2000 Notes: ಎಲ್ಲಾ 2000 ನೋಟುಗಳು ಬ್ಯಾಂಕ್ ಗೆ ವಾಪಾಸ್ ಬರುತ್ತಿವೆ- ಇದರಿಂದ ಪ್ರತಿಯೊಬ್ಬರಿಗೂ ಲಾಭ. ಅದೇಗೆ ಗೊತ್ತೇ??
2000 Notes: ಇತ್ತೀಚೆಗೆ ಆರ್.ಬಿ.ಐ (RBI) ತೆಗೆದುಕೊಂಡ ಹೊಸ ನಿರ್ಧಾರ ಜನರಿಗೆ ಶಾಕ್ ನೀಡಿತ್ತು. ಅದೇನೆಂದರೆ, ₹2000 ನೋಟ್ (2000 Notes) ಗಳನ್ನು ಬ್ಯಾಂಕ್ ಗೆ ಹಿಂದಿರುಗಿಸಬೇಕು, ಆ ನೋಟ್ ಗಳನ್ನು ಬಳಕೆ ಮಾಡಲಾಗುವುದಿಲ್ಲ ಎಂದು ಹೇಳಲಾಯಿತು. ಇದರಿಂದ ಜನರು ಕೋಪಗೊಂಡಿದ್ದೇನೋ ನಿಜ, ಆದರೆ ನೋಟ್ ಹಿಂಪಡೆಯುವಿಕೆ ಇಂದ ಜನರಿಗೆ ಲಾಭವಾಗುತ್ತಿದೆ. ಅದು ಹೇಗೆ ಸಾಧ್ಯ? ಎಂದು ಯೋಚಿಸುತ್ತಿದ್ದೀರಾ? ಏನೆಲ್ಲಾ ಪ್ರಯೋಜನವಿದೆ ಎಂದು ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..
2000 ನೋಟ್ ಗಳು (2000 Notes) ಚಲಾವಣೆ ಆಗುವುದಿಲ್ಲ ಅವುಗಳನ್ನು ಬ್ಯಾಂಕ್ ಗೆ ವಾಪಸ್ ಕೊಡಬೇಕು ಎಂದು ಹೇಳಿದ ನಂತರ, ಬಹಳಷ್ಟು ಜನರು ಬ್ಯಾಂಕ್ ಗೆ ಬಂದು ನೋಟ್ ಗಳನ್ನು ಹಿಂದಿರುಗಿಸುತ್ತಿದ್ದಾರೆ, ಹಾಗಾಗಿ ಬ್ಯಾಂಕ್ ಗಳಲ್ಲಿ ಆಗುತ್ತಿರುವ ಠೇವಣಿ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಿಂದಿನ ಆರು ವರ್ಷಗಳಿಗಿಂತ ಠೇವಣಿ (Deposits) ಪರಿಣಾಮ ಈಗ ಜಾಸ್ತಿ ಆಗಿದ್ದು, ಆರು ವರ್ಷಗಳಲ್ಲಿ ಅತಿಹೆಚ್ಚು ಠೇವಣಿ ಆಗಿರುವುದು ಈಗ ಎನ್ನಲಾಗಿದೆ. ಒಟ್ಟಾರೆಯಾಗಿ 191.6 ಲಕ್ಷ ಕೋಟಿ ರೂಪಾಯಿಗಳು ಈಗ ಠೇವಣಿ ಆಗಿದೆ. ಒಟ್ಟಾರೆಯಗಿ 3.62 ಲಕ್ಷಕೋಟಿ ರೂಪಾಯಿಯ ಪೈಕಿ, 4/3 ಅಷ್ಟು 2000 ನೋಟ್ (2000 Notes) ಗಳು ಬ್ಯಾಂಕ್ ಗೆ ಹಿಂದಿರುಗಿವೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Bengaluru News: ಆಂಜನೇಯನಿಗೆ ನಮಿಸುತ್ತಾ ತನ್ನ ಪ್ರಾಣ ಬಿಟ್ಟ ಕೋತಿ- ಬೆಂಗಳೂರಿನಲ್ಲಿ ಪವಾಡ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ನೀಡಿರುವ ಮಾಹಿತಿ ಅನುಸಾರ, 85%ನಷ್ಟು ₹2000 ರೂಪಾಯಿಯ ನೋಟ್ (2000 Notes) ಗಳನ್ನು ಜನರು ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡಿದ್ದಾರೆ. ಇನ್ನುಳಿದ ನೋಟ್ ಗಳನ್ನು ಬೇರೆ ಮುಖ ಬೆಲೆ ಇರುವ ನೋಟ್ ಗಳ ಜೊತೆಗೆ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈಗ ಠೇವಣಿಗಳು 13%, ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. 191.6 ಲಕ್ಷ ಕೋಟಿ ತಲುಪಿದೆ ಎಂದು ಆರ್.ಬಿ.ಐ ಹಿರಿಯ ನಿರ್ದೇಶಕ ಸಂಜಯ್ ಅಗರ್ವಾಲ್ (Sanjay Agarwal) ತಿಳಿಸಿದ್ದಾರೆ.
