ಯುವ ರತ್ನ ಟ್ರೈಲರ್ ನೋಡಿ ಬಾಲಿವುಡ್ ಸಂಜಯ್ ದತ್ ಷಾಕಿಂಗ್ ಹೇಳಿಕೆ. ಹೇಳಿದ್ದೇನು ಗೊತ್ತೆ??
ನಮಸ್ಕಾರ ಸ್ನೇಹಿತರೇ ಇದೀಗ ಕನ್ನಡದ ಸಿನಿಮಾಗಳ ಮಾರುಕಟ್ಟೆ ಕನ್ನಡದ ಗಡಿ ದಾಟಿ ಹೊರಗಿನ ಭಾಷೆಗಳಲ್ಲಿ ಸದ್ದು ಮಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದ ಇದೆ, ಕನ್ನಡದ ಸ್ಟಾರ್ ನಟರ ಚಿತ್ರಗಳು ಇದೀಗ ಇತರ ಭಾಷೆಗಳಲ್ಲೂ ಕೂಡ ರಿಲೀಸ್ ಆಗುತ್ತಿದ್ದು, ಅಲ್ಲಿಯೂ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳನ್ನು ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ. ಇತ್ತೀಚೆಗೆ ಪೊಗರು ಹಾಗೂ ರಾಬರ್ಟ ಸಿನಿಮಾಗಳು ತೆಲುಗಿನಲ್ಲಿ ಕೂಡ ಮೋಡಿ ಮಾಡಿದ್ದವು.
ಇನ್ನು ಇದೀಗ ಕನ್ನಡದ ಸ್ಟಾರ್ ನಟರಾಗಿರುವ ಪುನೀತ್ ರಾಜಕುಮಾರ್ ಅವರು ನಟನೆ ಮಾಡಿರುವ ಯುವ ರತ್ನ ಸಿನಿಮಾ ಕೂಡ ಇತರ ಭಾಷೆಗಳಲ್ಲಿ ಸದ್ದು ಮಾಡಲು ಆರಂಭಿಸಿದೆ, ಇದೀಗ ಬಿಡುಗಡೆ ಯಾಗಿರುವ ಟ್ರೈಲರ್ ಕೂಡ ಬಹಳ ಅತ್ಯುತ್ತಮವಾದ ಪ್ರತಿಕ್ರಿಯೆ ಯನ್ನು ಪ್ರೇಕ್ಷಕರಿಂದ ಪಡೆದು ಕೊಂಡಿದೆ.
ಕಾಲೇಜಿನ ಸ್ಟೂಡೆಂಟ್, ರಗ್ಬಿ ಆಟಗಾರ ಹಾಗೂ ಖಡಕ್ ಆಫೀಸರ್ ಆಗಿ ಮಿಂಚಿರುವ ಪುನೀತ್ ರಾಜಕುಮಾರ್ ರವರ ಟ್ರೇಲರ್ ನಲ್ಲಿ ಎಲ್ಲರಿಗೂ ಭರವಸೆ ಮೂಡಿಸುವಂತಹ ಕೆಲಸ ಮಾಡಿದ್ದಾರೆ, ಈ ಟ್ರೈಲರ್ ನೋಡಿರುವ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸಂಜಯ್ ದತ್ ರವರು ಪ್ರತಿಕ್ರಿಯೆ ನೀಡಿ ಅದ್ಭುತವಾಗಿದೆ, ಇಡೀ ಯುವ ರತ್ನ ತಂಡಕ್ಕೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿ ಯುವ ರತ್ನ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ, ಟೀಸರ್ ಬಿಡುಗಡೆಯಾದ ಸಮಯದಲ್ಲಿಯೂ ಕೂಡ ಸಂಜಯ್ ದತ್ ರವರು ಪ್ರತಿಕ್ರಿಯೆ ನೀಡಿ ಅದ್ಭುತವಾಗಿದೆ ಎಂದಿದ್ದರು, ಇವನ ಈ ನಡೆ ಇದೀಗ ಅಭಿಮಾನಿಗಳ ಸಂತಸವನ್ನು ಮತ್ತಷ್ಟು ಹೆಚ್ಚು ಮಾಡಿದೆ.
Comments are closed.