದು, ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಆಧಾರದ ಮೇಲೆ, ಈ ಸೇವೆಗಾಗಿ ನಿಮ್ಮ ವಾಹನದ ವಿಂಡ್ ಸ್ಕ್ರೀನ್ ಗೆ ಒಂದು ಟ್ಯಾಗ್ ಅನ್ನು ಅಂಟಿಸಲಾಗಿರುತ್ತದೆ. ಆ ಟ್ಯಾಗ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಲಾಗುತ್ತದೆ. ಟೋಲ್ ಪ್ಲಾಜಾ ಗಳ ಹತ್ತಿರ ನಿಮ್ಮ ಫಾಸ್ಟ್ ಟ್ಯಾಗ್ ಇರುವ ಕಾರ್ ಬಂದಾಗ, ನಿಮ್ಮ ಕಾರ್ ಮೇಲಿರುವ ಟ್ಯಾಗ್ ಅನ್ನು ಸ್ಕ್ಯಾನರ್ ಗಳು ಗುರುತಿಸುತ್ತದೆ. ಇದನ್ನು ಓದಿ..Car Tips: ಮಳೆಯಲ್ಲಿ ಕಿಟಕಿ ತೆರೆದಾಗ ಸೀಟುಗಳು ಒದ್ದೆಯಾಗಿತ್ತೆ? ಇವುಗಳನ್ನು ಬಹಳ ಸುಲಭವಾಗಿ ಒಣಗಿಸುವ ಟ್ರಿಕ್ ನಿಮಗೆ ಗೊತ್ತೇ??
ಬಳಿಕ ನೀವು ಲಿಂಕ್ ಮಾಡಿರುವ ಬ್ಯಾಂಕ್ ಅಕೌಂಟ್ ಅಥವಾ ಪ್ರೀಪೇಯ್ಡ್ ಕಾರ್ಡ್ ಇಂದ, ಟೋಲ್ ಹಣವನ್ನು ಆಟೊಮ್ಯಾಟಿಕ್ ಡೆಬಿಟ್ ಮಾಡಲಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಈ ಕೆಲಸ ಆಗುತ್ತದೆ. ಇಲ್ಲಿ ನೀವು ಬೇರೆ ಊರುಗಳಿಗೆ ಪ್ರಯಾಣ ಮಾಡುವುದಕ್ಕಿಂತ ಮೊದಲು ನಿಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್ ಎಷ್ಟಿದೆ ಎನ್ನುವುದನ್ನು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು, ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ನೀವು, ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಲ್ಲಿ ಸಹ ಚೆಕ್ ಮಾಡಬಹುದು. ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
ಗೂಗಲ್ ಪೇ ಮೂಲಕ ಚೆಕ್ ಮಾಡುವುದು ;-
*ಮೊಬೈಲ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿ.
*ರೀಚಾರ್ಜ್ ಅಂಡ್ ಬಿಲ್ ಪೇಮೆಂಟ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
*ಇಲ್ಲಿ ಫಾಸ್ಟ್ಯಾಗ್ ರೀಚಾರ್ಜ್ ಸೆಲೆಕ್ಟ್ ಮಾಡಿ.
*ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ.
*ನಿಮ್ಮ ವಾಹನದ ರಿಜಿಸ್ಟ್ರೇಶನ್ ನಂಬರ್ ಹಾಕಿ.
*ವ್ಯೂ ಬ್ಯಾಲೆನ್ಸ್ ಆಯ್ಕೆ ಸೆಲೆಕ್ಟ್ ಮಾಡಿ.
ಫೋನ್ ಪೇ ಮೂಲಕ ಚೆಕ್ ಮಾಡುವುದು :-
*ಮೊದಲಿಗೆ ಫೋನ್ ಪೇ ಅಪ್ಲಿಕೇಶನ್ ಓಪನ್ ಮಾಡಿ.
*ರೀಚಾರ್ಜ್ ಆಪ್ಶನ್ ಸೆಲೆಕ್ಟ್ ಮಾಡಿ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.
*ಫಾಸ್ಟ್ಯಾಗ್ ಆಯ್ಕೆ ಸೆಲೆಕ್ಟ್ ಮಾಡಿ.
*ನಿಮ್ಮ ವಾಹನದ ರಿಜಿಸ್ಟ್ರೇಶನ್ ನಂಬರ್ ಸೆಲೆಕ್ಟ್ ಮಾಡಿ.
*ವ್ಯೂ ಬ್ಯಾಲೆನ್ಸ್ ಆಪ್ಶನ್ ಆಯ್ಕೆ ಮಾಡಿ.
ಪೇಟಿಎಂ ಮೂಲಕ ಚೆಕ್ ಮಾಡುವುದು :-
*ಮೊದಲಿಗೆ ಪೇಟಿಎಂ ಅಪ್ಲಿಕೇಶನ್ ಓಪನ್ ಮಾಡಿ.
*ಪೇ ಬಿಲ್ಸ್ ಆಪ್ಶನ್ ಸೆಲೆಕ್ಟ್ ಮಾಡಿ.
*ಫಾಸ್ಟ್ಯಾಗ್ ಆಪ್ಶನ್ ಸೆಲೆಕ್ಟ್ ಮಾಡಿ.
*ಈಗ ನಿಮ್ಮ ವಾಹನದ ರಿಜಿಸ್ಟ್ರೇಶನ್ ನಂಬರ್ ಹಾಕಿ.
*ವ್ಯೂ ಬ್ಯಾಲೆನ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಈ ರೀತಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡಿ, ದೂರ ಪ್ರಯಾಣದ ವೇಳೆ ತೊಂದರೆ ಆಗುವುದನ್ನು ತಪ್ಪಿಸಿ. ಇದನ್ನು ಓದಿ..2000 Notes: ಎಲ್ಲಾ 2000 ನೋಟುಗಳು ಬ್ಯಾಂಕ್ ಗೆ ವಾಪಾಸ್ ಬರುತ್ತಿವೆ- ಇದರಿಂದ ಪ್ರತಿಯೊಬ್ಬರಿಗೂ ಲಾಭ. ಅದೇಗೆ ಗೊತ್ತೇ??
Comments are closed.