ನಮಗೆಲ್ಲ ಗೊತ್ತಿರುವ ಹಾಗೆ , 2000 ನೋಟ್ (2000 Notes) ಗಳನ್ನು ವಾಪಸ್ ಪಡೆಯುವುದಾಗಿ ಆರ್.ಬಿ.ಐ ಆದೇಶ ನೀಡಿದ ಬಳಿಕ ಠೇವಣಿ ಮಾಡುತ್ತಿರುವ ಹಣ ಜಾಸ್ತಿಯಾಗಿದೆ. ಕೇವಲ 15 ದಿನಗಳಲ್ಲಿ 13% ಅಷ್ಟು ಠೇವಣಿ ಹೆಚ್ಚಾಗಿದೆ. ಹಿಂದಿನ 12 ತಿಂಗಳುಗಳಲ್ಲಿ ಬ್ಯಾಂಕ್ ಠೇವಣಿಗಳು 22 ಲಕ್ಷ ಕೋಟಿ ಇಂದ 185.1ಲಕ್ಷ ಕೋಟಿಗೆ ಏರಿಕೆ ಆಗಿದೆ. 2000 ರೂಪಾಯಿಯ ನೋಟ್ ಗಳನ್ನು ಆರ್.ಬಿ.ಐ ವಾಪಸ್ ಪಡೆಯುವುದಾಗಿ ತಿಳಿಸಿದ್ದು, ಈ ವರ್ಷ ಮೇ 19ರಂದು. ಅಂದಿನಿಂದ ಇಷ್ಟೆಲ್ಲಾ ಏರಿಕೆ ಆಗಿದೆ.. ಮೇ ತಿಂಗಳಿನಲ್ಲಿ ಆರ್.ಬಿ.ಐ 2000 ರೂಪಾಯಿಯ ನೋಟ್ ಗಳನ್ನು ವಾಪಸ್ ಪಡೆಯುವುದಾಗಿ ಹೇಳಿದ ನಂತರ ಬ್ಯಾಂಕ್ ನಲ್ಲಿ ಠೇವಣಿ ಮಾಡುವ ಮೊತ್ತ ಹೆಚ್ಚಾಗುತ್ತಲೇ ಇದೆ. ಇದನ್ನು ಓದಿ..Kannada News:ಬೆಲೆ ಏರಿಕೆಯಿಂದ ತತ್ತರಿಸಿರುವ ಬೆಂಗಳೂರಿನ ಜನತೆಗೆ ಮತ್ತೊಂದು ಬಿಗ್ ಶಾಕ್- ಏನು ಗೊತ್ತೇ? ಪಾಪ ಇವರ ಪಾಡು ಯಾರಿಗೂ ಬೇಡ.
ಸಾಲ ಹಾಗೂ ಠೇವಣಿ ಈ ಎರಡು ವಿಷಯದಲ್ಲಿ ಈಗ ದೊಡ್ಡ ವ್ಯತ್ಯಾಸ ಕಂಡುಬರುತ್ತಿದೆ ಎಂದು ಹೇಳಲಾಗಿದೆ. 2022ರಲ್ಲಿ ಸಾಲ ಮತ್ತು ಠೇವಣಿ ಇವೆರಡರ ನಡುವಿನ ವ್ಯತ್ಯಾಸ 8.75% ಇತ್ತು. ಆದರೆ 2023ರ ಜೂನ್ ನಲ್ಲಿ 3.26% ಕಡಿಮೆ ಆಗಿದೆ. ಹಾಗೆಯೇ ಇದರಿಂದ ಗ್ರಾಹಕರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ, ಬ್ಯಾಂಕ್ ಗಳಲ್ಲಿ ಈಗ ಹಣದ ವಹಿವಾಟು ಜಾಸ್ತಿಯಾಗಿ, ಲಾಭ ಹೆಚ್ಚಾಗಿರುವುದರಿಂದ ಅದನ್ನು ಗ್ರಾಹಕರಿಗೆ ಬಡ್ಡಿ ರೂಪದಲ್ಲಿ ಕೊಡಲಾಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೊಂದೇ ಅಲ್ಲದೆ ಮುಂದಿನ ತಿಂಗಳಿನಿಂದ ಸಾಲದ ಮೇಲೆ ಬಡ್ಡಿದರ ಕಡಿಮೆ ಆಗುತ್ತದೆ. ಇದನ್ನು ಓದಿ..Car Tips: ಮಳೆಯಲ್ಲಿ ಕಿಟಕಿ ತೆರೆದಾಗ ಸೀಟುಗಳು ಒದ್ದೆಯಾಗಿತ್ತೆ? ಇವುಗಳನ್ನು ಬಹಳ ಸುಲಭವಾಗಿ ಒಣಗಿಸುವ ಟ್ರಿಕ್ ನಿಮಗೆ ಗೊತ್ತೇ??
Comments are closed.